ಬೆಂಗಳೂರು,ಫೆ.13- ಕೆನಡಾದಲ್ಲಿ ದುಷ್ಕರ್ಮಿಗಳಿಂದ ಭರ್ಬರವಾಗಿ ಕೊಲೆಯಾದ ಕನ್ನಡಿಗ ಚಂದನ್‌ಕುಮಾರ್ ಅವರ ಪಾರ್ಥಿವ ಶರೀರವು ಸೋಮವಾರ ಹುಟ್ಟೂರಿಗೆ ಆಗಮಿಸಲಿದೆ. ಕಳೆದ ಫೆ.7ರಂದು ಕೆನಡಾದ ವುಡ್‌ಬೈನ್ ಶಾಪಿಂಗ್ ಮಾಲ್‌ನ ಪಾರ್ಕಿಂಗ್‌ನಲ್ಲಿ ಚಂದನ್‌ಕುಮಾರ್ ಅವರನ್ನು ಆಗುಂತಕರು ಗುಂಡು ಹಾರಿಸಿ ಕಗ್ಗೊಲೆ ಮಾಡಿದ್ದರು.
ಕಾರಿನಲ್ಲಿದ್ದ ವೇಳೆ ಏಕಾಏಕಿ ಗುಂಡಿನ ದಾಳಿ ನಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆದಲ್ಲೇ ಕೊನೆಯುಸಿರೆಳೆದರು. ಮೃತದೇಹವನ್ನು ತಮ ಗ್ರಾಮಕ್ಕೆ ಕರೆತರಬೇಕೆಂದು ಚಂದನ್‌ಕುಮಾರ್ ಅವರ ಪೋಷಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.
ತಕ್ಷಣವೇ ಕಾರ್ಯಪ್ರವೃತ್ತ ರಾದ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕೆನಡಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿ ಮೃತದೇಹವನ್ನು ತಾಯ್ನಾಡಿಗೆ ತರುವ ವ್ಯವಸ್ಥೆಯನ್ನು ಮಾಡಿದ್ದರು.ಇದೀಗ ಚಂದನ್‌ಕುಮಾರ್ ಮೃತದೇಹ ಕೆನಡಾದಿಂದ ಹೊರಟು ದೆಹಲಿಗೆ ಆಗಮಿಸಿ ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.ಬಳಿಕ ಅವರ ಹುಟ್ಟೂರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲುವಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ತಮ ಸಾಮಾಜಿಕ ಜಾಲತಾಣ ಎಕ್‌್ಸನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಕೆನಡಾ ದೇಶದ ಟೊರಾಂಟೋ ನಗರದಲ್ಲಿ ಕಳೆದ ಶನಿವಾರ, ಫೆ.7ರಂದು ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾಗಿದ್ದ ನೆಲಮಂಗಲ ತಾಲ್ಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ನಡೆಯುತ್ತಿದ್ದ ಪ್ರಯತ್ನ ಫಲಕಾರಿಯಾಗಿರುವುದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ಈಗಷ್ಟೇ ನನಗೆ ಇ-ಮೇಲ್ ಮೂಲಕ ಮಾಹಿತಿ ನೀಡಿದ್ದು, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ನಾಳೆ ಕೆನಡಾ ಟೊರಾಂಟೋ ನಗರದಿಂದ ನವದೆಹಲಿಯ ಮೂಲಕ ಸೋಮವಾರ, ಫೆ.16ರಂದು ಬೆಳಿಗ್ಗೆ 8:30ಕ್ಕೆ ಬೆಂಗಳೂರಿಗೆ ತಲುಪಲಿದೆ ಎಂದು ಮಾಹಿತಿ ನೀಡಿದ್ದಾರೆ.
ನೂರ್ಕಾಲ ಬಾಳಿ ಬದುಕಬೇಕಾದ ಮಗನನ್ನು ಕಳೆದುಕೊಂಡ ಹೆತ್ತವರಿಗೆ ಪುತ್ರನ ಜೀವವನ್ನು ವಾಪಸ್ಸು ತಂದುಕೊಡುವ ಶಕ್ತಿ ನಮಗಿಲ್ಲ. ಆದರೆ ಮಗನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ತಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತಿಮ ಸಂಸ್ಕಾರ ಮಾಡುವ ಅವಕಾಶವನ್ನಾದರೂ ಅವರಿಗೆ ಒದಗಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದಾಗಿ ಹೇಳಿದ್ದಾರೆ.
ಚಂದನ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ಸಹಕಾರ ಕೊಟ್ಟ ಪ್ರಧಾನಿ ನರೇಂದ್ರಮೋದಿ ಅವರಿಗೆ, ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ, ವಿದೇಶಾಂಗ ಸಚಿವಾಲಯ ಮತ್ತು ಕೆನಡಾದ ಭಾರತೀಯ ಎಂಬೆಸಿಯ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಚಂದನ್‌ಕುಮಾರ್ ಅವರ ಪೋಷಕರು, ಕುಟುಂಬ ಸದಸ್ಯರು ಹಾಗೂ ಸಮಸ್ತ ಕರ್ನಾಟಕದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸಹೋದರ ಚಂದನ್ ಕುಮಾರ್ ಅವರ ಆತಕ್ಕೆ ಭಗವಂತ ಚಿರ ಶಾಂತಿ ಕೊಡಲಿ ಎಂದು ಹೇಳಿದ್ದಾರೆ.
