ನಿತ್ಯ ನೀತಿ : ಮನುಷ್ಯ ನಿಜವಾದ ಬದಲಾವಣೆ ಆಗುವುದು, ಅವನಿಗೆ ಅವಮಾನ ಅಪಮಾನ ಆದಾಗ ಅಲ್ಲದೆ ಆತನ ಮನಸ್ಸಿಗೆ ಸಹಿಸಿಕೊಳ್ಳಲಾಗದ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾವಣೆ ದಾರಿಯನ್ನು ಹಿಡಿಯುತ್ತಾನೆ.
ಪಂಚಾಂಗ : ಶನಿವಾರ, 01-11-2025
ಶೋಭಕೃತ್ನಾಮ ಸಂವತ್ಸರ / ಆಯನ:ದಕ್ಷಿಣಾಯನ / ಋತು:ಸೌರ ಹೇಮಂತ / ಮಾಸ: ಕಾರ್ತಿಕ / ಪಕ್ಷ: ಶುಕ್ಲ / ತಿಥಿ: ದಶಮಿ / ನಕ್ಷತ್ರ: ಶತಭಿಷಾ / ಯೋಗ: ಧ್ರುವ / ಕರಣ: ವಣಿಜ
ಸೂರ್ಯೋದಯ – ಬೆ.06.13
ಸೂರ್ಯಾಸ್ತ – 5.53
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಆರೋಗ್ಯದಲ್ಲಿ ಏರುಪೇರು.
ವೃಷಭ: ಹಣ ಕಳೆದುಕೊಳ್ಳುವ ಸಂಭವವಿದೆ.
ಮಿಥುನ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ಕಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಶಾಶ್ವತ ಸಿಗಲಿದೆ.
ಸಿಂಹ: ತಾವು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ಮಾತನಾಡುವಾಗ ಎಚ್ಚರಿಕೆ ಇರಲಿ.
ತುಲಾ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಶ್ಚಿಕ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.
ಮಕರ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಕುಂಭ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಮೀನ: ವೈಯಕ್ತಿಕವಾಗಿ ಉನ್ನತಿ ಸಾಧಿಸುವಿರಿ.
