Sunday, August 24, 2025
Homeರಾಷ್ಟ್ರೀಯ | Nationalರಾಹುಲ್‌ ಮಾತಿನಿಂದ ಕಾಂಗ್ರೆಸಿಗರು ಮುಜುಗರಕ್ಕೊಳಗಾಗುತ್ತಾರೆ ; ರಿಜಿಜು

ರಾಹುಲ್‌ ಮಾತಿನಿಂದ ಕಾಂಗ್ರೆಸಿಗರು ಮುಜುಗರಕ್ಕೊಳಗಾಗುತ್ತಾರೆ ; ರಿಜಿಜು

'When he speaks, his MPs get uncomfortable': Kiren Rijiju

ನವದೆಹಲಿ, ಆ. 24: ಲೋಕಸಭೆಯಲ್ಲಿ ರಾಹುಲ್‌ಗಾಂಧಿ ಮಾತನಾಡುವಾಗಲೆಲ್ಲಾ ಕಾಂಗ್ರೆಸ್‌‍ ಸಂಸದರು ಮುಜುಗರ ಕ್ಕೊಳಗಾಗುತ್ತಾರೆ ಮಾತ್ರವಲ್ಲ ರಾಹುಲ್‌ ತಮ್ಮ ಪಕ್ಷದ ನಾಯಕರ ಮಾತನ್ನು ಕೇಳುವುದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಕಟುವಾಗಿ ಟೀಕಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾನು ಸುಮ್ಮನೇ ಕಾಂಗ್ರೆಸ್‌‍ ಪಕ್ಷದ ನಾಯಕರನ್ನು ದೂಷಿಸುವುದಿಲ್ಲ ಯಾಕೆಂದರೆ ಅವರೆಲ್ಲರೂ ರಾಹುಲ್‌ ಗಾಂಧಿ ಹೇಳಿದಂತೆಯೇ ನಡೆದುಕೊಳ್ಳಬೇಕು.ರಾಹುಲ್‌ ಯಾರ ಮಾತನ್ನೂ ಕೇಳುವುದಿಲ್ಲ.ರಾಹುಲ್‌ ಗಾಂಧಿ ಏನಾದರೂ ಹೇಳಿದಾಗಲೆಲ್ಲಾ ಅವರ ಎಲ್ಲಾ ಸಂಸದರು ಮುಜುಗರಕ್ಕೊಳಗಾಗುತ್ತಾರೆ.

ಪ್ರಜಾಪ್ರಭುತ್ವದಲ್ಲಿ, ವಿರೋಧ ಪಕ್ಷವು ಬಲವಾಗಿರಬೇಕು.ಅವರು ವಿರೋಧ ಪಕ್ಷದ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದರು.ಭಾರತ ಮತ್ತು ಫ್ರಾನ್ಸ್ ನಡುವಿನ ರಫೇಲ್‌ ಒಪ್ಪಂದದ ಬಗ್ಗೆ ಅಸಂಬದ್ಧವಾಗಿ ಮಾತನಾಡಿದಕ್ಕಾಗಿ ಮಾಜಿ ಕಾಂಗ್ರೆಸ್‌‍ ಅಧ್ಯಕ್ಷರನ್ನು ಸುಪ್ರೀಂ ಕೋರ್ಟ್‌ ಗದರಿಸಿತ್ತು ಎಂದು ಅವರು ಹೇಳಿದರು. ಕಾಂಗ್ರೆಸ್‌‍ ಪಕ್ಷ ಚುನಾವಣೆಯಲ್ಲಿ ಸೋತಾಗಲೆಲ್ಲಾ ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ ಎಂದು ಹೇಳಿದರು.

ಗಾಂಧಿಯವರು ನ್ಯಾಯಾಂಗ ಮತ್ತು ಭಾರತೀಯ ಚುನಾವಣಾ ಆಯೋಗದ ಮೇಲೆ ದಾಳಿ ಮಾಡಿದ್ದಕ್ಕಾಗಿಯೂ ಅವರು ಟೀಕಿಸಿದರು. ಕಾಂಗ್ರೆಸ್‌‍ ಮತ್ತು ರಾಹುಲ್‌ ಗಾಂಧಿ ದೇಶವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

RELATED ARTICLES

Latest News