Thursday, August 21, 2025
Homeರಾಜ್ಯಏರ್‌ಶೋಗೆ ಅನುಮತಿ ನೀಡಿದ ರಾಜನಾಥ್‌ಸಿಂಗ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಏರ್‌ಶೋಗೆ ಅನುಮತಿ ನೀಡಿದ ರಾಜನಾಥ್‌ಸಿಂಗ್‌ಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

CM Siddaramaiah Thank Rajnath Singh for giving permission for air show

ಬೆಂಗಳೂರು, ಆ.21– ಮೈಸೂರು ದಸರಾದಲ್ಲಿ ಏರ್‌ಶೋ ನಡೆಸಲು ಅನುಮತಿಸಿರುವ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರು ದಸರಾದಲ್ಲಿ ವಾಯುಪಡೆಯಿಂದ ಏರ್‌ಶೋ ನಡೆಯಬೇಕೆಂಬುದು ಬಹುದಿನಗಳ ಕನಸಾಗಿತ್ತು. ಹಲವಾರು ಮುಖ್ಯಮಂತ್ರಿಗಳು ಈ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವಾಗಿ ವೈಯಕ್ತಿಕ ಆಸಕ್ತಿ ತೋರಿಸಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರನ್ನು ಮೂರು-ನಾಲ್ಕು ಬಾರಿ ಭೇಟಿಮಾಡಿ, ಒತ್ತಡ ಹಾಕಿದ್ದರು. ಕಳೆದ ವರ್ಷವೇ ಏರ್‌ಶೋಗೆ ಅನುಮತಿ ದೊರೆಯುವ ನಿರೀಕ್ಷೆಯಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಈ ಬಾರಿ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ ಏರ್‌ಶೋಗೆ ಅನುಮತಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಪರವಾಗಿ ರಾಜ್‌ನಾಥ್‌ ಅವರನ್ನು ಅಭಿನಂದಿಸಿದ್ದಾರೆ.

ಮೈಸೂರು ದಸರಾ ನಾಡಿನ ಅಸಿತೆಯಾಗಿದೆ. ಐತಿಹಾಸಿಕವಾದ ಈ ಆಚರಣೆಯಲ್ಲಿ ಭಾರತೀಯ ವಾಯುಪಡೆಯು ಭಾಗಿಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಸಿಎಂ ಹೇಳಿದ್ದಾರೆ.ಏರ್‌ ಶೋದಿಂದಾಗಿ ದಸರಾದ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮೈಸೂರು ದಸರಾಗೆ ರಾಜನಾಥ್‌ಸಿಂಗ್‌ ಅವರನ್ನು ಸಿದ್ದರಾಮಯ್ಯ ಅತೀಯವಾಗಿ ಆಹ್ವಾನಿಸಿದ್ದಾರೆ.

RELATED ARTICLES

Latest News