ಬೆಂಗಳೂರು, ನ. 24- ಈ ಬಾರಿ ಕಪ್ ನಮ್ದೆ… ಈ ಬಾರಿ ಕಪ್ ನಮ್ದೆ ಎಂದು ಹೇಳುತ್ತಾ ಹದಿನಾರನೇ ಆವೃತ್ತಿಯಿಂದಲೂ ದಂಡಯಾತ್ರೆ ಹೊಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17ನೇ ಆವೃತ್ತಿಯಲ್ಲಿ ಶತಾಯ ಗತಾಯ ಟ್ರೋಫಿ ಗೆಲ್ಲಲು ಟೊಂಕ ಕಟ್ಟಿ ನಿಂತಿದೆ.
ದುಬೈನಲ್ಲಿ ನಡೆಯಲಿರುವ ಐಪಿಎಲ್ 17ನೇ ಆವೃತ್ತಿಯ ಮಿನಿ ಹರಾಜಿಗೆ ಆಟಗಾರರನ್ನು ಬಿಡುಗಡೆ ಮಾಡಲು ನವೆಂಬರ್ 26 ರಂದು ಅಂತಿಮ ಗಡುವಾಗಿದ್ದು, ತಂಡದಿಂದ ಕೆಲವು ಆಟಗಾರರನ್ನು ಕೈಬಿಟ್ಟು , ಟ್ರೋಫಿ ಗೆಲ್ಲುವ ಸಾಮಥ್ರ್ಯವಿರುವ ಆಟಗಾರರನ್ನು ಖರೀದಿಸಿ ತಂಡವನ್ನು ಬಲಿಷ್ಠಗೊಳಿಸಲು ಫ್ರಾಂಚೈಸಿಗಳು ಮುಂದಾಗಿದ್ದಾರೆ.
ಆರ್‌ಸಿಬಿ ಫ್ರಾಂಚೈಸಿಗಳು ಮಿನಿ ಹರಾಜಿನಲ್ಲಿ ಖರೀದಿಸಬಹುದಾದ ಆಟಗಾರರ ಸಾಲಿನಲ್ಲಿ 2023ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ 137 ರನ್ ಗಳಿಸಿ ಆಸ್ಟ್ರೇಲಿಯಾ 6ನೇ ಟ್ರೋಫಿ ಗೆಲ್ಲಲು ಸಹಕರಿಸಿದ್ದ ಟ್ರಾವಿಸ್ ಹೆಡ್ ಖರೀದಿಯ ಮೇಲೆ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಡಿಕೆಶಿ ವಿರುದ್ಧ ಸಿಬಿಐ ತನಿಖೆ ಕಾನೂನು ಬಾಹಿರ: ಸಚಿವ ಪ್ರಿಯಾಂಕ್ ಖರ್ಗೆ
ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ 2022ರಲ್ಲಿ ಪ್ಲೇಆಫ್‍ಗೇರಿದ್ದ ಆರ್‌ಸಿಬಿ ಹದಿನಾರನೇ ಆವೃತ್ತಿಯಲ್ಲಿ ನಾಕೌಟ್ ಹಂತಕ್ಕೇರುವಲ್ಲಿ ಮುಗ್ಗರಿಸಿ ಅಭಿಮಾನಿಗಳನ್ನು ನಿರಾಸೆಯ ಕಡಲಿನಲ್ಲಿ ಮುಳುಗಿಸಿತ್ತು. ಆದರೆ 17ನೇ ಆವೃತ್ತಿಯ ಐಪಿಎಲ್‍ನಲ್ಲಿ ತಾವು ಹಿಂದಿನ ಆವೃತ್ತಿಗಳಲ್ಲಿ ಮಾಡಿಕೊಂಡಿರುವ ತಪ್ಪುಗಳನ್ನು ಮಿನಿ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿಸಿ ಚೊಚ್ಚಲ ಟ್ರೋಫಿ ಗೆಲ್ಲಲು ಮುಂದಾಗಿದೆ.
ಆರ್‌ಸಿಬಿ 2022ರ ಮೆಗಾ ಹರಾಜಿನಲ್ಲಿ 10.37 ಕೋಟಿ ನೀಡಿ ಸ್ಪಿನ್ನರ್ ಕರಣ್ ಶರ್ಮಾರನ್ನು ಖರೀದಿಸಿತ್ತಾದರೂ ಅವರಿಂದ ನಿರೀಕ್ಷಿತ ಫಲಿತಾಂಶ ಬಂದಿರಲಿಲ್ಲ, ಆದ್ದರಿಂದ ಅವರನ್ನು ಕೈಬಿಟ್ಟು ಶ್ರೀಲಂಕಾದ ಯುವ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಖರೀದಿಗೆ ಆರ್‌ಸಿಬಿ ಫ್ರಾಂಚೈಸಿ ಮುಂದಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ 448 ರನ್ ಹಾಗೂ 16 ವಿಕೆಟ್ ಕಬಳಿಸಿದ್ದ ನೆದರ್‍ಲ್ಯಾಂಡ್‍ನ ಬಾಸ್ ಡಿ ಲೀಡೆ ಹಾಗೂ ದಿನೇಶ್ ಕಾರ್ತಿಕ್‍ಗೆ ಕೊಕ್ ನೀಡಿ ಶ್ರೀಲಂಕಾದ ಸ್ಪೋಟಕ ಆಟಗಾರ ಹಾಗೂ ವಿಕೆಟ್ ಕೀಪರ್ ಸದಿರ ಸಮರವಿಕ್ರಮರ ಖರೀದಿಗೆ ಫ್ರಾಂಚೈಸಿ ಕಣ್ಣಿಟ್ಟಿದೆ.
ಆರ್‌ಸಿಬಿಯಿಂದ ಸ್ಟಾರ್ ಆಟಗಾರರು ಔಟ್
ಬೆಂಗಳೂರು, ನ. 24- ಹದಿನೇಳನೇ ಆವೃತ್ತಿಯ ಐಪಿಎಲ್ ಹರಾಜಿಗೆ ಆಟಗಾರರನ್ನು ಬಿಟ್ಟುಕೊಡಲು ಇನ್ನು 2ನೇ ದಿನಗಳು ಬಾಕಿ ಉಳಿದಿದ್ದು, ಆರ್‍ಸಿಬಿಯ ಸ್ಟಾರ್ ಆಟಗಾರರು ಔಟ್ ಆಗುವ ಸಾಧ್ಯತೆಗಳಿವೆ. ಈಗಾಗಲೇ ವೇಗಿ ಹರ್ಷಲ್ ಪಟೇಲ್ ಅವರ ಬದಲಿಗೆ ಶಾರ್ದೂಲ್ ಠಾಕೂರ್‍ರನ್ನು ಕೆಕೆಆರ್‍ನಿಂದ ಟ್ರೇಡ್ ವಿಂಡೋ ಮೂಲಕ ಆರ್‌ಸಿಬಿ ಖರೀದಿಸಿದೆ ಎಂಬ ಸುದ್ದಿಯು ದಟ್ಟವಾಗಿ ಹರಡಿದೆ.
ಈಗ 16ನೇ ಆವೃತ್ತಿಯ ಐಪಿಎಲ್ ನಲ್ಲಿ ಹೆಚ್ಚಾಗಿ ಮಿಂಚದ ದಿನೇಶ್ ಕಾರ್ತಿಕ್, ಒಂದು ಒಂದೇ ಪಂದ್ಯದಲ್ಲೂ ಆಡದ ಫಿನ್ ಅಲೆನ್ ಹಾಗೂ ಯುವ ವಿಕೆಟ್ ಕೀಪರ್ ಅನೂಜ್‍ರಾವತ್‍ಗೆ ಆರ್‍ಸಿಬಿ ಫ್ರಾಂಚೈಸಿ ತಂಡದಿಂದ ಕೈಬಿಡಲು ಸಿದ್ಧವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.