ನಾಳೆಯಿಂದ ಮತ್ತೆ ಪ್ರಾರಂಭ ಜೆಡಿಎಸ್ ಪಂಚರತ್ನ ರಥಯಾತ್ರೆ

ಬೆಂಗಳೂರು, ಡಿ.14-ಮ್ಯಾಂಡೋಸ್ ಚಂಡ ಮಾರುತದ ಪ್ರಭಾವದಿಂದ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆ ನಾಳೆಯಿಂದ ಮತ್ತೆ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಪ್ರಾರಂಭವಾಗಲಿದೆ. ಪೂರ್ವ ನಿಗದಿಯಂತೆ ಮೊದಲ ಹಂತದ ಮುಂದುವರೆದ ಪಂಚರತ್ನ ರಥಯಾತ್ರೆಯು ಡಿ.11ರಂದು ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಮರು ಆರಂಭವಾಗಬೇಕಿತ್ತು. ಮಳೆಯಿಂದ ಪಂಚರತ್ನ ರಥಯಾತ್ರೆಯನ್ನು ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿತ್ತು. ಕಳೆದ ಒಂದು ವಾರದಿಂದ ನಿರಂತರವಾಗಿ ಬರುತ್ತಿದ ಮಳೆ ಬಿಡುವು ಕೊಟ್ಟಿರುವ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಿಂದ ಈ ಯಾತ್ರೆಯನ್ನು ಪ್ರಾರಂಭ ಮಾಡಲಾಗುತ್ತದೆ. ಮಾಜಿ […]

ಪ್ರೀತಿಸಿದ ಹುಡುಗಿ ಸಿಗದಿದ್ದಕ್ಕೆ ಯುವಕ ಆತ್ಮಹತ್ಯೆ

ಮಾಗಡಿ,ಡಿ.7- ಪ್ರೀತಿಸಿದ ಹುಡುಗಿ ಸಿಗುವುದಿಲ್ಲ ಎಂದು ಮನನೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ದೊಡ್ಡಸೋಮನಹಳ್ಳಿಯಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವಕನನ್ನು ಮೋಹನ್ ಕುಮಾರ್.ಆರ್(29) ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಹೊಸಪಾಳ್ಯದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಹುಡುಗಿಯ ತಾಯಿಯೇ ಮುಂದೆ ನಿಂತು ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಬೇರೆ ಹುಡುಗನಿಗೆ ಮದುವೆ ಮಾಡಿಕೊಡುವ ವಿಚಾರ ತಿಳಿದು ಮನನೊಂದು ಹುಡುಗಿಯ ಮನೆಯ ಬಳಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಮೃತನು ಡೆತ್ ನೋಟ್ […]

ಶೆಡ್‍ನ ಗೋಡೆ ಕುಸಿದು ಇಬ್ಬರ ಮಕ್ಕಳ ಸಾವು

ಮಾಗಡಿ,ಆ.7- ರಾತ್ರಿ ಸುರಿದ ಮಳೆಗೆ ಶೆಡ್‍ನ ಗೋಡೆ ಕುಸಿದ ಪರಿಣಾಮ ನೇಪಾಳ ಮೂಲದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಗಂಡು ಮಗು ಫರ್ಬಿನ್(4), ಹೆಣ್ಣು ಮಗು ಇಷಿಕಾ(3) ಮೃತಪಟ್ಟ ಮಕ್ಕಳು. ನೇಪಾಳ ಮೂಲದ ದಂಪತಿ ಇಬ್ಬರು ಮಕ್ಕಳೊಂದಿಗೆ ಕೆಲಸ ಹರಿಸಿಕೊಂಡು ಮಾಗಡಿ ತಾಲ್ಲೂಕಿಗೆ ಬಂದಿದ್ದು, ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸೋಲೂರಿನ ಕೂಡ್ಲೂರು ಕ್ರಾಸ್ ಬಳಿಯ ಮೊಬಿನ್ ಶರೀಫ್ ಎಂಬುವರಿಗೆ ಸೇರಿದ ಶೆಡ್‍ನಲ್ಲಿ ಈ ಕುಟುಂಬ ವಾಸವಾಗಿದೆ. ಕಳೆದ […]