ಚಿತ್ರದುರ್ಗ,ನ.30- ಕಾರಿನಲ್ಲಿ ಸಾಗಿಸುತ್ತಿದ್ದ 8 ಕೋಟಿ ಜಪ್ತಿ ಮಾಡಲಾಗಿದ್ದು, ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ. ತಡರಾತ್ರಿವರೆಗೂ ನಾವು ನೋಟುಗಳನ್ನು ಎಣಿಸುವ ಕಾರ್ಯದಲ್ಲಿ ತೊಡಗಿದ್ದೆವು. ಕಾರಿನ ಚಾಲಕ ಸುನೀಲ್ ಮತ್ತು ಅವರ ಜೊತೆ ಇದ್ದ ಹರೀಶ್ ಎಂಬುವರವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
500 ಮುಖಬೆಲೆಯ ನೋಟುಗಳ ಜೊತೆಗೆ 200 ಮತ್ತು 100 ಮುಖಬೆಲೆಯ ನೋಟುಗಳಿದ್ದು, ಇದನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದಿದ್ದಾರೆ. ಪ್ರಸ್ತುತ ವಿಚಾರಣೆ ವೇಳೆ ನಾವು ಅಡಿಕೆ ವ್ಯಾಪಾರಿಗಳಾಗಿದ್ದು, ಶಿವಮೊಗ್ಗದ ಸುರೇಶ್ ಎಂಬುವರಿಗೆ ಹಣ ನೀಡಿದ್ದರು. ನಾವು ಅಡಿಕೆ ಮಾರಲು ಸಾಧ್ಯವಾಗದ ಕಾರಣ ಆ ಹಣವನ್ನು ವಾಪಸ್ ಕೊಡಲು ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಹೇಳಿದ್ದಾರೆ.
ಮುಜರಾಯಿ ದೇವಾಲಯಗಳ ಪೂಜೆಗೆ ಅರ್ಚಕರ ಮಕ್ಕಳ ನೇಮಕ
ಆದರೆ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಿದಾಗ ಮಾತ್ರ ನಿಖರವಾದ ಮಾಹಿತಿ ದೊರೆಯಲಿದೆ. ಪ್ರಸ್ತುತ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು. ಕಳೆದ ರಾತ್ರಿ ಇನ್ನೋವಾ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಲ್ಯಾಡಿಹಳ್ಳಿ ಬಳಿ ಕಾರನ್ನು ತಡೆದು ಪರಿಶೀಲಿಸಿದಾಗ 8 ಕೋಟಿ ನಗದು ಪತ್ತೆಯಾಗಿದೆ.