Sunday, April 28, 2024
Homeರಾಷ್ಟ್ರೀಯತೆಲಂಗಾಣ ಚುನಾವಣೆ : ಮತ ಚಲಾಯಿಸಿದ ಸ್ಟಾರ್ ನಟರು

ತೆಲಂಗಾಣ ಚುನಾವಣೆ : ಮತ ಚಲಾಯಿಸಿದ ಸ್ಟಾರ್ ನಟರು

ಹೈದರಾಬಾದ್,ನ.30- ಹಿಂದೆಂದಿಗಿಂತಲೂ ಭಾರೀ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ತೆಲಂಗಾಣ ವಿಧಾನಸಭೆಗೆ ನಡೆದ ಮತದಾನದಲ್ಲಿ ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರೆತುಪಡಿಸಿದರೆ, ರಾಜ್ಯದ್ಯಾಂತ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಒಟ್ಟು 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 3.26 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರುಗಳ ನಾಪತ್ತೆ, ಕೈಕೊಟ್ಟ ಇವಿಎಂಗಳು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಬಿಟ್ಟರೆ, ಒಂದೇ ಹಂತದಲ್ಲಿ ನಡೆದ ಮತದಾನಕ್ಕೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 7 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಜನರು ತಮ್ಮ ಹಕ್ಕು ಚಲಾಯಿಸಿದರು. ನಕ್ಸಲ್ ಪೀಡಿತ 13 ಕ್ಷೇತ್ರಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 4 ರವರೆಗೆ ಮತದಾನ ನಡೆಯಿತು. 119 ಸ್ಥಾನಗಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ 2,290 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು 3.26 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿ ಕೆಸಿಆರ್ ಚಂದ್ರಶೇಖರ್ ರಾವ್, ಟಿಕೆಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ, ಅಕ್ಬುರುದ್ದೀನ್ ಓವೈಸಿ, ಭಾರತದ ಮಾಜಿ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಹಲವು ಗಣ್ಯರು ತಮ್ಮ ತಮ್ಮ ಮತಗಟ್ಟೆಗೆ ಬಂದು ಮತಚಲಾಯಿಸಿದರು.

ಈ ನಡುವೆ ತೆಲುಗು ಚಿತ್ರರಂಗದ ಖ್ಯಾತ ನಟರಾದ ಅಲ್ಲು ಅರ್ಜುನ್ , ಜೂನಿಯರ್ ಎನ್‍ಟಿಆರ್ ಹಾಗೂ ಚಿರಂಜೀವಿ ಹೈದರಾಬಾದ್‍ನಲ್ಲಿ ತಮ್ಮ ಕುಟುಂಬಗಳೊಂದಿಗೆ ಬಂದು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು, ವಿಶೇಷವಾಗಿತ್ತು.

ಅಲ್ಲು ಅರ್ಜುನ್ ತಾವೊಬ್ಬರೇ ಮತಗಟ್ಟೆಗೆ ಬಂದು ವೋಟ್ ಮಾಡಿದರು. ಜೂನಿಯರ್ ಎನ್‍ಟಿಆರ್ ಲಕ್ಷ್ಮಿ ಪ್ರಣತಿ, ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಬಂದು ವೋಟ್ ಮಾಡಿದ್ರು. ಇನ್ನೂ ಮೆಗಾಸ್ಟಾರ್ ಚಿರಂಜೀವಿ ಸಹ ತಮ್ಮ ಕುಟುಂಬ ಸಮೇತರಾಗಿ ಬಂದು ವೋಟ್ ಮಾಡಿ ತನ್ಮ ಹಕ್ಕು ಚಲಾಯಿಸಿದರು. ಜೊತೆಗೆ ಪ್ರತಿಯೊಬ್ಬರು ಬಂದು ವೋಟ್ ಮಾಡುವಂತೆ ಮನವಿ ಮಾಡಿದರು. ಸದ್ಯ ಸ್ಟಾರ್ಸ್‍ಗಳು ವೋಟ್ ಮಾಡಿರುವ ಫೆÇೀಟೋ ವೀಡಿಯೋ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ, 7 ಕಾರ್ಮಿಕರ ಶವ ಪತ್ತೆ

ತೆಲಂಗಾಣ ರಾಜ್ಯದಲ್ಲಿ ಒಟ್ಟು 3,26,02,799 ಮತದಾರರಿದ್ದು, ಇದರಲ್ಲಿ 1,62,98,418 ಪುರುಷರು, 1,63,01,705 ಮಹಿಳೆಯರು ಮತ್ತು 2,676 ತೃತೀಯಲಿಂಗಿಗಳು ಇದ್ದಾರೆ. ಇವರಲ್ಲಿ 15,406 ಸೇವಾ ಮತದಾರರು ಮತ್ತು 2,944 ಎನ್‍ಆರ್‍ಐ ಮತದಾರರು ಸೇರಿದ್ದಾರೆ. 18-19 ವಯೋಮಾನದ ಮತದಾರರ ಸಂಖ್ಯೆ 9,99,667. 221 ಮಹಿಳೆಯರು ಮತ್ತು ಒಬ್ಬ ತೃತೀಯಲಿಂಗಿ ಸೇರಿದಂತೆ ಒಟ್ಟು 2,290 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಚುನಾವಣಾ ಆಯೋಗವು ಎಲ್ಲಾ 119 ಕ್ಷೇತ್ರಗಳಲ್ಲಿ ಮತದಾನಕ್ಕೆ ವಿಸ್ತಾರವಾದ ವ್ಯವಸ್ಥೆಯನ್ನು ಮಾಡಿತ್ತು. ಆಯೋಗವು 35,655 ಮತಗಟ್ಟೆಗಳಲ್ಲಿ 1.85 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿನೆ ಮಾಡಲಾಗಿತ್ತು.

ಬಿಗಿ ಭದ್ರತೆಗೆ ರಾಜ್ಯದಿಂದ ಒಟ್ಟು 45,000 ಸಿಬ್ಬಂದಿ, ಇತರ ಇಲಾಖೆಗಳ 3,000 ಸಿಬ್ಬಂದಿ, ತೆಲಂಗಾಣ ರಾಜ್ಯ ವಿಶೇಷ ಪೊಲೀಸ್ (ಟಿಎಸ್‍ಎಸ್ಪಿ) 50 ಕಂಪನಿಗಳು ಮತ್ತು ಕೇಂದ್ರ ಅರೆಸೇನಾ ಪಡೆಗಳ 375 ಕಂಪನಿಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ . ನೆರೆಯ ರಾಜ್ಯಗಳ 23,500 ಗೃಹರಕ್ಷಕರೂ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ವಿಕಾಸ್ ರಾಜ್ ಮಾಹಿತಿ ನೀಡಿದ್ದಾರೆ.

ಚುನಾವಣಾ ಅಧಿಕಾರಿಗಳು ಒಟ್ಟು 72,931 ಬ್ಯಾಲೆಟ್ ಯೂನಿಟ್ ಅಥವಾ ಇವಿಎಂಗಳನ್ನು ವ್ಯವಸ್ಥೆ ಮಾಡಿದ್ದರು. ಅವರಲ್ಲಿ 59,779 ಮಂದಿಯನ್ನು ಮತಗಟ್ಟೆಗಳಲ್ಲಿ ನಿಯೋಜಿಸಲಾಗಿದೆ. ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ (48) ಗ್ರೇಟರ್ ಹೈದರಾಬಾದ್‍ನ ಲಾಲ್ ಬಹದ್ದೂರ್ ನಗರ ಕ್ಷೇತ್ರದ ಪ್ರತಿ ಮತಗಟ್ಟೆಯಲ್ಲಿ ನಾಲ್ಕು ಬ್ಯಾಲೆಟ್ ಯೂನಿಟ್‍ಗಳನ್ನು ನಿಯೋಜಿಸಲಾಗುವುದು. 9 ಕ್ಷೇತ್ರಗಳ ಪ್ರತಿ ಮತಗಟ್ಟೆಯಲ್ಲಿ ಮೂರು ಇವಿಎಂಗಳು ಇರುತ್ತವೆ.

ಕಾಮರೆಡ್ಡಿಯ ಮತಗಟ್ಟೆಗಳಲ್ಲಿ ಮೂರು ಇವಿಎಂಗಳನ್ನು ನಿಯೋಜಿಸಲಾಗುವುದು, ಅಲ್ಲಿ ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‍ಎಸ್) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎ.ರೇವಂತ್ ರೆಡ್ಡಿ ಸೇರಿದಂತೆ 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಾಕಿಸ್ತಾನಕ್ಕೆ ಹೋಗಿ ಮದುವೆಯಾಗಿದ್ದ ಅಂಜು ಭಾರತಕ್ಕೆ ವಾಪಾಸ್

ಕೆಸಿಆರ್ ಅವರು ಸಿದ್ದಿಪೇಟೆ ಜಿಲ್ಲೆಯ ಗಜ್ವೆಲ್ ಕ್ಷೇತ್ರದಿಂದ ಮರುಚುನಾವಣೆಯಲ್ಲಿ ಸ್ರ್ಪಧಿಸಿದ್ದಾರೆ. ರೇವಂತ್ ರೆಡ್ಡಿ ಅವರು ವಿಕಾರಾಬಾದ್ ಜಿಲ್ಲೆಯ ಕೊಡಂಗಲ್ ನಿಂದ ಸ್ರ್ಪಸುತ್ತಿದ್ದಾರೆ. ಭಾರತದ ಕಿರಿಯ ರಾಜ್ಯದಲ್ಲಿ ಅಧಿಕಾರಕ್ಕಾಗಿ ಬಿಆರ್‍ಎಸ್ ಮತ್ತು ಕಾಂಗ್ರೆಸ್ ನಡುವೆ ಕಠಿಣ ಸ್ಪರ್ಧೆಯಿದೆ. ಡಿಸೆಂಬರ್ 3ರಂದು ಮತ ಎಣಿಕೆ ನಡೆಯಲಿದೆ.

RELATED ARTICLES

Latest News