Thursday, February 22, 2024
Homeಅಂತಾರಾಷ್ಟ್ರೀಯನ್ಯೂಜೆರ್ಸಿಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪನನ್ನು ಕೊಂದ ಭಾರತೀಯ ವಿದ್ಯಾರ್ಥಿ

ನ್ಯೂಜೆರ್ಸಿಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪನನ್ನು ಕೊಂದ ಭಾರತೀಯ ವಿದ್ಯಾರ್ಥಿ

ನ್ಯೂಯಾರ್ಕ್,ನ.29- ನ್ಯೂಜೆರ್ಸಿಯ ಕಾಂಡೋಮಿನಿ ಯಂನಲ್ಲಿ ತನ್ನ ಅಜ್ಜ, ಅಜ್ಜಿ ಮತ್ತು ಚಿಕ್ಕಪ್ಪನನ್ನು ಕೊಲೆ ಮಾಡಿದ ಆರೋಪದ ಮೇಲೆ 23 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಓಂ ಬ್ರಹ್ಮಭಟ್ ಎಂಬಾತ ತನ್ನ ತಾತ ದಿಲೀಪ್ಕುಮಾರ್ ಬ್ರಹ್ಮಭಟ್, ಅಜ್ಜಿ ಬಿಂದು ಬ್ರಹ್ಮಭಟ್ ಮತ್ತು ಚಿಕ್ಕಪ್ಪ ಯಶ್ಕುಮಾರ್ ಬ್ರಹ್ಮಭಟ್ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ದಕ್ಷಿಣ ಪ್ಲೇನ್ಫೀಲ್ಡï ಪೊಲೀಸ್ ಇಲಾಖೆ ಮತ್ತು ಮಿಡ್ಲ್ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿಯಲ್ಲಿ ಗುಂಡು ಹಾರಿಸಿದ ಆರೋಪ ಹೊತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸೌತ್ ಪ್ಲೇನ್ಫೀಲ್ಡï ಟ್ರೆಡಿಶನ್ಸ್ ಕಾಂಡೋ ಕಾಂಪ್ಲೆಕ್ಸ್ನಲ್ಲಿ ಗುಂಡು ಹಾರಿಸಿದ ಶಬ್ದವನ್ನು ನೆರೆಯವರು ವರದಿ ಮಾಡಿದ ನಂತರ, ಮಿಡ್ಲ್ಸೆಕ್ಸ್ ಕೌಂಟಿ ಪ್ರಾಸಿಕ್ಯೂಟರ್ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2030ರ ವೇಳೆಗೆ 3 ಪಟ್ಟು ಹೆಚ್ಚಳವಾಗಲಿದೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯ

ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮುಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ವಿಚಾರಣೆಗಾಗಿ ಒಬ್ಬ ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಮತ್ತು ನಂತರ ಆರೋಪ ಹೊರಿಸಲಾಯಿತು.

ಮೊದಲ ಹಂತದ ಕೊಲೆ ಮತ್ತು ಎರಡನೇ ಹಂತದ ಆಯುಧ ಹೊಂದಿದ್ದಕ್ಕಾಗಿ ಓಂ ವಿರುದ್ಧ ಮೂರು ಆರೋಪಗಳನ್ನು ಹೊರಿಸಲಾಗಿತ್ತು. ಗುಜರಾತ್ ಮೂಲದ ಓಂ ಅವರು ಸಂತ್ರಸ್ತರೊಂದಿಗೆ ವಾಸಿಸುತ್ತಿದ್ದರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬಂದಾಗ ನಿವಾಸದಲ್ಲಿ ಪತ್ತೆಯಾಗಿದ್ದಾರೆ.ಓಂ ಅವರು ಕಳೆದ ಎರಡು ತಿಂಗಳುಗಳಲ್ಲಿ ನ್ಯೂಜೆರ್ಸಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ ಮತ್ತು ಅವರು ಕಾಂಡೋದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.

RELATED ARTICLES

Latest News