Tuesday, August 26, 2025
Homeರಾಜ್ಯಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್‌ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಎಸ್‌‍ಐಟಿ ದಾಳಿ

ಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಮಹೇಶ್‌ಶೆಟ್ಟಿ ತಿಮರೋಡಿ ನಿವಾಸದ ಮೇಲೆ ಎಸ್‌‍ಐಟಿ ದಾಳಿ

SIT raids Mahesh Shetty Timarodi residence, who sheltered Chinnaiah

ಬೆಳ್ತಂಗಡಿ, ಆ.26– ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಿರುವುದಾಗಿ ಹೇಳಿದ್ದ ಬುರುಡೆ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ಉಜಿರೆಯ ಮಹೇಶ್‌ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ಇಂದು ಬೆಳಿಗ್ಗೆ ಎಸ್‌‍ಐಟಿ ದಾಳಿ ನಡೆಸಿದೆ.

ಬೆಳ್ತಂಗಡಿ ನ್ಯಾಯಾಧೀಶರಿಂದ ಸರ್ಚ್‌ವಾರೆಂಟ್‌ ಪಡೆದುಕೊಂಡು ಆರೋಪಿ ಬುರುಡೆ ಚಿನ್ನಯ್ಯನನ್ನು ಕರೆದುಕೊಂಡು ಎಸ್‌‍ಐಟಿ ತಂಡ ಮಹೇಶ್‌ಶೆಟ್ಟಿ ಮನೆ ಹಾಗೂ ಪಕ್ಕದಲ್ಲೇ ಇರುವ ಸಹೋದರ ಮೋಹನ್‌ ಕುಮಾರ್‌ ಅವರ ಮನೆಯನ್ನೂ ಸಹ ಶೋಧ ನಡೆಸಿದೆ.
ಎಸ್‌‍ಐಟಿ ತನಿಖಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ ಅವರ ನೇತೃತ್ವದ ಅಧಿಕಾರಿಗಳ ತಂಡ ಇಂದು ಬೆಳಗ್ಗೆ 9.30ರ ಸುಮಾರಿಗೆ ಉಜಿರೆಗೆ ಆಗಮಿಸಿ, ಚಿನ್ನಯ್ಯ ವಾಸವಾಗಿದ್ದ ತಿಮರೋಡಿ ನಿವಾಸದ ಕೊಠಡಿಯೊಂದನ್ನು ಇಂಚಿಂಚೂ ಪರಿಶೀಲಿಸುತ್ತಿದೆ.

ಎಸ್‌‍ಐಟಿ ಉತ್ಖನನ ನಡೆಸುತ್ತಿದ್ದ ಸಂದಭದಲ್ಲಿ ತಾನು ತಿಮರೋಡಿ ಅವರ ನಿವಾಸಕ್ಕೆ ಹೋಗುತ್ತಿದ್ದೆ, ಅವರ ಮನೆಯಲ್ಲಿ ನನಗೆ ಒಂದು ಕೊಠಡಿಯನ್ನು ನೀಡಲಾಗಿತ್ತು. ನಾನು ಅಲ್ಲಿ ಬಟ್ಟೆ, ಬ್ಯಾಗ್‌ ಇಟ್ಟಿದ್ದೇನೆ, ನಾನು ಮೊಬೈಲ್‌ ಬಳಸುತ್ತಿರಲಿಲ್ಲ ನನ್ನ ಮೊಬೈಲ್‌ ತಿಮರೋಡಿ ಕಡೆಯವರ ಬಳಿ ಇದೆಯೆಂದು ಎಸ್‌‍ಐಟಿ ವಿಚಾರಣೆ ವೇಳೆ ಬುರುಡೆ ಚಿನ್ನಯ್ಯ ಹೇಳಿದ್ದರಿಂದ ಆತನ ಮಾಹಿತಿಯನ್ನು ಆಧರಿಸಿ, ಇಂದು ೕಳಗ್ಗೆ ತಿಮರೋಡಿ ನಿವಾಸದ ಮೇಲೆ ದಾಳಿ ಮಾಡಲಾಗಿದೆ.

ತಿಮರೋಡಿ ಅವರ ಮನೆಯಲ್ಲಿ ಚಿನ್ನಯ್ಯನಿಗೆ ಕಳೆದ ಎರಡು ತಿಂಗಳಿನಿಂದ ಆಶ್ರಯ ನೀಡಿದ್ದರಿಂದ ಆತ ತಂಗಿದ್ದ ಕೊಠಡಿಯ ಮಹಜರು ಮಾಡಿ, ಆತನಿಗೆ ಸಂಬಂಧಿಸಿದ ವಸ್ತುಗಳನ್ನು ಹಾಗೂ ಮೊಬೈಲ್‌ನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.ಧರ್ಮಸ್ಥಳದಲ್ಲಿ ಉತ್ಖನನ ನಡೆಯುತ್ತಿದ್ದಾಗ ಬುರುಡೆ ಗ್ಯಾಂಗ್‌ನ ಎಲ್ಲಾ ಸದಸ್ಯರು ತಿಮರೋಡಿ ಮನೆಯಲ್ಲಿ ತಂಗಿದ್ದರು. ಅಲ್ಲೇ ಎಲ್ಲಾ ಸಂಚುಗಳಿಗೆ ಪ್ಲ್ಯಾನ್‌ ರೂಪಿಸಲಾಗುತ್ತಿತ್ತು ಎಂದು ಗೊತ್ತಾಗಿದೆ.

ಬಿಜೆಪಿ ಮುಖಂಡ ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಬ್ರಹಾವರ ಪೊಲೀಸ್‌‍ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಮಹೇಶ್‌ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲಾಗಿತ್ತು. ಅದರಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

RELATED ARTICLES

Latest News