Wednesday, February 28, 2024
Homeರಾಷ್ಟ್ರೀಯಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ, 7 ಕಾರ್ಮಿಕರ ಶವ ಪತ್ತೆ

ಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ, 7 ಕಾರ್ಮಿಕರ ಶವ ಪತ್ತೆ

ಸೂರತ್, ನ.30- ಗುಜರಾತಿನ ಸೂರತ್ ನಗರದಲ್ಲಿ ರಾಸಾಯನಿಕ ತಯಾರಿಕಾ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಒಂದು ದಿನದ ನಂತರ, ಕಾಣೆಯಾದ ಏಳು ಕಾರ್ಮಿಕರ ಶವಗಳನ್ನು ಇಂದು ಮುಂಜಾನೆ ಆವರಣದಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಸಚಿನ್ ಕೈಗಾರಿಕಾ ಪ್ರದೇಶದಲ್ಲಿನ ಈಥರ್ ಇಂಡಸ್ಟ್ರೀಸ್ ಲಿಮಿಟೆಡ್‍ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಮೃತಪಟ್ಟ ಏಳು ಜನರ ಪೈಕಿ ಒಬ್ಬರು ಕಂಪನಿಯ ಉದ್ಯೋಗಿಯಾಗಿದ್ದು, ಆರು ಮಂದಿ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಸೂರತ್ ಕಲೆಕ್ಟರ್ ಆಯುಷ್ ಓಕ್ ಹೇಳಿದ್ದಾರೆ.

ಕಾರ್ಖಾನೆ ಆವರಣದಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ, ಅಧಿಕಾರಿಗಳು ಬುಧವಾರ ಸ್ಥಾವರವನ್ನು ಆವರಿಸಿದ ಬೆಂಕಿಯ ನಂತರ ನಾಪತ್ತೆಯಾದ ಏಳು ಕಾರ್ಮಿಕರ ಶವಗಳನ್ನು ಪತ್ತೆ ಮಾಡಿದರು ಎಂದು ಅವರು ಹೇಳಿದರು.

ದಾಸ ಶ್ರೇಷ್ಠ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ : ಎಚ್‍ಡಿಡಿ

ಮೃತರನ್ನು ದಿವ್ಯೇಶ್ ಪಟೇಲ್ (ಕಂಪೆನಿ ಉದ್ಯೋಗಿ), ಸಂತೋಷ್ ವಿಶ್ವಕರ್ಮ, ಸನತ್ ಕುಮಾರ್ ಮಿಶ್ರಾ, ಧರ್ಮೇಂದ್ರ ಕುಮಾರ್, ಗಣೇಶ್ ಪ್ರಸಾದ್, ಸುನೀಲ್ ಕುಮಾರ್ ಮತ್ತು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಾಯಗೊಂಡಿರುವ 24 ಜನರು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಾಸಾಯನಿಕ ಸ್ಥಾವರದಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿ ಸಂಗ್ರಹವಾಗಿದ್ದ ದಹಿಸಬಲ್ಲ ರಾಸಾಯನಿಕಗಳ ಸೋರಿಕೆಯಿಂದಾಗಿ ದೊಡ್ಡ ಟ್ಯಾಂಕ್‍ನಲ್ಲಿ ಸ್ಪೋಟ ಸಂಭವಿಸಿದೆ ಎಂದು ಸೂರತ್ ಉಸ್ತುವಾರಿ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ಈ ಹಿಂದೆ ತಿಳಿಸಿದ್ದಾರೆ.

ಸುಮಾರು 15 ಅಗ್ನಿಶಾಮಕ ಟೆಂಡರ್‍ಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದು, 9 ಗಂಟೆಗಳ ಕಾಲ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

RELATED ARTICLES

Latest News