Sunday, July 27, 2025
Homeರಾಷ್ಟ್ರೀಯ | Nationalಸಿಆರ್‌ಪಿಎಫ್‌ ಯೋಧರ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಸಿಆರ್‌ಪಿಎಫ್‌ ಯೋಧರ ಸೇವೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

PM Modi Greets CRPF Personnel and Families on Raising Day

ನವದೆಹಲಿ,ಜು.27- ಕೇಂದ್ರ ಮೀಸಲು ಪೊಲೀಸ್‌‍ ಪಡೆ (ಸಿಆರ್‌ಪಿಎಫ್‌)ಗಳು ಅತ್ಯಂತ ಪರೀಕ್ಷಾರ್ಥ ಸಂದರ್ಭಗಳಲ್ಲಿ ಉತ್ತಮ ಕರ್ತವ್ಯ, ಧೈರ್ಯ ಮತ್ತು ದೃಢ ಬದ್ಧತೆಯ ಮೂಲಕ ತಮ ಛಾಪು ಮೂಡಿಸಿವೆೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಸಿಆರ್‌ಪಿಎಫ್‌ ಸಂಸ್ಥಾಪನಾ ದಿನದಂದು ಎಲ್ಲಾ ಸಿಬ್ಬಂದಿಗೆ ಶುಭಾಶಯ ತಿಳಿಸಿದ್ದಾರೆ. ಕಳೆದ 1939ರಲ್ಲಿ ಈ ದಿನದಂದು ಈ ಪಡೆಯನ್ನು ಕ್ರೌನ್‌ ರೆಪ್ರೆಸೆಂಟೇಟಿವ್‌ಸ್‌‍ ಪೊಲೀಸ್‌‍ ಎಂದು ಸ್ಥಾಪಿಸಲಾಯಿತು ಮತ್ತು ಸ್ವಾತಂತ್ರ್ಯದ ನಂತರ ಅದರ ಹೆಸರನ್ನು ಬದಲಾಯಿಸಲಾಯಿತು. ಇದು ದೇಶದ ಅತಿದೊಡ್ಡ ಕೇಂದ್ರ ಪೊಲೀಸ್‌‍ ಪಡೆ ಮತ್ತು ದಂಗೆ ಸಂದರ್ಭದಲ್ಲಿ ಮತ್ತು ಅವನ್ನು ನಿಗ್ರಹಿಸಲು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕೊಂಡಾಡಿದ್ದಾರೆ.

ಈ ಪಡೆ ನಮ ಭದ್ರತಾ ಸ್ತರದ , ವಿಶೇಷವಾಗಿ ಆಂತರಿಕ ಭದ್ರತೆಗೆ ಸಂಬಂಧಿಸಿದ ಸವಾಲಿನ ಅಂಶಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಮೋದಿ ಎಕ್‌್ಸನಲ್ಲಿ ಹೇಳಿದರು.ಸಿಆರ್‌ಪಿಎಫ್‌ ಸಿಬ್ಬಂದಿ ಅತ್ಯಂತ ಪರೀಕ್ಷಾರ್ಥ ಸಂದರ್ಭಗಳಲ್ಲಿ ತಮ ಕರ್ತವ್ಯಪಾಲನೆ, ಧೈರ್ಯ ಮತ್ತು ದೃಢ ಬದ್ಧತೆಗೆ ಒಂದು ಗುರುತು ಮಾಡಿದ್ದಾರೆ. ಮಾನವೀಯ ಸವಾಲುಗಳನ್ನು ನಿವಾರಿಸುವಲ್ಲಿ ಅವರ ಕೊಡುಗೆಯೂ ಶ್ಲಾಘನೀಯ ಎಂದು ಪ್ರಧಾನಿ ಹೇಳಿದರು.

RELATED ARTICLES

Latest News