ಬೆಂಗಳೂರು,ನ.18- ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರ ಆಯ್ಕೆಯಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಫಲಿತಾಂಶ ಬಂದು ಆರು ತಿಂಗಳ ನಂತರ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ಬಿಜೆಪಿ ಪ್ರಜಾಪ್ರಭುತ್ವಕ್ಕೆ ಗೌರವ ಕೊಟ್ಟಿದೆ. ಆದರೆ ಅವರದೇ ಪಕ್ಷದ ಶಾಸಕರು ಮಾಡಿರುವ ಆರೋಪಗಳಿಗೆ ಬಿಜೆಪಿ ಸಾರ್ವಜನಿಕವಾಗಿ ಉತ್ತರ ಕೊಡಬೇಕು ಎಂದರು.
ನಮ್ಮ ಸರ್ಕಾರವನ್ನು ಹೇಗೆ? ಕಿತ್ತೊಗೊಯ್ಯುತ್ತಾರೆ. ಅವರಲ್ಲಿರುವ ಭಿನ್ನತೆಯನ್ನು ಸರಿಪಡಿಸಿಕೊಂಡು ಜೋಡಿಸಿಕೊಳ್ಳಲಿ ಎಂದು ಪ್ರಿಯಾಂಕ ಖರ್ಗೆ ತಿರುಗೇಟು ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ ಅಭಿನಂದಿಸುತ್ತೇನೆ. ಈ ಆಯ್ಕೆಯಿಂದ ಕಾಂಗ್ರೆಸ್‍ಗೆ ಖುಷಿಯಾಗಿದೆ. ಆದರೆ ಬಿಜೆಪಿಗೆ ಸಂತೋಷವಿಲ್ಲ. ಚಾಪ್ಟರ್-2 ಸುಲಭವಾಗಲಿದೆ ಎಂದರು.
ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ
ಈ ಹಿಂದೆ ಅಶೋಕ್ ಅವರಿಗೆ ಮಂಡ್ಯದಿಂದ ಗೋಬ್ಯಾಕ್ ಎಂಬ ಪೆÇೀಸ್ಟರ್ ಹಾಕಲಾಗಿತ್ತು. ಮತ್ತೆ ಬಿಜೆಪಿ ಕಚೇರಿಯಿಂದ ಗೋಬ್ಯಾಕ್ ಅಶೋಕ್ ಪೋಸ್ಟರ್ ಬರಬಹುದು ಎಂದು ಅವರು ವ್ಯಂಗ್ಯವಾಡಿದರು.
ಬಿಜೆಪಿಯನ್ನು ಒಂದು ಕುಟುಂಬದ ಪಕ್ಷವಾಗಲು ಬಿಡುವುದಿಲ್ಲ. ಬೆಟ್ಟದ ಹುಲಿ ಮಾಡಬೇಡಿ, ರಾಜ್ಯಾಧ್ಯಕ್ಷ ಸ್ಥಾನದ ಖರೀದಿಗೆ ಬಂದಿದ್ದರು ಎಂಬೆಲ್ಲ ಹೇಳಿಕೆಯನ್ನು ಅವರದೇ ಪಕ್ಷದವರು ನೀಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಎಷ್ಟು ಕೊಟ್ಟರು? ಬಿಜೆಪಿಯಲ್ಲಿ ಎಲ್ಲವೂ ಮಾರಾಟಕ್ಕಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಬಗ್ಗೆ ಕೊಡುವ ಗಮನವನ್ನು ಜೆಡಿಎಸ್ ಶಾಸಕರ ಬಗ್ಗೆ ಕಾಳಜಿ ತೋರಿದರೆ 19 ಶಾಸಕರು ಹತ್ತು ಆಗುವುದಿಲ್ಲ. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ವಿವೇಕಾನಂದ ಎಂಬುದು ಕಾಮನ್ ಹೆಸರು. ವರುಣಾ ಕ್ಷೇತ್ರದ ಬಿಇಒ ಒಬ್ಬರ ಹೆಸರು ಕೂಡ ಆಗಿದೆ. ಕುಮಾರಸ್ವಾಮಿ ಅವರು ವರ್ಗಾವಣೆ ದಂಧೆ ಬಗ್ಗೆ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಪೆನ್ ಡ್ರೈವ್‍ನಲ್ಲಿನ ಮಾಹಿತಿಯನ್ನು ಏಕೆ ಪ್ರದರ್ಶಿಸಲಿಲ್ಲ. ಕೇವಲ ತಿರುಚುವುದರಲ್ಲೇ ಏನು ಉಪಯೋಗ?
ಕರೆಂಟ್ ವಿಚಾರಕ್ಕೆ ತಪ್ಪು ಮಾಡಿ ದಂಡ ಕಟ್ಟಿದ್ದಾರೆ. ಅದನ್ನು ವಿಷಯಾಂತರ ಮಾಡಲು ಯತೀಂದ್ರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ವರ್ಗಾವಣೆ ದಂಧೆ ಆರೋಪಕ್ಕೆ ಕುಮಾರಸ್ವಾಮಿ ಬಳಿ ದಾಖಲೆಗಳಿದ್ದರೆ ನೀಡಲಿ, ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಸಿದ್ದ. ಅದನ್ನು ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವುದರಿಂದ ಏನು ಪ್ರಯೋಜನ ಎಂದರು.
ವಿಶ್ವಕಪ್ ಫೈನಲ್: ಪ್ರಧಾನಿ ಮೋದಿ, ಅಮಿತಾಬ್ ಬಚ್ಚನ್, ರಜನಿಕಾಂತ್ ಸೇರಿ ಕ್ರಿಕೆಟ್ ದಿಗ್ಗಜರು ಪಂದ್ಯ ವೀಕ್ಷಣೆ
ಸಚಿವ ಜಮೀರ್ ಅಹಮ್ಮದ್ ಖಾನ್ ಅವರು, ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್‍ಗೆ ಬಿಜೆಪಿಯವರು ತಲೆ ಬಾಗಿಸುತ್ತಾರೆ ಎಂದು ಹೇಳಿರುವುದು ಸಭಾಧ್ಯಕ್ಷರ ಪೀಠಕ್ಕೆ ಗೌರವ ಸಲ್ಲಿಸುತ್ತಾರೆ ಎಂಬರ್ಥದಲ್ಲಿ. ಅದನ್ನು ಬೇರೆ ರೀತಿ ಅರ್ಥೈಸುವುದು ಸರಿಯಲ್ಲ ಎಂದರು.