ನವದೆಹಲಿ,ನ.30- ಫೇಸ್‍ಬುಕ್ ಸ್ನೇಹಿತನನ್ನು ಅರಸಿ ಪಾಕಿಸ್ತಾನಕ್ಕೆ ಹೋಗಿ ಮದುವೆಯಾಗಿದ್ದ ಅಂಜು ಇದೀಗ ಭಾರತಕ್ಕೆ ಮರಳಿದ್ದಾರೆ. ಖೈಬರ್ ಪಖ್ತುಂಖ್ವಾದಲ್ಲಿ ತನ್ನ ಪತಿ ಪಾಕಿಸ್ತಾನದ ಪ್ರಜೆ ನಸ್ರುಲ್ಲಾ ಅವರೊಂದಿಗೆ ವಾಸಿಸುತ್ತಿರುವ 34 ವರ್ಷದ ಅಂಜು ವಾಘಾ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ.
ಏಜೆನ್ಸಿಗಳಿಂದ ಹಲವಾರು ಸುತ್ತಿನ ವಿಚಾರಣೆಯ ನಂತರ, ಆಕೆಯ ಕುಟುಂಬವನ್ನು ಭೇಟಿಯಾಗಲು ತನ್ನ ತಾಯ್ನಾಡಿಗೆ ಪ್ರಯಾಣಿಸಲು ಅವಕಾಶ ನೀಡಲಾಯಿತು. ಆಕೆಯನ್ನು ಅಮೃತಸರ ವಿಮಾನ ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿಂದ ದೆಹಲಿಗೆ ತಲುಪಿದ್ದಾರೆ.
ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂಜು ಬುರ್ಖಾ ಧರಿಸಿ ಕಾಣಿಸಿಕೊಂಡಿದ್ದಾರೆ. ನಾನು ನನ್ನ ಸ್ವಂತ ಇಚ್ಛೆಯಿಂದ ಭಾರತಕ್ಕೆ ಮರಳಿದ್ದೇನೆ, ನನ್ನ ಮಕ್ಕಳು ಕುಟುಂಬದವರನ್ನು ಭೇಟಿಯಾಗಬೇಕಿದೆ ಎಂದು ಹೇಳಿದ್ದಾರೆ.
ಶಂಕರ್ ನಾಗ್ ನಂತರ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದ ರಿಷಭ್ ಶೆಟ್ಟಿ
ಎಎನ್‍ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ನಾನು ಸಂತೋಷವಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅಂಜು ಹಿಂದಿರುಗಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಭಿವಾಡಿಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಸೈನಿ ಹೇಳಿದ್ದಾರೆ.
ಅರವಿಂದ್ ಈಗ ಭಿವಾಡಿಯಲ್ಲಿಲ್ಲ ತಮ್ಮ ಮಕ್ಕಳೊಂದಿಗೆ ಬೇರೊಂದು ಸ್ಥಳದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಜುಲೈನಿಂದ, ಅಂಜು ಅಥವಾ ಫಾತಿಮಾ ತನ್ನ 29 ವರ್ಷದ ಪತಿ ನಸ್ರುಲ್ಲಾ ಅವರೊಂದಿಗೆ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಫೇಸ್ಬುಕ್ ಮೂಲಕ ಭೇಟಿಯಾಗಿದ್ದರು, ಅಂಜು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ.
ರಾಜಸ್ಥಾನದ ಅಂಜು ಪೇಶಾವರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಸ್ಥಳೀಯ ನ್ಯಾಯಾಲಯದಲ್ಲಿ ತನ್ನ ಗಂಡನ ಕುಟುಂಬ ಸದಸ್ಯರು, ಪೊಲೀಸ್ ಸಿಬ್ಬಂದಿ ಮತ್ತು ವಕೀಲರ ಸಮ್ಮುಖದಲ್ಲಿ ಮದುವೆಯಾದರು. ಉತ್ತರಪ್ರದೇಶದಲ್ಲಿ ಜನಿಸಿದ ಅಂಜು ರಾಜಸ್ಥಾನದ ಭಿವಾಡಿಯಲ್ಲಿರುವ ಅರವಿಂದ್ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಅಂಜು ಜೈಪುರಕ್ಕೆ ಹೋಗುವುದಾಗಿ ತಿಳಿಸಿದ್ದಳು. ಆದರೆ ಆಕೆ ಪಾಕಿಸ್ತಾನದಲ್ಲಿದ್ದಾಳೆ ಎಂದು ತಡವಾಗಿ ಗೊತ್ತಾಗಿತ್ತು ಎಂದು ಅಂಜು ಪತಿ ಅರವಿಂದ್ ಹೇಳಿದ್ದಾರೆ.