Thursday, August 14, 2025
Homeರಾಜ್ಯಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆ ಸ್ಥಗಿತ ಸಾಧ್ಯತೆ

ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆ ಸ್ಥಗಿತ ಸಾಧ್ಯತೆ

Plan to feed stray dogs likely to be suspended

ಬೆಂಗಳೂರು,ಆ.13- ಬೀದಿ ನಾಯಿಗಳಿಗೆ ಬಾಡೂಟ ಹಾಕುವ ಬಿಬಿಎಂಪಿ ವಿವಾದಿತ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿರುವುದನ್ನು ಮನಗಂಡು ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆಯನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಒಂದು ನಿರ್ಧಾರ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿರುವ ವಿಚಾರವನ್ನು ಗಂಭೀರವಾಗಿ ಪರಿ ಗಣಿಸಿದ್ದೇವೆ ಎಂದರು.

ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸಿರುವ ನಾಯಿಗಳನ್ನು ಅಬ್ಸರ್ವೇಷನ್‌ನಲ್ಲಿ ಇಟ್ಟಿರುವುದಾಗಿ ಮಾಹಿತಿ ನೀಡಿದರು. ಹಾಗೂ ಬೀದಿ ನಾಯಿಗಳ ದಾಳಿಗೆ ಬಲಿಯಾದ ಸೀತಪ್ಪ ಎಂಬುವರಿಗೆ ಪರಿಹಾರ ನೀಡುವ ಬಗ್ಗೆ ಇನ್ನು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.

ಸೀತಪ್ಪ ಎಂಬುವರು ನಾಯಿ ದಾಳಿಗೆ ಬಲಿಯಾದ ಸಂದರ್ಭದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅವರ ಕುಟುಂಬ ವರ್ಗದವರಿಗೆ ಪರಿಹಾರ ನೀಡುವ ಭರವಸೆಯನ್ನು ಬಿಬಿಎಂಪಿ ನೀಡಿತ್ತು.ಆದರೆ, ಇದೀಗ ಸೀತಪ್ಪ ಅವರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದರೂ ಅವರ ಕುಟುಂಬಕ್ಕೆ ಇನ್ನು ಪರಿಹಾರ ಧನ ಸಿಕ್ಕಿಲ್ಲ.

ಲಕ್ಷಾಂತರ ಮಂದಿಗೆ ನಾಯಿ ಕಡಿತ:
ರಾಜ್ಯದಲ್ಲಿ ಈ ವರ್ಷ 2,86,649 ಜನರಿಗೆ ನಾಯಿ ಕಚ್ಚಿರುವ ಪ್ರಕರಣಗಳು ವರದಿಯಾಗಿವೆ. ಜ. 1 ರಿಂದ ಆಗಸ್ಟ್‌ 10ರತನಕ ನಾಯಿ ದಾಳಿಗೆ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.ಕಳೆದೊಂದು ವಾರದಲ್ಲಿ 5,562 ಜನರಿಗೆ ನಾಯಿ ಕಚ್ಚಿದ ಪ್ರಕರಣಗಳು ನಡೆದಿವೆ ಎಂಬ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಂಕಿ ಅಂಶ ಜನರನ್ನು ಬೆಚ್ಚಿ ಬೀಳಿಸಿದೆ.

RELATED ARTICLES

Latest News