Friday, May 3, 2024
Homeರಾಜ್ಯಡಿಕೆಶಿ ವಿರುದ್ಧ ಸಿಬಿಐ ತನಿಖೆ ಕಾನೂನು ಬಾಹಿರ: ಸಚಿವ ಪ್ರಿಯಾಂಕ್ ಖರ್ಗೆ

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಕಾನೂನು ಬಾಹಿರ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ನ.24- ಡಿ.ಕೆ.ಶಿವ ಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿರುವ ಹಿಂದಿನ ಬಿಜೆಪಿ ಸರ್ಕಾರದ ನಿರ್ಧಾರ ರಾಜಕೀಯ ಪ್ರೇರಿತ ಮತ್ತು ಸಂಪೂರ್ಣ ಕಾನೂನುಬಾಹಿರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲಿ ನಡೆದ ಪ್ರಕ್ರಿಯೆಗಳ ದಾಖಲಾತಿ ಗಳೊಂದಿಗೆ ಸಮಗ್ರ ವಿವರಣೆ ನೀಡಿದರು ಜೊತೆಗೆ ಬಿಜೆಪಿ ನಾಯಕರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಹಿಂದಿನ ಸರ್ಕಾರದ ನಿರ್ಧಾರವನ್ನು ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂಪಡೆದ ಬಳಿಕ ಬಿಜೆಪಿಯ ನಾಯಕರು ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ದೊಡ್ಡ ಮಟ್ಟದಲ್ಲಿ ಟೀಕೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಸಂವಿಧಾನವನ್ನು ಗೌರವಿಸುತ್ತದೆ. ಅದರಂತೆ ನಡೆದುಕೊಳ್ಳುತ್ತದೆ. ಬಿಜೆಪಿಯವರು ನಿಯಮಾವಳಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿ ಅನುಮತಿ ನೀಡಿದ್ದರು. ಇದರ ಹಿಂದೆ ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕರನ್ನು ಹತ್ತಿಕ್ಕುವ ರಾಜಕೀಯಪ್ರೇರಿತ ದುರದ್ದೇಶವಿತ್ತು ಎಂದು ಆರೋಪಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ವಿರುದ್ದವೂ ಬಿಜೆಪಿ ಅಧಿಕಾರಕ್ಕೆ ಬಂದ 9 ವರ್ಷಗಳಿಂದಲೂ ರಾಜಕೀಯ ಕಾರಣಕ್ಕಾಗಿ ಸಿಬಿಐ, ಇಡಿ, ಆದಾಯ ತೆರಿಗೆ ಸೇರಿದಂತೆ ಒಂದಿಲ್ಲೊಂದು ತನಿಖೆ ನಡೆಯುತ್ತಿವೆ. ಚುನಾವಣೆ ವೇಳೆ ಕಾಂಗ್ರೆಸಿಗರ ಮೇಲೆ ಐಟಿ ದಾಳಿಗಳಾಗುತ್ತವೆ. ಅದೇ ಬಿಜೆಪಿ ಯವರು ದರೋಡೆ ಮಾಡಿರಲಿ, ಕೊಲೆ ಮಾಡಿದ್ದರೂ ಕೂಡ ಯಾವುದೇ ಕ್ರಮಗಳಾಗುವುದಿಲ್ಲ ಎಂದು ಟೀಕಿಸಿದರು.

ಡಿ.ಕೆ.ಶಿವಕುಮಾರ್ ಪ್ರಕರಣದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಯಡಿಯೂರಪ್ಪ ವಿರುದ್ಧ ಇರುವ ಪ್ರಕರಣ, ಬಿಟ್ ಕಾಯಿನ್ ಹಗರಣ, ವಿಜಯೇಂದ್ರ ಅವರ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಏಕೆ ಪ್ರಸ್ತಾಪ ಮಾಡುವುದಿಲ್ಲ, ಸಿಬಿಐ ತನಿಖೆಗೆ ಏಕೆ ಒತ್ತಾಯಿಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

75 ವರ್ಷಗಳ ಇತಿಹಾಸದಲ್ಲಿ ಅಕ್ರಮ ಆಸ್ತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಉದಾರಹಣೆಗಳಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಆತುರಾತುರವಾಗಿ ಯಾವ ಕಾರಣಕ್ಕೆ ನಿರ್ಧಾರ ಕೈಗೊಳ್ಳಲಾಯಿತು ಎಂಬುದಕ್ಕೆ ಬಿಜೆಪಿಯವರು ಉತ್ತರಿಸಬೇಕು ಎಂದು ಸವಾಲು ಹಾಕಿದರು.

ಪ್ರಸ್ತುತ ನಮ್ಮ ಸರ್ಕಾರ ಸಾಂವಿಧಾನಿಕವಾಗಿ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತು ನಾವು ಯಾವುದೇ ವೇದಿಕೆಯಲ್ಲಾದರೂ ಚರ್ಚೆಗೆ ಸಿದ್ದರಿದ್ದೇವೆ. ಬಿಜೆಪಿಯವರು ಬರಲಿ, ವಿಧಾನಮಂಡಲದಲ್ಲೂ ಚರ್ಚೆಯಾಗಲಿ. ಸುಪ್ರೀಂಕೋರ್ಟ್‍ನ ಮೂರು ತೀರ್ಪುಗಳಿವೆ. ಅವುಗಳನ್ನು ಆಧರಿಸಿಯೇ ನಾವು ಪ್ರಕರಣಕ್ಕೆ ನೀಡಿದ ಅನುಮತಿಯನ್ನು ಹಿಂಪಡೆದಿದ್ದೇವೆ ಎಂದು ಸಮರ್ಥಿಸಿಕೊಂಡರು. ನಮಗೆ ಯಾವುದೇ ಭಯವಿಲ್ಲ.

ಬಿಜೆಪಿಯವರದು ಅವಿವೇಕತನದ ಪರಮಾವ. ಕೇಂದ್ರ ಸರ್ಕಾರದ ಮಾನದಂಡಗಳು, ನಿಯಮಗಳಿಗೆ ವಿರುದ್ಧವಾಗಿ ಯಡಿಯೂರಪ್ಪ ಅವರ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಅದನ್ನು ನಾವು ಸರಿಪಡಿಸಿದ್ದೇವೆ. ಆದರೆ ಕಾನೂನಿನ ಪರಿಜ್ಞಾನ ಇಲ್ಲದ ಬಿಜೆಪಿಯವರು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.

ಡಿ.ಕೆ.ಶಿವಕುಮಾರ್ ವಿರುದ್ಧ ಇರುವ ಪ್ರಕರಣ ಗಳು ಸಂಪೂರ್ಣ ವೈಯಕ್ತಿಕ. ಅದನ್ನು ಅವರು ಕಾನೂನಾತ್ಮಕವಾಗಿಯೇ ನಿಭಾಯಿಸಿಕೊಳ್ಳುತ್ತಾರೆ. ಪಕ್ಷ ಅವರ ಬೆಂಬಲಕ್ಕಿದೆ. ನಮ್ಮ ಮುಂದಿರುವ ಪ್ರಶ್ನೆ ಎಂದರೆ ಸಿಬಿಐ ತನಿಖೆಗೆ ಅನುಮತಿ ನೀಡಿರುವ ಲೋಪಗಳ ಕುರಿತಾಗಿದೆ ಎಂದು ವಿವರಿಸಿದರು.

ಜಾರಿ ನಿರ್ದೇಶನಾಲಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ 2019ರ ಸೆಪ್ಟೆಂಬರ್ 9ರಂದು ಪತ್ರ ಬರೆದು ಡಿ.ಕೆ.ಶಿವಕುಮಾರ್ ಹಾಗು ಇತರರ ವಿರುದ್ಧ ಆದಾಯ ತೆರಿಗೆ ದಾಖಲಿಸಿರುವ ಪ್ರಕರಣದ ಬಗ್ಗೆ ಮಾಹಿತಿ ನೀಡಿದೆ. ಇದನ್ನು ಸಿಬಿಐಗೂ ಜೊತೆಗೂ ಹಂಚಿಕೊಂಡಿರುವುದಾಗಿ ಹೇಳಿದೆ. ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಾದಾಗ ಮಾಹಿತಿ ಹಂಚಿಕೊಳ್ಳುವುದು ಕಡ್ಡಾಯ. ಹಾಗಾಗಿ ಇಡಿ ಪತ್ರ ಬರೆದಿದೆ. ಎಲ್ಲಿಯೂ ಸಿಬಿಐಗೆ ವಹಿಸುವಂತೆ ಒಂದೇ ಒಂದು ಅಕ್ಷರವನ್ನೂ ನಮೂದಿಸಿಲ್ಲ. ಕೇಂದ್ರದ ಯಾವ ಇಲಾಖೆಗಳು ಇದನ್ನು ಪ್ರಸ್ತಾಪಿಸಿಲ್ಲ ಎಂದು ಹೇಳಿದರು.

ಶಿವಕುಮಾರ್ ತಪಿತಸ್ಥ ಎಂಬುದನ್ನು ಸರ್ಕಾರ ಒಪ್ಪಿಕೊಂಡಿದೆ : ಸಿ.ಟಿ. ರವಿ

ಆದಾಯ ತೆರಿಗೆ ಸೆ.2ರಂದು ನೀಡಿದ ದೂರು ಆಧರಿಸಿ ಕ್ರಮ ಕೈಗೊಂಡಿರುವುದಾಗಿ ಜಾರಿನಿರ್ದೇಶನಾಲಯ ನೀಡಿರುವ ಮಾಹಿತಿಯ ಪತ್ರವನ್ನು ಮುಖ್ಯ ಕಾರ್ಯದರ್ಶಿಯವರು ಸೆ.11ರಂದು ಸ್ವೀಕರಿಸಿದ್ದಾರೆ.
ಮಾರನೆಯ ದಿನ ಅಂದರೆ ಸೆ.12ರಂದು ಅನಗತ್ಯವಾಗಿದ್ದರೂ ಅದನ್ನು ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ( ಡಿಪಿಎಆರ್)ಗೆ ರವಾನಿಸಲಾಗಿದೆ.

ಅಲ್ಲಿನ ಅೀಧಿನ ಕಾರ್ಯದರ್ಶಿಯವರು ಜನಪ್ರತಿನಿಗೆ ಸಂಬಂಧಪಟ್ಟ ಪ್ರಕರಣವಾಗಿರುವುದರಿಂದ ಪೂರ್ಣಾನುಮತಿ ಅಗತ್ಯವಿದೆ. ಆದರೆ ರಾಜ್ಯಪಾಲರು ಅಥವಾ ವಿಧಾನಸಭಾಧ್ಯಕ್ಷರ ಪೈಕಿ ಯಾರಿಂದ ಅನುಮತಿ ಪಡೆಯಬೇಕೆಂಬ ಸ್ಪಷ್ಟನೆ ನೀಡಬೇಕು ಮತ್ತು ದೆಹಲಿ ವಿಶೇಷ ಅಧಿಕಾರ ಕಾನೂನಿನ ಪ್ರಕಾರ ಜೊತೆಗೆ ಸಿಬಿಐ ತನಿಖೆಗೆ ಗೃಹ ಸಚಿವಾಲಯ ಅನುಮತಿ ನೀಡಬೇಕೆಂದು ಹೇಳಿ ಕಡತವನ್ನು ಮುಂದೂಡಿದ್ದಾರೆ.

ಸೆ.13ರಂದು ಗೃಹ ಇಲಾಖೆಯ ಅೀನ ಕಾರ್ಯದರ್ಶಿಯವರು ಪತ್ರ ಸ್ವೀಕರಿಸಿರುತ್ತಾರೆ. ಸೆ.16ರಂದು ಅವರು ಅಭಿಪ್ರಾಯ ತಿಳಿಸಿ ಪಿಎಂಎಲ್‍ಎ ಕಾಯ್ದೆ ಅೀಧಿನವಾಗಿರುವುದರಿಂದ ತನಿಖೆ ನಡೆಸದೆ ನೇರವಾಗಿ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲಿಂದ ಉಪಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ವ್ಯವಹಾರಗಳಾಗುತ್ತವೆ. ಪ್ರಕರಣದ ಬಗ್ಗೆ ಅಭಿಪ್ರಾಯ ನೀಡುವಂತೆ ಅಪರ ಮುಖ್ಯ ಕಾರ್ಯದರ್ಶಿಯವರು ಆಗಿನ ಅಡ್ವೋಕೇಟ್ ಜನರಲ್ ಅವರಿಗೆ ಸೆ.17ರಂದು ಮನವಿ ಮಾಡುತ್ತಾರೆ. ಐದು ದಿನವಾದರೂ ಅಲ್ಲಿಂದ ಪ್ರತಿಕ್ರಿಯೆ ಬರುವುದಿಲ್ಲ. ಈ ನಡುವೆ ಎಜಿ ಕಚೇರಿಯಲ್ಲಿ ಕಡತ ಬಾಕಿ ಇರುವ ಹಿನ್ನಲೆಯಲ್ಲಿ ಆತುರಾತುರವಾಗಿ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಸೆ.24ರಂದು ಹೊಸದಾಗಿ ಕಡತವನ್ನು ತೆರೆಯಲಾಗುತ್ತದೆ.

ನ. 27ರಂದು ಸಿಎಂ ಸಿದ್ದರಾಮಯ್ಯ ಜನತಾ ದರ್ಶನ

ಅದೇ ದಿನ ಸಿಬಿಐ ತನಿಖೆಗೆ ವಹಿಸುವಂತೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕ ಆದೇಶ ನೀಡುತ್ತಾರೆ. ಮಾರನೇ ದಿನ ಸಿಬಿಐ ತನಿಖೆಗೆ ಅನುಮತಿ ನೀಡಲಾಗುತ್ತದೆ. ಆ ಬಳಿಕ ಅಡ್ವೋಕೇಟ್ ಜನರಲ್ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿ ಸಿಬಿಐ ತನಿಖೆಗೆ ವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.

ಇಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿರುವ 5 ಮಾನದಂಡಗಳ ಪೈಕಿ ಯಾವುದನ್ನೂ ಪಾಲನೆ ಮಾಡಲಾಗಿಲ್ಲ. ರಾಜ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಬೇಕಾದರೆ ಪ್ರಕರಣದ ಸಂಪೂರ್ಣ ಮಾಹಿತಿ ಇರಬೇಕು, ಎಫ್‍ಐಆರ್ ಪ್ರತಿ, ತನಿಖೆಯ ಹಂತ, ಬಂಧನದ ವಿವರಗಳನ್ನು ಒದಗಿಸಬೇಕು, ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ ಅದರ ಮಾಹಿತಿ, ಸಿಬಿಐ ತನಿಖೆಯನ್ನು ಸಮರ್ಥಿಸುವ ಕಾರಣಗಳು, ರಾಜ್ಯ ಪೊಲೀಸರಿಂದ ವಿಚಾರಣೆ ಸಾಧ್ಯವಿಲ್ಲ ಎಂಬುದನ್ನು ದೃಢೀಕರಿಸಬೇಕು. ಅಂತಾರಾಜ್ಯ, ಅಂತಾರಾಷ್ಟ್ರೀಯ ವ್ಯಾಪ್ತಿ ಇರುವ ಬಗ್ಗೆ ವಿವರಣೆ ನೀಡಬೇಕಿದೆ. ಇದಾವುದನ್ನೂ ಅನುಸರಿಸಿಲ್ಲ.

ಸಿಬಿಐ ತನಿಖೆಗೆ ಅನುಮತಿ ನೀಡುವಾಗ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿರಲಿಲ್ಲ. ಅವರು ಜೈಲಿನಲ್ಲೂ ಇರಲಿಲ್ಲ. ನ್ಯಾಯಾಲಯಗಳಲ್ಲೂ ಪ್ರಕರಣಗಳಿರಲಿಲ್ಲ. ಮೇಲಾಗಿ ಅಡ್ವೋಕೇಟ್ ಜನರಲ್ ಅವರೇ ವಿರೋಧ ವ್ಯಕ್ತಪಡಿಸಿದರು. ಇದೆಲ್ಲವನ್ನೂ ಹೊರತುಪಡಿಸಿ ಸಿಬಿಐ ತನಿಖೆಗೆ ಕೊಟ್ಟಿದ್ದರ ಉದ್ದೇಶ ಏನು ಎಂಬುದನ್ನು ರಾಜ್ಯ ಜನರಿಗೆ ಬಿಜೆಪಿ ನಾಯಕರು ಉತ್ತರಿಸಬೇಕಿದೆ ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.

RELATED ARTICLES

Latest News