ಲಕ್ನೋ, ಆ.29– ವರದಕ್ಷಿಣೆ ಕಿರುಕುಳ ಎಂಬ ಪೆಡಂಭೂತ ಇನ್ನೂ ಕಾಡುತ್ತಲೆ ಇದೆ. ಇಂತಹ ಕಿರುಕುಳಕ್ಕೆ ಇದುವರೆಗೂ ಸಾವಿರಾರು ಮಹಿಳೆಯರು ಬಲಿಯಾಗಿದ್ದಾರೆ. ಇದೀಗ ಉತ್ತರ ಪ್ರದೇಶದ ಧನ ಪಿಶಾಚಿ ಪತಿ ಹಾಗೂ ಆತನ ಕುಟುಂಬದವರು 23 ವರ್ಷದ ಸೊಸೆಗೆ ವರದಕ್ಷಿಣೆ ಕಾಟ ನೀಡಿ ಆಸಿಡ್ ಕುಡಿಸಿ ಹತ್ಯೆ ಮಾಡಿರುವ ಹೀನಾಯ ಕೃತ್ಯವೆಸಗಿದ್ದಾರೆ.
ನೊಯ್ಡಾದಲ್ಲಿ ಇತ್ತೀಚೆಗೆ ವರದಕ್ಷಿಣೆ ಕಿರುಕುಳ ನೀಡಿ ಬೆಂಕಿ ಹಚ್ಚಿ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ್ದ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಇಂತಹದೊಂದು ಭಯಾನಕ ವರದಕ್ಷಿಣೆ ಕ್ರೌರ್ಯ ವರದಿಯಾಗಿದೆ. ಅಮ್ರೋಹಾ ಜಿಲ್ಲೆಯ ಕಲಖೇಡ ಎಂಬಲ್ಲಿ ಅತ್ತೆ ಹಾಗೂ ಮಾವ ಸೇರಿ 23 ವರ್ಷದ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ ಆಸಿಡ್ ಕುಡಿಸಿ ಹತ್ಯೆ ಮಾಡಿದ್ದಾರೆ.ಗುಲ್ಫಿಜಾ ಹತ್ಯೆಯಾದ ಮಹಿಳೆಯಾಗಿದ್ದಾಳೆ.
ಆಕೆ ಒಂದು ವರ್ಷದ ಹಿಂದೆ ದಿದೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲಖೇಡ ಗ್ರಾಮದ ಪರ್ವೇಜ್ ಎಂಬವನನ್ನು ಮದುವೆ ಆಗಿದ್ದಳು. ಆಕೆಯ ಅತ್ತೆ-ಮಾವ 10 ಲಕ್ಷ ರೂ. ನಗದು ಮತ್ತು ಕಾರನ್ನು ನೀಡುವಂತೆ ಒತ್ತಾಯಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆ.11 ರಂದು ಗಲ್ಫಿಜಾಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ. ಆಕೆಯನ್ನು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 17 ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ತಂದೆ ಫರ್ಕಾನ್ ನೀಡಿದ ದೂರಿನ ಮೇರೆಗೆ, ಪರ್ವೇಜ್, ಅಸಿಮ್, ಗುಲಿಸ್ತಾ, ಮೋನಿಶ್, ಸೈಫ್, ಡಾ. ಭೂರಾ ಮತ್ತು ಬಬ್ಬು ಎಂಬ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ, ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ವಿಶ್ವ ದಾಖಲೆ ಸೇರಲು ಸಜ್ಜಾಗಿದೆ ರಾಮಮಂದಿರ ದೀಪೋತ್ಸವ
- ಚಿಕ್ಕಮಗಳೂರು : ದೇವಿರಮ್ಮ ಜಾತ್ರಾ ಮಹೋತ್ಸವ, ಮಳೆಯಲ್ಲೂ ಬೆಟ್ಟವೇರಿದ ಭಕ್ತರು
- ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ, ಶರ್ಮಾ ಅಟ್ಟರ್ ಪ್ಲಾಪ್
- ತಾಯಿಯೊಂದಿಗೆ ಅಕ್ರಮ ಸಂಬಂಧ ಶಂಕೆ, ಸ್ನೇಹಿತನನ್ನು ಭೀಕರವಾಗಿ ಕೊಂದ ಕುಚಿಕುಗಳು
- ಮರಾಠಾ ಮಂದಿರ ಥಿಯೇಟರ್ನಲ್ಲಿ 30 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೆ ಇದೆ ‘ದಿಲ್ವಾಲೆ ದುಲ್ಹನಿಯ ಲೇ ಜಾಯೇಂಗೆ’ ಚಿತ್ರ