ವಾಷಿಂಗ್ಟನ್,ಜು.17- ಅಮೆರಿಕದ ಕರಾವಳಿ ತೀರ ಅಲಾಸ್ಕಾದಲ್ಲಿ ಕಳೆದ ರಾತ್ರಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ಸಮುದ್ರದ 36 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಅಲಾಸ್ಕಾ ಪರ್ಯಾಯ ದ್ವೀಪದ ಸ್ಯಾಂಡ್ ಪಾಯಿಂಟ್ನಿಂದ 87 ಕಿ.ಮೀ ದೂರದಲ್ಲಿ ಇದರ ಕೇಂದ್ರ ಬಿಂದು ಇತ್ತು ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಸಮುದ್ರದ ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪ ಇದಾಗಿದ್ದು, ಇದು ಹೆಚ್ಚು ಅಪಾಯಕಾರಿಯಾಗಿರುತ್ತವೆ. ಈ ಹಿನ್ನೆಲೆ ಕರಾವಳಿಯ ಜನರು ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳಬೇಕು. ಕಡಲತೀರದಿಂದ ದೂರವಿರಬೇಕು ಎಂದು ಅಮೆರಿಕ ರಾಷ್ಟ್ರೀಯ ಹವಾಮಾನ ಸೇವಾ ಕೇಂದ್ರ ಎಚ್ಚರಿಕೆ ನೀಡಿದೆ.
ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯವು ಗಂಭೀರ ಹಾನಿಯನ್ನುಂಟುಮಾಡುವ ಸಾಮರ್ಥ್ಯವಿರುವ ಭೂಕಂಪ ಎಂದು ಹೇಳಿದೆ ಅದನ್ನು ರಿಕ್ಟರ್ ಮಾಪನದಲ್ಲಿ 7.0 ಮತ್ತು 7.9 ನಡುವೆ ತೀವ್ರತೆ ಎಂದು ಪರಿಗಣಿಸಲಾಗಿದೆ.
ಇಲ್ಲಿಯವರೆಗೆ, ಪ್ರತಿ ವರ್ಷ ಸುಮಾರು 10 ರಿಂದ 15 ಭೂಕಂಪಗಳು ವರದಿಯಾಗಿವೆ. ಸುಮಾರು 4,100 ಜನರು ವಾಸಿಸುವ ಮೀನುಗಾರಿಕಾ ಪಟ್ಟಣವಾದ ಉನಾಲಸ್ಕಾದಲ್ಲಿ, ಸ್ಥಳೀಯ ಅಧಿಕಾರಿಗಳು ನಿವಾಸಿಗಳು ಸಮುದ್ರ ಇಳಿಯದಂತೆ ಎಚ್ಚರಿಸಲಾಗಿದೆ. ಇದೇ ರೀತಿ ಕರಾವಳಿ ಭಾಗದ ಜನತೆಗೆ ಎಚ್ಚರಿಕೆ ಕರೆ ನೀಡಲಾಗಿದೆ,ಭೂಕಂಪನದಿಂದ ಅಹವಡೆ ಸಣ್ಣ ಮನೆ ಉರುಳಿದೆ ಆದರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
- ವಿಶ್ವ ದಾಖಲೆ ಸೇರಲು ಸಜ್ಜಾಗಿದೆ ರಾಮಮಂದಿರ ದೀಪೋತ್ಸವ
- ಚಿಕ್ಕಮಗಳೂರು : ದೇವಿರಮ್ಮ ಜಾತ್ರಾ ಮಹೋತ್ಸವ, ಮಳೆಯಲ್ಲೂ ಬೆಟ್ಟವೇರಿದ ಭಕ್ತರು
- ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಶರ್ಮಾ ಅಟ್ಟರ್ ಪ್ಲಾಪ್
- ತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ, ಸ್ನೇಹಿತನನ್ನು ಭೀಕರವಾಗಿ ಕೊಂದ ಕುಚಿಕುಗಳು
- ಮರಾಠಾ ಮಂದಿರ ಥಿಯೇಟರ್ನಲ್ಲಿ 30 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೆ ಇದೆ ‘ದಿಲ್ವಾಲೆ ದುಲ್ಹನಿಯ ಲೇ ಜಾಯೇಂಗೆ’ ಚಿತ್ರ