Monday, July 7, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಚಿಕ್ಕಮಗಳೂರು : ಕಾಫಿ ತೋಟದಲ್ಲಿ ಕಾಡುಕೋಣ ದಾಳಿಗೆ ಕೃಷಿಕ ಬಲಿ

ಚಿಕ್ಕಮಗಳೂರು : ಕಾಫಿ ತೋಟದಲ್ಲಿ ಕಾಡುಕೋಣ ದಾಳಿಗೆ ಕೃಷಿಕ ಬಲಿ

Chikkamagaluru: Farmer killed in wild buffalo attack in coffee plantation

ಚಿಕ್ಕಮಗಳೂರು, ಜು.7- ಕಾಡುಕೋಣ ದಾಳಿಗೆ ರೈತನೊಬ್ಬ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ನಡೆದಿದೆ.ದುರ್ಗದಹಳ್ಳಿ ವರ್ತೆಮನೆ ನಿವಾಸಿ ಡಿ.ವಿ. ರಮೇಶ್ ಗೌಡ (52) ಮೃತಪಟ್ಟ ರೈತ.

ಅವರು ತಮ್ಮ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಮೀಪದ ಹಲಗಡಕ ಎಂಬಲ್ಲಿ ಕಾಡುಕೋಣ ಹಿಂಬದಿಯಿಂದ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಆ ಸಮಯದಲ್ಲಿ ತೋಟದಲ್ಲಿ ಅವರು ಒಬ್ಬರೇ ಇದ್ದ ಕಾರಣ ಸಹಾಯಕ್ಕೆ ತಡವಾಯಿತು.

ರಮೇಶ್ ಅವರು ನೋವಿನಿಂದ ಕೂಗಿದ ಶಬ್ದ ಕೇಳಿದ ತಕ್ಷಣ ಪಕ್ಕದ ಎಸ್ಟೇಟ್‌ನ ಕಾರ್ಮಿಕರು ಮತ್ತು ರೈಟರ್ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಕ್ಕೆ ಮುಂದಾದರು. ಆದರೆ ತೋಟದ ದಾರಿ ಕಷ್ಟಕರವಾಗಿದ್ದು, ಅವರನ್ನು ಮನೆಗೆ ತರುವಲ್ಲಿಯೇ ಸುಮಾರು ಒಂದು ಗಂಟೆ ವ್ಯರ್ಥವಾಯಿತು. ನಂತರ ತೀವ್ರ ರಕ್ತಸ್ರಾವದಿಂದ ಗಾಯಗೊಂಡ ರಮೇಶ್ ಅವರನ್ನು ಕಳಸ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ.ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮಸ್ಥರ ಆಗ್ರಹ :
ಕಾಡು ಪ್ರಾಣಿಗಳ ದಾಳಿಗೆ ಶಾಶ್ವತ ಪರಿಹಾರ ನೀಡುವಂತೆ, ತೋಟಗಳಿಗೆ ರಕ್ಷಣಾತ್ಮಕ ತಡೆಗೋಡೆ, ಅರಣ್ಯ ಇಲಾಖೆಯ ಗಸ್ತು ಬಲವರ್ಧನೆ, ಹಾಗೂ ತ್ವರಿತ ಪರಿಹಾರ ಧನ ನೀಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

RELATED ARTICLES

Latest News