Thursday, April 16, 2026
Homeಜಿಲ್ಲಾ ಸುದ್ದಿಗಳುಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

ಕಲಬುರಗಿಯಲ್ಲೂ ಶಿವಾಜಿ ಜಯಂತಿ ವೇಳೆ ಮಾರಾಮಾರಿ

Clashes between two communities on Shivaji Jayanti in Kalaburagi

ಕಲಬುರಗಿ,ಫೆ.21-ಬಾಗಲಕೋಟೆ ಬಳಿಕ ಕಲಬುರಗಿಯಲ್ಲೂ ಶಿವಾಜಿ ಜಯಂತಿವೇಳೆ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆದಿದೆ. ಚಿತ್ತಾಪುರ ತಾಲೂಕಿನ ರಾವೂರ್‌ ಗ್ರಾಮದಲ್ಲಿ ಈ ಘಟನೆ ನಡೆದಿದೆ.ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಟ ನಡೆದಿದ್ದು ಹಲವರು ಗಾಯಗೊಂಡಿದ್ದಾರೆ.

ರಾವೂರ್‌ ಗ್ರಾಮದ ಗೋಕುಲ ನಗರದ ಗಣೇಶ್‌ ಕಟ್ಟೆಯ ಮೇಲೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಶಿವಾಜಿ ಜಯಂತಿ ಆಚರಣೆ ಮಾಡಲಾಗುತ್ತಿತ್ತು. ಡಿಜೆ ಹಾಕಿ ಡ್ಯಾನ್ಸ್ ಮಾಡುವ ವೇಳೆ ಮತ್ತೊಂದು ಸಮುದಾಯ ಆಕ್ಷೇಪವೆತ್ತಿದೆ.

ಬಳಿಕ ಎರಡು ಸಮುದಾಯದ ನಡುವೆ ಕಟ್ಟಿಗೆ, ಕಲ್ಲುಗಳಿಂದ ಹೊಡೆದಾಟ ನಡೆದಿದೆ.
ವಾಡಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಎರಡು ಸಮುದಾಯಗಳ ನಡುವೆ ಸಂಧಾನ ಮಾಡಿದ ಹಿನ್ನೆಲೆ ಎರಡೂ ಸಮುದಾಯದ ಕಡೆಯವರು ಯಾವುದೇ ದೂರು ದಾಖಲಿಸಿಲ್ಲ.

RELATED ARTICLES

Latest News