ಬೆಂಗಳೂರು, ಅ. 6– ಮಾಗಡಿ ತಾಲ್ಲೂಕು ಪುರಸಭೆ ಮುಂಭಾಗದಲ್ಲಿ ಇರುವ ಪೂಜ್ಯ ಕೆಂಪೇಗೌಡರ ಪ್ರತಿಮೆ ಉಳಿವಿಗಾಗಿ ಮತ್ತು ಪ್ರತಿಮೆ ಸುತ್ತ ಮುತ್ತಲು ಇರುವ 400ಕ್ಕೂ ಹೆಚ್ಚು ಮರಗಳ ಮರಣಹೋಮ ಮಾಡುಲು ಹೊರಟಿರುವ ಪುರಸಭೆ ಮತ್ತು ಸ್ಥಳೀಯ ಶಾಸಕರ ನಡವಳಿಕೆಗೆ ಶ್ರೀ ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ.ಎಚ್.ಎಂ.ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಾಡು ಕಟ್ಟಿದ ಕೆಂಪೇಗೌಡರಿಗೆ ಅವರ ಪ್ರತಿಮೆ ಸ್ಥಳವಾಕಾಶ ಇಲ್ಲದಂತೆ ಆಗಿದೆ ಎಂಬುದು ಶೋಚನೀಯ ಸಂಗತಿ. ಕೆಂಪೇಗೌಡರು ಪ್ರತಿಮೆ ಕಳೆದ 22ವರ್ಷಗಳ ಹಿಂದೆ ಪುರಸಭೆ ಮುಂಭಾಗದಲ್ಲಿ ಪ್ರತಿಷ್ಠಾಪನೆ ಮಾಡಿ, ಪ್ರತಿವರ್ಷ ಕೆಂಪೇಗೌಡ ಜನದಿನಾಚರಣೆ ಅದ್ದೂರಿಯಾಗಿ ಅಚರಿಸಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
ಅಭಿವೃದ್ಧಿಯ ಹೆಸರಿನಲ್ಲಿ ಪೂಜ್ಯ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮತ್ತು ಅದರ ಸುತ್ತಮುತ್ತಲ 400 ಮರ ಗಿಡಗಳಗಳನ್ನು ಕಡಿಯಲಾಗುತ್ತಿದೆ. ಮಾಗಡಿ ಕ್ಷೇತ್ರದಲ್ಲಿ ಸ್ಥಳೀಯ ಶಾಸಕರು, ಪುರಸಭೆ ಅಧಿಕಾರಿಗಳು ಬೇಜವಾಬ್ದಾರಿ ಆಡಳಿತ ಮಾಗಡಿ ಕೆಂಪೇಗೌಡರರ ಕುರಿತು ಅಭಿಮಾನವಿಲ್ಲದ ಶೂನ್ಯರು ಇವರು ಎಂದು ಕಿಡಿಕಾರಿದರು.
ಕೋಟೆ ಕಂದಕ ಮುಚ್ಚುವ ಕಾರ್ಯ ಮಾಡುವ ಪ್ರಯತ್ನ ಮಾಡಿದರು ಇದೀಗ ಕೆಂಪೇಗೌಡರ ಪ್ರತಿಮೆ ತೆಗೆಯುವ ಪ್ರಯತ್ನ, 400ಮರಗಳ ತೆರವು ಕಾರ್ಯಕ್ಕೆ ತಡೆ ನೀಡಬೇಕು ಕೋರ್ಟ್ ನಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಜನರ ಕೆಂಪೇಗೌಡ ಪ್ರತಿಮೆ ಸ್ಥಳಾಂತರ ಮಾಡಬಾರದು ಹಾಗೂ ಮರಗಳನ್ನು ಉಳಿಸಬೇಕು ಎಂದು ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೇಳಿದರು. ದಲಿತ ಸಮುದಾಯದ ಮುಖಂಡರಾದ ಜಯರಾಮಯ್ಯ, ಹಿರಿಯ ಪತ್ರಕರ್ತರಾದ ಕುಮಾರ್ ರವರು ಭಾಗವಹಿಸಿದ್ದರು.