Friday, August 1, 2025
Homeಬೆಂಗಳೂರುಒಂದೇ ವಾರದಲ್ಲಿ 10 ಸಾವಿರ ಮಂದಿಗೆ ಕಚ್ಚಿರುವ ಬೆಂಗಳೂರು ಬೀದಿ ನಾಯಿಗಳು

ಒಂದೇ ವಾರದಲ್ಲಿ 10 ಸಾವಿರ ಮಂದಿಗೆ ಕಚ್ಚಿರುವ ಬೆಂಗಳೂರು ಬೀದಿ ನಾಯಿಗಳು

Bengaluru stray dogs bite 10,000 people in a week

ಬೆಂಗಳೂರು, ಜು.30– ಕಳೆದ ಒಂದು ವಾರದಲ್ಲೇ 10 ಸಾವಿರಕ್ಕೂ ಹೆಚ್ಚು ಮಂದಿಗೆ ಬೀದಿ ನಾಯಿ ಕಚ್ಚಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.ನಗರದ ಬೀದಿ ನಾಯಿಗಳ ದಾಳಿಗೆ ವೃದ್ಧರೊಬ್ಬರು ಬಲಿಯಾದ ಬಳಿಕ ಜನರಲ್ಲಿ ನಾಯಿಗಳ ಬಗ್ಗೆ ಭಯ ಹುಟ್ಟಿರುವ ಸಂದರ್ಭದಲ್ಲೇ ಈ ಅಂಕಿ ಅಂಶ ಬಹಿರಂಗಗೊಂಡಿದೆ.

ಇಲ್ಲಿಯವರೆಗೆ ರಾಜ್ಯದಲ್ಲಿ 2.60 ಲಕ್ಷಕ್ಕೂ ಹೆಚ್ಚು ಮಂದಿಗೆ ಬೀದಿ ನಾಯಿಗಳು ಕಚ್ಚಿರುವುದು ಬೆಳಕಿಗೆ ಬಂದಿದೆ.ಆದರಲ್ಲೂ ಕಳೆದ ಒಂದೇ ವಾರದಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮೇಲೆ ಶ್ವಾನಗಳು ದಾಳಿ ನಡೆಸಿವೆಯಂತೆ.

ಇದುವರೆಗೂ 2.60 ಲಕ್ಷ ಮಂದಿಗೆ ಬೀದಿ ನಾಯಿಗಳು ಕಚ್ಚಿದ್ದು ಅವರಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.ಅದರಲ್ಲೂ ಕಳೆದ ಕೆಲವು ದಿನಗಳಿಂದ 10242 ಮಂದಿ ಮೇಲೆ ಶ್ವಾನಗಳು ದಾಳಿ ನಡೆಸಿದ್ದು, ಮೊನ್ನೆಯಷ್ಟೇ ಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ಸೀತಪ್ಪ ಎಂಬ ವೃದ್ಧರು ಪ್ರಾಣ ಕಳೆದುಕೊಂಡಿದ್ದರು.ಹೀಗಾಗಿ ನಗರದಲ್ಲಿ ಹೆಚ್ಚುತ್ತಿರುವ ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಿದ್ದಾರೆ.

RELATED ARTICLES

Latest News