Saturday, October 12, 2024
Homeರಾಜ್ಯದಾಸ ಶ್ರೇಷ್ಠ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ : ಎಚ್‍ಡಿಡಿ

ದಾಸ ಶ್ರೇಷ್ಠ ಚಿಂತನೆಗಳಿಂದ ಉತ್ತಮ ಸಮಾಜ ನಿರ್ಮಾಣ : ಎಚ್‍ಡಿಡಿ

ಬೆಂಗಳೂರು, ನ.30-ದಾಸ ಶ್ರೇಷ್ಠರಾದ ಕನಕದಾಸರ ಆದರ್ಶ ಚಿಂತನೆಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದೆಡೆಗೆ ಸಾಗೋಣ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆ ನೀಡಿದ್ದಾರೆ.

ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತಗಳ ಭೇದಭಾವ ಯಾಕೆ ಇರುವುದೊಂದೇ ಅದು ಮನುಷ್ಯ ಜಾತಿ ಎಂಬುದನ್ನು ಜಗತ್ತಿಗೆ ಸಾರಿದ ಕನಕದಾಸರ ಜಯಂತಿಯಂದು ಅಗಣಿತ ನಮನಗಳನ್ನು ಸಲ್ಲಿಸುವುದಾಗಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ತಿಳಿಸಿದ್ದಾರೆ.ಕನಕದಾಸರ ಆದರ್ಶ ಚಿಂತನೆಗಳನ್ನು ನಾವೆಲ್ಲರೂ ಸ್ಮರಿಸೋಣ ಮತ್ತು ಅವುಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ ಎಂದಿದ್ದಾರೆ.

ಶಂಕರ್ ನಾಗ್ ನಂತರ ಸಿಲ್ವರ್ ಪೀಕಾಕ್ ಪ್ರಶಸ್ತಿ ಪಡೆದ ರಿಷಭ್ ಶೆಟ್ಟಿ

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕುಲ ಕುಲ ಕುಲವೆಂದು ಒಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಹೇಳಿರುವ ದಾಸಶ್ರೇಷ್ಠರಾದ ಕನಕದಾಸರ ಜಯಂತಿಯಂದು ನಾಡಿನ ಸಮಸ್ತ ಜನತೆಗೆ ಶುಭಾಷಯಗಳನ್ನು ಕೋರಿದ್ದಾರೆ.

ಇಂತಹ ಅನೇಕ ಪದಗಳ ಮೂಲಕ ಮನುಕುಲವನ್ನು ತಿದ್ದಿ ತೀಡಿದ ದಾಸೋತ್ತಮರಿಗೆ ನಮನಗಳನ್ನು ಸಲ್ಲಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ತಿಳಿಸಿದ್ದಾರೆ.

RELATED ARTICLES

Latest News