ಬೆಂಗಳೂರು,ಜು.29- ಸ್ನೇಹಿತನೊಂದಿಗೆ ಸೇರಿಕೊಂಡು ಚಿಕ್ಕಪ್ಪನ ಮನೆಯಲ್ಲೇ ಹಣ,ಆಭರಣ ಕಳವು ಮಾಡಿ ಮಾರಾಟ ಮಾಡಿದ್ದ ಪ್ರಮುಖ ಆರೋಪಿತೆ ಸೇರಿದಂತೆ ನಾಲ್ವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ನಗದು ಸೇರಿದಂತೆ 65 ಲಕ್ಷ ರೂ. ಬೆಲೆ ಬಾಳುವ 548 ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.
ಭೈರತಿ ಗ್ರಾಮದ ರಿಯಲ್‌ಎಸ್ಟೇಟ್ ಉದ್ಯಮಿ ಶ್ರೀನಿವಾಸ ರೆಡ್ಡಿ ಮನೆಯ ಕೊಠಡಿಯ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಕಳವು ಆಗಿರುವ ಬಗ್ಗೆ ಮನೆಯ ಇಬ್ಬರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ, ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ ಪೊಲೀಸರು, ದೂರುದಾರರ ಅಣ್ಣನ ಮಗಳನ್ನು ಠಾಣೆಗೆ ಕರೆಸಿ ವಿಚಾರಣೆಗೆ ಒಳಪಡಿಸಿದಾಗ ಸ್ನೇಹಿತನೊಂದಿಗೆ ಸೇರಿ ಕಳ್ಳತನ ಮಾಡಿರುವುದಾಗಿ ಹೇಳಿದ್ದಾಳೆ.ಕಳವು ಮಾಡಿದ ಕೆಲವು ಚಿನ್ನಾಭರಣಗಳನ್ನು ಮತ್ತಿಬ್ಬರು ಸ್ನೇಹಿತರಿಗೆ ನೀಡಿದ್ದು, ಅವುಗಳನ್ನ ಕರಗಿಸಿ ಚಿನ್ನದ ಗಟ್ಟಿಯನ್ನಾಗಿ ಮಾರ್ಪಡಿಸಿ ಮಾರಾಟ ಮಾಡಿ ಹಣ ಪಡೆಯುತ್ತಿದ್ದುದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತಿಬ್ಬರು ಸ್ನೇಹಿತರ ಬಗ್ಗೆಯೂ ಸಹ ಮಾಹಿತಿ ನೀಡಿದ್ದು, ಆತನನ್ನೂ ಕೊತ್ತನೂರಿನ ಮನೆಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿನ್ನಾಭರಣಗಳನ್ನು ಸ್ವೀಕರಿಸಿದ್ದ ಮತ್ತಿಬ್ಬರು ಸ್ನೇಹಿತರನ್ನು ಗುಬ್ಬಿ ಸರ್ಕಲ್ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾರೆ.
ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿ ಚಿಕ್ಕಪೇಟೆಯ ಎರಡು ಜ್ಯುವೆಲರಿ ಅಂಗಡಿಗಳಿಂದ ಮತ್ತು ಕೊತ್ತನೂರಿನಲ್ಲಿ ವಾಸವಿರುವ ಆರೋಪಿಗಳಿಬ್ಬರ ಮನೆಯಿಂದ ಒಟ್ಟು 548 ಗ್ರಾಂ ಚಿನ್ನಾಭರಣ, ಚಿನ್ನದ ಗಟ್ಟಿ ಮತ್ತು 10 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದು, ಅವುಗಳ ಒಟ್ಟು ಮೌಲ್ಯ 65 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಉಳಿದ ಚಿನ್ನಾಭರಣಗಳ ಪತ್ತೆಕಾರ್ಯ ಮುಂದುವರೆದಿದ್ದು ತನಿಖೆ ಪ್ರಗತಿಯಲ್ಲಿದೆ. ಈ ಪ್ರಕರಣವನ್ನು ಇನ್‌್ಸಪೆಕ್ಟರ್ ಚೇತನ್‌ಕುಮಾರ್ ಹಾಗೂ ಸಿಬ್ಬಂದಿ ತಂಡ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.
- ಡಿ.ಕೆ. ಸುರೇಶ ಕೆಎಂಎಫ್ ಅಧ್ಯಕ್ಷಗಾದಿ ಕನಸಿಗೆ ನಾನಾ ವಿಘ್ನ
- “ದಿ ರಾಮೇಶ್ವರಂ ಕೆಫೆ” ವತಿಯಿಂದ ಉತ್ತರ ಭಾರತದ ಶೈಲಿಯ “ತೀರ್ಥ” ಕೆಫೆ ಆರಂಭ
- ಆ.1 ರಿಂದ ಬೆಸ್ಕಾಂ ಬಿಲ್ ಪಾವತಿಯ ATP ಸೇವೆ ಸ್ಥಗಿತ
- ಮನೆಯ ಟೆರೇಸ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗರ್ಭಿಣಿ ಶವ ಮಹಿಳೆ
- ಪಹಲ್ಗಾಮ್ ದಾಳಿಗೆ ಅವಕಾಶ ಮಾಡಿಕೊಟ್ಟಿದ್ದೇಕೆ..? : ಗುಂಡೂರಾವ್ ಪ್ರಶ್ನೆ