Thursday, April 16, 2026
Homeರಾಜ್ಯಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು, ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲಿ ಗಾಂಜಾ ಗಮ್ಮತ್ತು, ಖೈದಿಗಳ ಬಿಂದಾಸ್‌‍ ಲೈಫ್‌ ವಿಡಿಯೋ ವೈರಲ್

Video of prisoners in Hubballi sub-jail goes viral

ಹುಬ್ಬಳ್ಳಿ, ಫೆ.21- ಬೆಂಗಳೂರು, ಶಿವಮೊಗ್ಗ ಆಯ್ತು ಇದೀಗ ಹುಬ್ಬಳ್ಳಿಯ ಸಬ್‌ ಜೈಲ್‌ನಲ್ಲೂ ಖೈದಿಗಳು ರಾಜಾರೋಷವಾಗಿ ಬಿಂದಾಸ್‌‍ ಲೈಫ್‌ ನಡೆಸುತ್ತಿರುವ ವಿಡಿಯೋ ಬಹಿರಂಗವಾಗಿದೆ.ಕಾರಾಗೃಹಗಳ ಡಿಜಿಪಿ ಅಲೋಕ್‌ ಕುಮಾರ ಅವರು ಹುಬ್ಬಳ್ಳಿ-ಧಾರವಾಡ ಸಬ್‌ ಜೈಲ್‌ಗಳಿಗೆ ಭೇಟಿ ನೀಡಿ ಒಂದು ವಾರ ಕೂಡ ಆಗಿಲ್ಲ, ಆದರೆ ಜೈಲಿನಲ್ಲಿ ಗಾಂಜಾ ಹಾವಳಿ ಆರಂಭವಾಗಿದೆ.

ಹುಬ್ಬಳ್ಳಿಯ ಉಪ ಕಾರಾಗೃಹದಲ್ಲಿ ರಾಜಾರೋಷವಾಗಿ ಅಕ್ರಮವಾಗಿ ಗಾಂಜಾ ಸರಬರಾಜಾಗುತ್ತಿದೆ. ಸಬ್‌ ಜೈಲ್‌ ಹಾಗೂ ಸೆಂಟ್ರಲ್‌ ಜೈಲ್‌ನಲ್ಲಿರುವ ಕೆಲವು ಖೈದಿಗಳ ಕೈಯಲ್ಲಿ ಎಗ್ಗಿಲ್ಲದೇ ಗಾಂಜಾ ಸೇರುತ್ತಿವೆ. ಕಾರಾಗೃಹಗಳ ಡಿಜಿಪಿ ಅಲೋಕ್‌ ಕುಮಾರ್‌ ಅವರು ಕಳೆದ ಮೂರ್ನಾಲ್ಕು ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಉಪ ಕಾರಾಗೃಹ ಹಾಗೂ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದ ಡಿಜಿಪಿ, ಭೇಟಿ ನೀಡಿ ಮೂರು ದಿನಗಳಲ್ಲೇ ಎಗ್ಗಿಲ್ಲದೇ ಸಬ್‌ ಜೈಲ್‌ನಲ್ಲಿ ಗಾಂಜಾ ಸರಬರಾಜು ಆಗುತ್ತಿದೆ. ಕಾರಾಗೃಹದೊಳಗಿನ ಚಲನವಲನಗಳ ಫೋಟೋಸ್‌‍ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇನ್ನು ಹುಬ್ಬಳಿ-ಧಾರವಾಡ ಅವಳಿ ನಗರದಲ್ಲಿ ಗಾಂಜಾ, ಮಾದಕ ವಸ್ತುಗಳ ಮುಕ್ತಿಯಾದರೂ ಕೂಡ, ಜೈಲಿಗೆ ಎಲ್ಲಿಂದ ಬರುತ್ತಿದೆ..? ನಟೋರಿಯಸ್‌‍, ಕುಖ್ಯಾತ ರೌಡಿಶೀಟರ್‌ಗಳೇ ತುಂಬಿರುವ ಹುಬ್ಬಳ್ಳಿಯ ಉಪಕಾರಾಗೃಹದಲ್ಲಿ ಗಾಂಜಾ ಸೇರುತ್ತಿದೆ. ಇದರ ಹಿಂದೆ ಇರುವ ಕೈವಾಡ ಯಾರದು ಎಂಬುದು ಮೇಲಾಧಿಕಾರಿಗಳು ತನಿಖೆ ಮಾಡಿ ಇದಕ್ಕೆ ಬ್ರೇಕ್‌ ಹಾಕಬೇಕಿದೆ.

RELATED ARTICLES

Latest News