Homeರಾಜ್ಯಗಾಯದ ಮೇಲೆ ಬರೆ ಎಳೆದ CWRC : ತಮಿಳುನಾಡಿಗೆ 15 ದಿನ 3,500 ಕ್ಯುಸೆಕ್ಸ್ ನೀರು...

ಗಾಯದ ಮೇಲೆ ಬರೆ ಎಳೆದ CWRC : ತಮಿಳುನಾಡಿಗೆ 15 ದಿನ 3,500 ಕ್ಯುಸೆಕ್ಸ್ ನೀರು ಹರಿಸಲು ಸೂಚನೆ

CWRC instructs Tamil Nadu to release 3,500 cusecs of water for 15 days

ಬೆಂಗಳೂರು,ಜು.28- ಒಂದೆಡೆ ಈ ಬಾರಿ ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗದೆ ಬರಗಾಲ ಆವರಿಸಿರುವ ಬೆನ್ನಲ್ಲೇ ಕಾವೇರಿ ಜಲಾನಯನ ಅಣೆಕಟ್ಟಿನಿಂದ ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್ಸ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಕರ್ನಾಟಕಕ್ಕೆ ಸೂಚಿಸಿದೆ.

ಸಿಡಬ್ಲ್ಯೂಆರ್‌ಸಿ ಆದೇಶವು ಕರ್ನಾಟಕಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ್ದು, ಮೊದಲೇ ಮಳೆಯಾಗದೇ ಕುಡಿಯುವ ನೀರಿಗೂ ಹಾಹಾಕಾರ ಎದ್ದಿರುವ ಸಂದರ್ಭದಲ್ಲಿ ನೆರೆಯ ತಮಿಳುನಾಡಿಗೆ ನೀರು ಹರಿಸುವುದು ಎಲ್ಲಿಂದ? ಎಂಬ ಮೂಲಭೂತ ಪ್ರಶ್ನೆ ಎದುರಾಗಿದೆ.ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಸಂಗ್ರಹ, ಮಳೆಯ ಪ್ರಮಾಣ ಹಾಗೂ ಒಳಹರಿವನ್ನು ಪರಾಮರ್ಶಿಸಲು ನಡೆದ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ನವದೆಹಲಿಯಲ್ಲಿ ಕಾವೇರಿ ಜಲಾನಯನ ವ್ಯಾಪ್ತಿಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು ಮತ್ತು ಪಾಂಡಿಚೇರಿ ರಾಜ್ಯದ ಜಲಸಂಪನೂಲ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಈ ಹಿಂದೆ 2 ಬಾರಿ ಸಭೆ ನಡೆದಿದ್ದರೂ ಸಿಡಬ್ಲ್ಯೂಆರ್‌ಸಿ ನೀರು ಹರಿಸುವ ಬಗ್ಗೆಯಾಗಲೀ ಇಲ್ಲವೇ ಹರಿಸದಿರುವ ಬಗ್ಗೆ ಯಾವುದೇ ಆದೇಶ ನೀಡಿರಲಿಲ್ಲ.

ಕರ್ನಾಟಕದ ಪರವಾಗಿ ಸಭೆಯಲ್ಲಿ ಭಾಗವಹಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ನೇತೃತ್ವದ ಅಧಿಕಾರಿಗಳು ರಾಜ್ಯದ ವಸ್ತುಸ್ಥಿತಿಯನ್ನು ಸಮಿತಿಗೆ ಮನವರಿಕೆ ಮಾಡಿಕೊಟ್ಟರು.

ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯ ಕೊರತೆ ಮತ್ತು ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿಸಲು ಅಸಾಧ್ಯವೆಂದು ತನ್ನ ವಾದವನ್ನು ಮುಂದಿಟ್ಟಿತು. ಈ ಬಾರಿ ಕಾವೇರಿ ಜಲಾನಯನ ಸೇರಿದಂತೆ ಕರ್ನಾಟಕದಲ್ಲೇ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದೆ.

ಕಾವೇರಿ ಜಲಾನಯನ ವ್ಯಾಪ್ತಿಗೆ ಒಳಪಡುವ ಕೆಆರ್‌ಎಸ್‌‍, ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟುಗಳಲ್ಲಿ ನೀರು ಕನಿಷ್ಠ ಮಟ್ಟದಲ್ಲಿ ಸಂಗ್ರಹವಾಗಿದೆ.ಜಲಾಶಯಗಳಲ್ಲಿ ನೀರಿನ ಪ್ರಮಾಣ ಅತ್ಯಲ್ಪ ಇರುವ ಕಾರಣ ರೈತರು ಕೃಷಿಚಟುವಟಿಕೆಗಳಿಗೆ ನೀರು ಹರಿಸಬೇಕೆಂದು ಮನವಿ ಮಾಡಿಕೊಂಡರೂ ನಾಲೆಗಳಿಗೆ ನೀರು ಹರಿಸಿಲ್ಲ. ಸದ್ಯ ಸಂಗ್ರಹವಾಗಿರುವ ನೀರು ಕುಡಿಯಲು ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ನೀರೇ ಇಲ್ಲದಿರುವಾಗ ಎಲ್ಲಿಂದ ತಮಿಳುನಾಡಿಗೆ ನೀರು ಹರಿಸಬೇಕೆಂದು ಪ್ರಶ್ನೆ ಮಾಡಿದರು.

ಆದರೆ ಕರ್ನಾಟಕದ ವಾದವನ್ನು ಒಪ್ಪದ ಸಿಡಬ್ಲ್ಯೂಆರ್‌ಸಿ ಮುಂದಿನ 15 ದಿನಗಳವರೆಗೆ ಪ್ರತೀದಿನ ತಮಿಳುನಾಡಿಗೆ 3,500 ಕ್ಯೂಸೆಕ್‌್ಸ ನೀರು ಹರಿಸಬೇಕೆಂದು ನಿರ್ದೇಶನ ನೀಡಿತು.
ಸಭೆಯಲ್ಲಿ ಕರ್ನಾಟಕದ ಪರವಾಗಿ ವಾದ ಮಂಡಿಸಿದ ಅಧಿಕಾರಿಗಳು, ರಾಜ್ಯದ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದ ನೀರಿಲ್ಲ. ಸ್ಥಳೀಯ ರೈತರ ಬೆಳೆಗಳಿಗೆ ಹಾಗೂ ನಗರಗಳ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ.

ಹೀಗಾಗಿ ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಪ್ರಬಲವಾಗಿ ಮನವರಿಕೆ ಮಾಡಲು ಯತ್ನಿಸಿದರು.ಆದರೆ, ಕರ್ನಾಟಕದ ವಾದವನ್ನು ತಳ್ಳಾಕಿದ ಸಮಿತಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ 15 ದಿನಗಳ ಕಾಲ ನೀರು ಬಿಡುಗಡೆ ಮಾಡಲು ಸೂಚಿಸಿದೆ.

RELATED ARTICLES

Latest News