ವಾಷಿಂಗ್ಟನ್,ಅ.21- ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರಿಗೆ ಮೊದಲ ಸುತ್ತಿನ (ರೇಡಿಯೇಷನ್)ವಿಕಿರಣ ಚಿಕಿತ್ಸೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.ಬಿಡೆನ್ ಫಿಲಡೆಲ್ಫಿಯಾದ ಪೆನ್ ಮೆಡಿಸಿನ್ ರೇಡಿಯೇಶನ್ ಆಂಕೊಲಾಜಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಹಾಯಕ ಕೆಲ್ಲಿ ಸ್ಕಲ್ಲಿ ಹೇಳಿದ್ದಾರೆ.
ಬಿಡೆನ್ ಅವರ ವಯಸ್ಸು,ಆರೋಗ್ಯ ಮತ್ತು ಮಾನಸಿಕ ಫಿಟ್‌ನೆಸ್ ಬಗ್ಗೆ ಕಳವಳಗಳ ನಡುವೆ ಕಳೆದ ಚುನಾವಣೆಯಲ್ಲ ಅಧಿಕಾರವನ್ನು ತೊರೆದಿದ್ದರು.ಮೇ ತಿಂಗಳಲ್ಲಿ, 82 ವರ್ಷದ ಬಿಡೆನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಅದು ಅವರ ಮೂಳೆಗಳಿಗೆ ಹರಡಿದೆ ಎಂದು ಅಧ್ಯಕ್ಷೀಯ ಕಚೇರಿ ಘೋಷಿಸಿತು.
ರಿಪಬ್ಲಿಕನ್ ಡೊನಾಲ್‌್ಡ ಟ್ರಂಪ್‌ವಿರುದ್ಧದ ಚುನಾವಣಾ ಚರ್ಚೆಯಲ್ಲಿ ನೇರ ಹೋರಾಟ ನಡೆಸಿದರೂ ಅವರು ಪರಾಭವಗೊಂಡಿದ್ದರು.ಗ್ಲೀಸನ್ ಸ್ಕೋರ್ ಬಳಸಿಕೊಂಡು ಪ್ರಾಸ್ಟೇಟ್ ಕ್ಯಾನ್ಸರ್‌ಗಳನ್ನು ಆಕ್ರಮಣಶೀಲತೆಗೆ ಶ್ರೇಣೀಕರಿಸಲಾಗುತ್ತದೆ. ಅಂಕಗಳು 6 ರಿಂದ 10 ರವರೆಗೆ ಇರುತ್ತವೆ, 8, 9 ಮತ್ತು 10 ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತವೆ.
ಬಿಡೆನ್ ಅವರ ಕಚೇರಿಯು ಅವರ ಅಂಕ 9 ಎಂದು ಹೇಳಿದ್ದು, ಇದು ಅವರ ಕ್ಯಾನ್ಸರ್ ಅತ್ಯಂತ ಆಕ್ರಮಣಕಾರಿ ಎಂದು ಸೂಚಿಸುತ್ತದೆ.ಕಳೆದ ತಿಂಗಳು, ಬಿಡೆನ್ ಅವರ ಹಣೆಯಿಂದ ಚರ್ಮದ ಕ್ಯಾನ್ಸರ್ ಗಾಯಗಳನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಲಾಯಿತು.