Sunday, July 27, 2025
Homeರಾಜ್ಯಕನಕಪುರ : ನಿವೇಶನವೊಂದರ ವಿಚಾರದಲ್ಲಿ ಕಾಂಗ್ರೆಸ್‌‍ ಮುಖಂಡನ ಬರ್ಬರ ಕೊಲೆ

ಕನಕಪುರ : ನಿವೇಶನವೊಂದರ ವಿಚಾರದಲ್ಲಿ ಕಾಂಗ್ರೆಸ್‌‍ ಮುಖಂಡನ ಬರ್ಬರ ಕೊಲೆ

Kanakapura: Congress leader brutally murdered over land dispute

ಬೆಂಗಳೂರು,ಜು.27- ನಿವೇಶನವೊಂದರ ವಿಚಾರದಲ್ಲಿ ಕಾಂಗ್ರೆಸ್‌‍ ಮುಖಂಡರೊಬ್ಬರನ್ನು ಬರ್ಬರವಾಗಿ ಕೊಲೆಮಾಡಿರುವ ಘಟನೆ ರಾತ್ರಿ ಕನಕಪುರ ತಾಲ್ಲೂಕಿನ ಸಾತನೂರು ಸಮೀಪದ ಡಾಬಾದಲ್ಲಿ ನಡೆದಿದೆ.

ಹೊಂಗಾಣಿದೊಡ್ಡಿ ಗ್ರಾಮದ ನಂದೀಶ(45) ಕೊಲೆಯಾದ ಕಾಂಗ್ರೆಸ್‌‍ ಮುಖಂಡ. ಇವರು ಕನಕಪುರ ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರು. ರಾತ್ರಿ ಸುಮಾರು 8.30ರ ಸಮಯದಲ್ಲಿ ನಂದೀಶ್‌ ಅವರು ಸಾತನೂರಿನ ಕನಕಪುರ ರಸ್ತೆಯ ಆರ್‌ಕೆ ಡಾಬಾದಲ್ಲಿ ಕುಳಿತಿದ್ದರು. ಆಗ ಅಲ್ಲಿಗೆ ನಾಲ್ಕೈದು ಮಂದಿ ನುಗ್ಗಿ ಮಾರಾಕಸಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ನಗರದ ಹೊರವಲಯದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಲಕಾರಿಯಾಗದೇ ರಾತ್ರಿ 12.30ರ ಸಮಯದಲ್ಲಿ ಮೃತಪಟ್ಟಿದ್ದಾರೆ. ಸಾತನೂರಿನಲ್ಲಿರುವ ನಿವೇಶನವೊಂದರ ವಿಚಾರವಾಗಿ ನಂದೀಶ್‌ ಹಾಗೂ ವ್ಯಕ್ತಿಯೊಬ್ಬರ ನಡುವೆ ನಾಲ್ಕೈದು ದಿನಗಳ ಹಿಂದೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸುದ್ದಿ ತಿಳಿದ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು, ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

RELATED ARTICLES

Latest News