ಬೆಂಗಳೂರು,ಅ.29- ನಗರಾಧ್ಯಂತ ಮೊಬೈಲ್ ಕಳ್ಳತನ, ಸುಲಿಗೆ ಮಾಡುತ್ತಿದ್ದ 42 ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ 3.2ಕೋಟಿ ರೂ. ಮೌಲ್ಯದ 1949 ಮೊಬೈಲ್ ೇನ್‌ಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಸಿಬಿ: ನಗರದ ಜನಸಂದಣಿ ಪ್ರದೇಶಗಳಲ್ಲಿ, ಬಸ್ , ರೈಲ್ವೇ ನಿಲ್ದಾಣ, ದೇವಸ್ಥಾನಗಳ ಬಳಿ ಸಾರ್ವ ಜನಿಕರ ಮೊಬೈಲ್ ಫೋನ್‌ಗಳನ್ನು ಸರಣಿ ಯಾಗಿ ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, 60 ಲಕ್ಷ ಮೌಲ್ಯದ 422 ಸಾರ್ಟ್ ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಆಟೋರಿಕ್ಷಾ ಮತ್ತು ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಾಂಡ್ ಕಂಟ್ರೋಲ್ ಸೆಂಟರ್:
ಕೆ.ಎಸ್.ಪಿ. ಅಪ್ಲಿಕೇಷನ್ ಹಾಗೂ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ಕಳ್ಳತನವಾದ ಮೊಬೈಲ್ ೇನ್‌ಗಳ ಬಗ್ಗೆ ದೂರು ನೀಡಿದ್ದು, ಮೊಬೈಲ್ ೇನ್‌ಗಳ ಐಎಂಇಐ ನಂಬರ್‌ನ ಆಧಾರದ ಮೇಲೆ, ತಾಂತ್ರಿಕ ಮಾಹಿತಿಯನ್ನು ಕಲೆಹಾಕಿ ಒಟ್ಟು 894 ಸಾರ್ಟ್ ಮೊಬೈಲ್ ೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಬೆಲೆ ಸುಮಾರು 1 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.
ಅಮೃತಹಳ್ಳಿ :
ಹೆಬ್ಬಾಳ ಫ್ಲೈಓವರ್ ಕೆಳಗಿರುವ ಬಸ್ ನಿಲ್ದಾಣದ ಬಳಿ ಕಿಯಾ ಕಂಪನಿಯ ಕಾರೊಂದು ಅನುಮಾನಾಸ್ಪದವಾಗಿ ನಿಂತಿರುವುದು ಗಮನಿಸಿ ಅದನ್ನು ಪರಿಶೀಲಿಸಲು ಕರ್ತವ್ಯದಲ್ಲಿದ್ದ ಸಿಬ್ಬಂದಿಯು ಕಾರಿನ ಬಳಿ ತೆರಳಿದಾಗ ಕಾರಿನಲ್ಲಿದ್ದವರು ಓಡಿ ಹೋಗಿದ್ದು ಸಿಬ್ಬಂದಿಯು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 8 ಲಕ್ಷ ರೂ. ಮೌಲ್ಯದ 28 ವಿವಿಧ ಕಂಪನಿಯ ಮೊಬೈಲ್ ೇನ್‌ಗಳು ಪತ್ತೆಯಾಗಿರುತ್ತದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಕಾರನ್ನು ಹಾಗೂ ಮೊಬೈಲ್ ೇನ್‌ಗಳನ್ನು ಅಮೃತಹಳ್ಳಿ ಪೊಲೀಸ್ ಠಾಣೆಗೆ ನೀಡಿದ್ದು ತನಿಖೆ ಪ್ರಗತಿಯಲ್ಲಿದೆ.ಸಿಇಐಆರ್ ಪೋರ್ಟಲ್‌ನಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಪ್ರಕರಣದಲ್ಲಿ 12 ಮೊಬೈಲ್‌ಗಳನ್ನು ಪತ್ತೆ ಮಾಡಿದ್ದು, ಇವುಗಳ ಮೌಲ್ಯ ರೂ. 5 ಲಕ್ಷ ಗಳಾಗಿರುತ್ತದೆ ಎಂದು ಅಂದಾಜಿಸಲಾಗಿರುತ್ತದೆ.
ಒಟ್ಟಾರೆ ಅಮೃತಹಳ್ಳಿ ಪೊಲೀಸ್ ಠಾಣೆಯಿಂದ ಒಟ್ಟು 40 ಮೊಬೈಲ್ ೇನ್ ಮತ್ತು ಒಂದು ಕಾರ್ ಅನ್ನು ಪತ್ತೆ ಮಾಡಲಾಗಿದೆ.
ಪಶ್ಚಿಮ ವಿಭಾಗ:
ಉಪ್ಪಾರಪೇಟೆ ಹಾಗು ವಿಜಯನಗರ ಪೊಲೀಸರು ಐದು ಮಂದಿಯನ್ನು ಬಂಧಿಸಿ 49.95ಲಕ್ಷ ರೂ. ಮೌಲ್ಯದ 121 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದೇಶಿ ಸಿಗರೇಟ್ ಜಪ್ತಿ:
ಎಸ್.ಸಿ. ರಸ್ತೆಯ ಗಣೇಶ ದೇವಾಲಯದ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಾರಪೇಟೆ ಪೊಲೀಸರು ವಶಕ್ಕೆ ಪಡೆದು ಅವರಿಂದ ರೂ. 35 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ ಸಿಗರೇಟ್ಸ್ , ವಿದೇಶಿ ಸಿಗರೇಟ್ ಬಾಕ್‌್ಸ, ಪರ್ಮ್ಸೌಗಳು, 13 ಲ್ಯಾಪ್ ಟಾಪ್ ಮತ್ತು 11 ಐೇನ್ 17 ಪ್ರೋ ಮ್ಯಾಕ್‌್ಸ ಮೊಬೈಲ್ ೇನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಜಯನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತ ನೀಡಿದ ಮಾಹಿತಿ ಮೇರೆಗೆ ಒಟ್ಟು 20 ಮೊಬೈಲ್‌ಫೋನ್‌ಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಒಂದು ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ವರ್ತೂರು :
ಗುಂಜೂರು ರಸ್ತೆಯಲ್ಲಿರುವ ಮೊಬೈಲ್ ಔಟ್‌ಲೆಟ್ ಅಂಗಡಿಯ ಬಾಗಿಲನ್ನು ಮುರಿದು ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿ 40.50 ಲಕ್ಷ ರೂ. ಮೌಲ್ಯದ 39 ಮೊಬೈಲ್ ಫೋನ್‌ಗಳು, ಡಿಜಿಟಲ್ ಕ್ಯಾಮರಾ, ಡಿಜಿಟಲ್ ವಾಚ್ ಮತ್ತು 8 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನೈಋತ್ಯ ವಿಭಾಗ:
ನೈಋತ್ಯ ವಿಭಾಗದ ವಿವಿಧ 7 ಪೊಲೀಸ್ ಠಾಣೆಗಳ ಸಿ.ಇ.ಐ.ಆರ್. ಪೋರ್ಟಲ್‌ನಲ್ಲಿ ವರದಿಯಾಗಿದ್ದ ಮೊಬೈಲ್ ಫೋನ್‌ಗಳು ಮತ್ತು ಇತರೆ ಪ್ರಕರಣಗಳಲ್ಲಿ ಸಂಬಂ ಸಿದಂತೆ ಒಟ್ಟು 224 ಮೊಬೈಲ್ ೇನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು,ಇವುಗಳ ಒಟ್ಟು ಮೌಲ್ಯ 26 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಪೂರ್ವ ವಿಭಾಗ:
ಪೂರ್ವ ವಿಭಾಗದ ರಾಮಮೂರ್ತಿನಗರ ಬಾಣಸವಾಡಿ ಹಾಗೂ ಹೆಣ್ಣೂರು ಠಾಣೆ ಪೊಲೀಸರು 28 ಆರೋಪಿಗಳನ್ನು ಬಂಧಿಸಿ 9.75 ಲಕ್ಷ ರೂ. ಮೌಲ್ಯದ 209 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಗ್ನೇಯ ವಿಭಾಗ: ಬೊಮನಹಳ್ಳಿ ಪೊಲೀಸ್ ಠಾಣೆಯ ಸಿಇಐಆರ್ ಪೋರ್ಟಲ್‌ನಲ್ಲಿ ವರದಿಯಾಗಿದ್ದ 20 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದು, ಇವುಗಳ ಮೌಲ್ಯ ಒಟ್ಟು 2ಲಕ್ಷ ರೂ. ಗಳೆಂದು ಅಂದಾಜಿಸಲಾಗಿದೆ.
