Friday, April 17, 2026
Homeರಾಷ್ಟ್ರೀಯ37 ರಾಜ್ಯಸಭಾ ಸ್ಥಾನಗಳಿಗೆ ಮಾ.16ಕ್ಕೆ ಚುನಾವಣೆ

37 ರಾಜ್ಯಸಭಾ ಸ್ಥಾನಗಳಿಗೆ ಮಾ.16ಕ್ಕೆ ಚುನಾವಣೆ

Elections for 37 Rajya Sabha seats on March 16

ನವದೆಹಲಿ, ಫೆ.18- ಹತ್ತು ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್‌ 16ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು ಘೋಷಿಸಿದೆ. ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಸೇರಿದಂತೆ 10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಫೆಬ್ರವರಿ 26ರಂದು ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಮಾರ್ಚ್‌ 5ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಮಾರ್ಚ್‌ 6ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾರ್ಚ್‌ 16ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್‌ 16ರಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

ಮಹಾರಾಷ್ಟ್ರದ 7, ತಮಿಳುನಾಡಿನ 6 ಹಾಗೂ ಬಿಹಾರದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಅಸ್ಸಾಂ, ಹರಿಯಾಣ, ಛತ್ತೀಸ್‌‍ಗಢ ಮತ್ತು ತೆಲಂಗಾಣದಲ್ಲೂ ತೆರವಾಗಲಿರುವ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಮಾರ್ಚ್‌ 20ರ ಒಳಗೆ ಇಡೀ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗದ ಗಡುವು ನೀಡಿದೆ.

ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ನೀಡುವ ವಿಶೇಷ ವೈಲೆಟ್‌ ಪೆನ್‌ ಬಳಕೆ ಕಡ್ಡಾಯವಾಗಿರಲಿದೆ. 37 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್‌ 2026 ರಲ್ಲಿ ಮುಕ್ತಾಯಗೊಳ್ಳಲಿದೆ.

ಮಹಾರಾಷ್ಟ್ರ
ಕರಾದ್‌, ಡಾ. ಭಾಗವತ್‌ ಕಿಶನ್‌ರಾವ್‌
ಡಾ. ತಹಸೀನ್‌ ಅಹಮದ್‌
ಚತುರ್ವೇದಿ, ಪ್ರಿಯಾಂಕಾ ವಿಕ್ರಮ್‌
ಶರದ್ಚಂದ್ರ ಗೋವಿಂದರಾವ್‌ ಪವಾರ್‌
ಧೈರ್ಯಶೀಲ್‌ ಮೋಹನ್‌ಪಾಟೀಲ್‌
ರಜನಿ ಅಶೋಕರಾವ್‌ಪಾಟೀಲ್‌
ರಾಮದಾಸ್‌‍ ಬಂಡುಅಠಾವಳೆ,

ಒಡಿಶಾ
ಮಮತಾ ಮೊಹಂತ
ಮುಜಿಬುಲ್ಲಾ ಖಾನ್‌
ಸುಜೀತ್‌ ಕುಮಾರ್‌
ನಿರಂಜನ್‌ ಬಿಶಿ

ತಮಿಳುನಾಡು
ಎನ್‌.ಆರ್‌. ಎಲಂಗೊ
ಪಿ.ಸೆಲ್ವರಸು
ಎಂ.ತಂಬಿದುರೈ
ತಿರುಚಿ ಶಿವ
ಡಾ. ಕನಿಮೋಳಿ ಎನ್ವಿಎನ್‌. ಸೋಮು
ಜಿ.ಕೆ. ವಾಸನ್‌

ಪಶ್ಚಿಮ ಬಂಗಾಳ
ಸಾಕೇತ್‌ ಗೋಖಲೆ
ರಿತಬ್ರತಾ ಬ್ಯಾನರ್ಜಿ
ಬಿಕಾಶ್‌ ರಂಜನ್‌ ಭಟ್ಟಾಚಾರ್ಯ
ಮೌಸಮ್‌ ನೂರ್‌ (ಖಾಲಿ 05.01.2026)
ಸುಬ್ರತಾ ಬಕ್ಷಿ

ಅಸ್ಸಾಂ
ರಾಮೇಶ್ವರ ತೇಲಿ
ಭುವನೇಶ್ವರ್‌ ಕಲಿತಾ
ಅಜಿತ್‌ ಕುಮಾರ್‌ ಭುಯಾನ್‌

ಬಿಹಾರ
ಅಮರೇಂದ್ರ ಧಾರಿ ಸಿಂಗ್‌
ಪ್ರೀಮ್‌ ಚಂದ್‌ ಗುಪ್ತಾ
ರಾಮ್‌ ನಾಥ್‌ ಠಾಕೂರ್‌
ಉಪೇಂದ್ರ ಕುಶ್ವಾಹ
ಹರಿಬನಷ ನಾರಾಯಣ ಸಿಂಗ್‌

ಛತ್ತೀಸ್‌‍ಗಢ
ಕವಿ ತೇಜ್‌ಪಾಲ್‌ ಸಿಂಗ್‌ ತುಳಸಿ
ಲೋ ದೇವಿ ನೇತಮ್‌

ಹರಿಯಾಣ
ಕಿರಣ್‌ ಚೌಧರಿ
ರಾಮ್‌ ಚಂದರ್‌ ಜಾಂಗ್ರಾ

ಹಿಮಾಚಲ ಪ್ರದೇಶ
ಇಂದು ಬಾಲ ಗೋಸ್ವಾಮಿ

ತೆಲಂಗಾಣ
ಡಾ.ಎ.ಎಸ್‌‍. ಅಭಿಷೇಕ್‌ ಮನು ಸಿ್ವಂ
ಕೆ.ಆರ್‌. ಸುರೇಶ್‌ ರೆಡ್ಡಿ

RELATED ARTICLES

Latest News