Homeರಾಜ್ಯಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದ ಬಸವರಾಜ್‌ ಪಡುಕೋಟೆ ಮನೆ ನಿರ್ಮಾಣಕ್ಕೆ ಬ್ರೇಕ್‌

ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದ ಬಸವರಾಜ್‌ ಪಡುಕೋಟೆ ಮನೆ ನಿರ್ಮಾಣಕ್ಕೆ ಬ್ರೇಕ್‌

Basavaraj Padukote, who attacked officials, halts construction of house

ಬೆಂಗಳೂರು, ಜು.28- ಶಿವಾಜಿನಗರದಲ್ಲಿ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್‌ ಪಡುಕೋಟೆಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹೊಸಕೋಟೆಯಲ್ಲಿ ಅವರು ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಗೆ ನಗರ ಪಂಚಾಯಿತಿ ತಡೆ ವಿಧಿಸಿದೆ.

ಅಧಿಕೃತ ಅನುಮತಿ ಇಲ್ಲದೆ ಹಾಗೂ ಅನುಮೋದಿತ ನಕ್ಷೆ ಉಲ್ಲಂಘಿಸಿ ಜಿ+5 ಕಟ್ಟಡ ನಿರ್ಮಾಣ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಹೊಸಕೋಟೆ ನಗರ ಪಂಚಾಯಿತಿ ಬಸವರಾಜ್‌ ಪಡುಕೋಟೆಗೆ ನೋಟಿಸ್‌‍ ಜಾರಿಗೊಳಿಸಿದೆ.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ನೀಡಿರುವ ನೋಟಿಸ್‌‍ನಲ್ಲಿ, 2026ರ ಜುಲೈ 24ರೊಳಗೆ ಕಾಮಗಾರಿ ಸ್ಥಗಿತಗೊಳಿಸಿ, ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ನಿಯಮ ಉಲ್ಲಂಘನೆ ಮುಂದುವರಿದರೆ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸಲಾಗುವುದು ಎಂದು ನಗರ ಪಂಚಾಯಿತಿ ಎಚ್ಚರಿಕೆ ನೀಡಿದೆ.ಈ ಕುರಿತು ಹೊಸಕೋಟೆ ನಗರ ಪಂಚಾಯಿತಿ ಮುಖ್ಯಾಧಿಕಾರಿ ಅಧಿಕೃತ ನೋಟಿಸ್‌‍ ಜಾರಿಗೊಳಿಸಿದ್ದಾರೆ.

RELATED ARTICLES
spot_img

Latest News