Saturday, May 4, 2024
Homeಇದೀಗ ಬಂದ ಸುದ್ದಿಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಮೊಹಮ್ಮದ್ ಶಮಿ ಹುಟ್ಟೂರಲ್ಲಿ ಸ್ಟೇಡಿಯಂ ನಿರ್ಮಾಣಕ್ಕೆ ಮುಂದಾದ ಯೋಗಿ ಸರ್ಕಾರ

ಲಕ್ನೋ,ನ.18-ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ತವರೂರು ಅಮ್ರೋಹಾ ಜಿಲ್ಲೆಯ ಸಹಸ್ಪುರ್ ಅಲಿನಗರದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವುದಾಗಿ ಉತ್ತರಪ್ರದೇಶ ಸರ್ಕಾರ ಘೋಷಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದುವರೆಗೂ 2023ರ ವಿಶ್ವಕಪ್‍ನಲ್ಲಿ ಶಮಿ 23 ವಿಕೆಟ್‍ಗಳನ್ನು ಪಡೆದು, ಒಟ್ಟಾರೆ 51 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಎದುರಾಳಿಗಳ ವಿಕೆಟ್ ಉರುಳಿಸುತ್ತಾ ಭಾರತ ತಂಡ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ.

ಟೀಂ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿದ ಸಮಯದಲ್ಲಿ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಇದಕ್ಕೆ ತಾಜಾ ಉದಾಹಣೆ ಎಂದರೆ ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಕಿವೀಸ್ ವಿರುದ್ಧದ ಸೆಮೀಫೈನಲ್‍ನಲ್ಲಿ ಬರೋಬ್ಬರಿ 7 ವಿಕೆಟ್ ಉರುಳಿಸಿದ್ದಾರೆ.

ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಹೆಸರು: ಸಿಎಂ ವಿರುದ್ಧ ಎಚ್‍ಡಿಕೆ ವಾಗ್ದಾಳಿ

ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ತೋರುತ್ತಿರುವ ಶಮಿಗೆ ಬಂಪರ್ ಗಿಫ್ಟ್ ನೀಡಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿದ್ಧತೆ ನಡೆಸಿದ್ದು, ಶಮಿಯವರ ಸ್ವಗ್ರಾಮದಲ್ಲಿ ಮಿನಿ ಕ್ರೀಡಾಂಗಣ ನಿರ್ಮಾಣ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಈಗಾಗಲೇ ಇದಕ್ಕಾಗಿ ಆ ಗ್ರಾಮದಲ್ಲಿ ಭೂಮಿಯನ್ನು ಗುರುತಿಸಿದ್ದಾರೆ. ಈ ಸಂಬಂಧ ಡೆವಲಫ್‍ಮೆಂಟ್ ಆಫೀಸರ್ ಒಬ್ಬರನ್ನು ಸಹ ಸರ್ಕಾರ ನೇಮಕ ಮಾಡಿದೆ. ಗ್ರಾಮದಲ್ಲಿರುವ ಜನರ ಸಮಸ್ಯೆಗಳನ್ನು ನಿವಾಸಿರುವ ಕೂಡಲೇ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ.

ಅಧಿಕಾರಿಗಳು ಶಮಿ ಅವರ ಗ್ರಾಮದಲ್ಲಿರುವ ಜೋಯಾ ಡೆವಲಪ್‍ಮೆಂಟ್ ಬ್ಲಾಕ್‍ಗೆ ಭೇಟಿ ನೀಡಿದ್ದಾರೆ. ಶಮಿ ಅವರ ಕುಟುಂಬವು ಗ್ರಾಮದಲ್ಲಿಯೇ ನೆಲೆಸಿದೆ. ಮಿನಿ ಸ್ಟೇಡಿಯಂ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸಂಬಂಧಿಸಿದ ಕಡತವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ.

ಇದಕ್ಕೂ ಮುನ್ನ ಡಿ.ಎಂ.ರಾಜೇಶ್ ತ್ಯಾಗಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸಾಹಸಪುರ ಅಲಿನಗರಕ್ಕೆ ಆಗಮಿಸಿ ಮಿನಿ ಕ್ರೀಡಾಂಗಣ ಮತ್ತು ಓಪನ್ ಜಿಮ್ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

RELATED ARTICLES

Latest News