Sunday, May 5, 2024
Homeಮನರಂಜನೆಶಂಕರ್ ನಾಗ್ ನಂತರ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದ ರಿಷಭ್ ಶೆಟ್ಟಿ

ಶಂಕರ್ ನಾಗ್ ನಂತರ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದ ರಿಷಭ್ ಶೆಟ್ಟಿ

ಬೆಂಗಳೂರು, ನ.29- ಚಿತ್ರರಂಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಿತ್ರದ ನಟನೆಗಾಗಿ ರಿಷಭ್ ಶೆಟ್ಟಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ಲಭಿಸಿದೆ.1978ರಲ್ಲಿ ಕರಾಟೆ ಕಿಂಗ್ ಶಂಕರ್ನಾಗ್ ತಮ್ಮ ನಟನೆಯ ಒಂದಾನೊಂದು ಕಾಲದಲ್ಲಿ ಚಿತ್ರದ ನಟನೆಗಾಗಿ ಸಿಲ್ವರ್ ಪಿಕಾಕ್ ಪ್ರಶಸ್ತಿ ಪಡೆದಿದ್ದರು. ಆ ನಂತರ ಈ ಪ್ರಶಸ್ತಿಗೆ ಕನ್ನಡದ 2ನೇ ನಟ ಎಂಬ ಖ್ಯಾತಿಗೆ ರಿಷಭ್ ಶೆಟ್ಟಿ ಪಾತ್ರರಾಗಿದ್ದಾರೆ.

54ನೇ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವ ದಲ್ಲಿ ರಿಷಭ್ ಶೆಟ್ಟಿ ಈ ಸಾಧನೆಗೆ ಪಾತ್ರರಾಗಿದ್ದು, ಪ್ರಶಸ್ತಿಯು ಪ್ರಮಾಣ ಪತ್ರ, ರಜತ ಮಯೂರ ಹಾಗೂ 15 ಲಕ್ಷ ರೂ. ನಗದನ್ನು ಒಳಗೊಂಡಿದೆ. ಕಾಂತಾರ ಚಿತ್ರದ ನಟನೆ ಹಾಗೂ ನಿರ್ದೇಶನಕ್ಕಾಗಿ ರಿಷಭ್ಶೆಟ್ಟಿ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದು, ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.

ನ್ಯೂಜೆರ್ಸಿಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪನನ್ನು ಕೊಂದ ಭಾರತೀಯ ವಿದ್ಯಾರ್ಥಿ

ಪ್ರತಿಷ್ಠಿತ ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ 12 ಅಂತಾರಾಷ್ಟ್ರೀಯ ಮತ್ತು 3 ಭಾರತೀಯ ಸಿನಿಮಾಗಳು ಪ್ರಬಲ ಸ್ಪರ್ಧೆ ನಡೆಸಿದ್ದವು. ಆದರೆ ಎಂಡ್ಲೆಸ್ ಬಾರ್ಡರ್ಸ್' ಪ್ರಶಸ್ತಿಯನ್ನು ಬಾಚಿಕೊಂಡಿತು. ಇನ್ನುಮೈಕೆಲ್ ಡಗ್ಲಾಸ್’ ಸತ್ಯಜಿತ್ ರೇ ಪ್ರಶಸ್ತಿಗೆ ಪಾತ್ರವಾಗಿದೆ.

ರಿಷಭ್ಶೆಟ್ಟಿ ಸಂತಸ:
`ಕಳೆದ ವರ್ಷ ಗೋವಾ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ನಮ್ಮ ಕಾಂತಾರ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದೆವು. ಈ ಬಾರಿ ನಮ್ಮ ಸಿನಿಮಾ ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸ್ರ್ಪಸಿ, ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನು ಗೆದ್ದಿದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಆಗಿದೆ’ ಎಂದು ರಿಷಭ್ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News