ಕನಕಪುರ : ತಲೆ ಮೇಲೆ ಕಲ್ಲು ಹಾಕಿ RTI ಕಾರ್ಯಕರ್ತನ ಭೀಕರ ಕೊಲೆ

ಕನಕಪುರ,ಡಿ.23- ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಜಿಲ್ಲಾ ಪಂಚಾಯ್ತಿಗೆ ದೂರು ನೀಡಿದ್ದ ಆರ್‍ಟಿಐ ಕಾರ್ಯಕರ್ತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಲಸಿನಮರದೊಡ್ಡಿ ನಿವಾಸಿ ಮೂರ್ತಿ(27) ಕೊಲೆಯಾಗಿರುವ ಆರ್‍ಟಿಐ ಕಾರ್ಯಕರ್ತ. ಈ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನರೇಗಾ ಕಾಮಗಾರಿಯಲ್ಲಿ ಅಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯ್ತಿಗೆ ಮೂರ್ತಿ ದೂರು ನೀಡಿದ್ದರು. ದೂರಿನನ್ವಯ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಬಂದಾಗ ಸ್ಥಳೀಯ ನಿವಾಸಿ ಚಂದನ್ […]

ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

ಕನಕಪುರ, ನ.8- ನಡು ರಸ್ತೆಯಲ್ಲೇ ಅತ್ತೆಯನ್ನು ಅಳಿಯನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಟ್ಟೆಗೌಡನ ದೊಡ್ಡಿ ನಿವಾಸಿ ರತ್ನಮ್ಮ (46) ಕೊಲೆಯಾಗಿರುವ ದುರ್ದೈವಿ. ರತ್ನಮ್ಮ ಅವರು ತಮ್ಮ ಮಗಳು ಮಾನಸಳನ್ನು ಸುಕ್ಕಿ ಎಂಬಾತನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಸುಕ್ಕಿ ಸರಿಯಾಗಿ ಮಗಳನ್ನು ನೋಡಿಕೊಳ್ಳು ತ್ತಿರಲಿಲ್ಲ. ಈ ವಿಚಾರವಾಗಿ ಹಲವಾರು ಬಾರಿ ಅಳಿಯನಿಗೆ ಬುದ್ಧಿವಾದ ಹೇಳಿದ್ದರೂ, ಕೇಳಿರಲಿಲ್ಲ. ಈ ವಿಚಾರಕ್ಕೆ ಮಾನಸ ಬೇಸರಗೊಂಡು ಗಂಡನ ಮನೆಯಿಂದ ವಾಪಸ್ ತವರಿಗೆ ಬಂದು […]

ಗ್ರಾಪಂ ಕಚೇರಿಯ ಬೀಗ ಒಡೆದು ಕಂಪ್ಯೂಟರ್, ದಾಖಲೆಗಳನ್ನು ಕದ್ದ ಕಳ್ಳರು

ಕನಕಪುರ, ಜು.14- ತಾಲ್ಲೂಕಿನ ಅಚ್ಚಲು ಗ್ರಾಮ ಪಂಚಾಯಿತಿ ಕಚೇರಿಯ ಬೀಗ ಒಡೆದು ಕಳ್ಳರು ಕಂಪ್ಯೂಟರ್ ಹಾಗೂ ಕೆಲ ದಾಖಲೆಗಳನ್ನು ಕದ್ದೊಯ್ದಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಂದು ಬೆಳಗ್ಗೆ ಗ್ರಾಪಂಗೆ ಬಂದ ಕೆಲ ಅಧಿಕಾರಿಗಳು ಬಾಗಿಲು ತೆರೆದಿರುವುದನ್ನು ನೋಡಿ ಗಾಬರಿಗೊಂಡು ಒಳನೋಡಿದಾಗ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಗೊತ್ತಾಗಿದೆ. ಕಂಪ್ಯೂಟರ್‍ಗಳು ಮತ್ತು ಬೀರುವಿನಲ್ಲಿಟ್ಟಿದ್ದ ಕೆಲ ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದಾವಿಸಿರುವ ಸಾತನೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ರವಿಕುಮಾರ್ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿಗಳ ಪ್ರಕಾರ, ಕೆಲವು […]

ಮೇಕೆದಾಟು ಪಾದಯಾತ್ರೆಯಲ್ಲಿ ಕಳ್ಳನ ಕೈಚಳಕ

ಕನಕಪುರ,ಜ.11- ಜನಜಂಗುಳಿ ಹಾಗೂ ಜನಸಾಗರದ ನಡುವೆ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಪಿಕ್‍ಪಾಕೆಟ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ನಿನ್ನೆಯ ಪಾದಯಾತ್ರೆ ಸಾಗುತ್ತಿದ್ದ ಮಾರ್ಗದ ಮರಳೇಬೇಕುಪ್ಪೆ ಗ್ರಾಮದಲ್ಲಿ ಯುವಕನೊಬ್ಬನ 20 ಸಾವಿರ ಹಣ ಕದ್ದಿದ್ದು, ಆತನ್ನು ಹಿಡಿದು ಧರ್ಮದೇಟು ನೀಡಿ ಸಾತನೂರು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ. ಪಿಕ್‍ಪಾಕೆಟ್ ದಂಧೆಯಲ್ಲಿ ತೊಡಗಿದ್ದ ಮೂರ್ನಾಲ್ಕು ಮಂದಿಯಲ್ಲಿ ಬಿ.ಮಂಜ (30) ಎಂಬಾತ ಸಿಕ್ಕಿ ಬಿದಿದ್ದಾನೆ. ಹಣ ಕದಿಯುತ್ತಿದ್ದ ವೇಳೆ ಸ್ಥಳದಲ್ಲಿಯೇ ಆತನಿಗೆ ಗೂಸಕೊಟ್ಟ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಆಸ್ಪತ್ರೆಯಿಂದ ಪರಾರಿ: ಪಿಕ್‍ಪಾಕೆಟ್ ಮಾಡಿ […]