Wednesday, January 15, 2025
Homeಜಿಲ್ಲಾ ಸುದ್ದಿಗಳು | District Newsಮೊಬೈಲ್‍ ಬಳಕೆ ವಿಚಾರಕ್ಕೆ ರೊಚ್ಚಿಗೆದ್ದು ಮಗನನ್ನೇ ಕೊಂದ ಅಪ್ಪ

ಮೊಬೈಲ್‍ ಬಳಕೆ ವಿಚಾರಕ್ಕೆ ರೊಚ್ಚಿಗೆದ್ದು ಮಗನನ್ನೇ ಕೊಂದ ಅಪ್ಪ

ಮೈಸೂರು,ನ.30- ಮೊಬೈಲ್‍ನಲ್ಲಿ ಆಟವಾಡುತ್ತಿದ್ದ ವಿಷಯಕ್ಕೆ ಮಗನ ಜೊತೆ ಜಗಳವಾಡಿದ ಅಪ್ಪ ತಾಳ್ಮೆ ಕಳೆದುಕೊಂಡು ಚಾಕುವಿನಿಂದ ಇರಿದು ಪುತ್ರನನ್ನೇ ಕೊಲೆ ಮಾಡಿರುವ ಘಟನೆ ಎನ್‍ಆರ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ಬನ್ನಿಮಂಟಪದ ಬಳಿಯ ನಿವಾಸಿ ಉಮೇಜ(23) ಅಪ್ಪನಿಂದಲೇ ಕೊಲೆಯಾದ ದುರ್ದೈವಿ. ಅನುಮತಿಯಿಲ್ಲದೆ ತಾಯಿಯ ಮೊಬೈಲ್ ತೆಗೆದುಕೊಂಡು ಉಮೇಜ ರಾತ್ರಿ ಆಟವಾಡುತ್ತಿದ್ದನು. ಹೇಳದೆ ಕೇಳದೆ ಮೊಬೈಲ್ ಬಳಸಿದ್ದಕ್ಕೆ ತಂದೆ ಅಸ್ಲಂ ಪಾಷ ವಿರೋಧಿಸಿದ್ದಾರೆ. ನಂತರ ಅಪ್ಪ -ಮಗನ ನಡುವೆ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿ ಹೊಡೆದಾಟವಾಗಿದೆ.

ಸೂರತ್ ರಾಸಾಯನಿಕ ಘಟಕದಲ್ಲಿ ಅಗ್ನಿ ಅವಘಡ, 7 ಕಾರ್ಮಿಕರ ಶವ ಪತ್ತೆ

ತಾಳ್ಮೆ ಕಳೆದುಕೊಂಡ ಅಸ್ಲಂ ಪಾಷ ಅವರು ಅಡುಗೆ ಕೋಣೆಗೆ ಹೋಗಿ ಕೋಪದಲ್ಲೇ ಚಾಕು ತಂದು ಉಮೇಜ್ ಕುತ್ತಿಗೆಗೆ ಇರಿದಿದ್ದಾರೆ. ಆತ ಕುಸಿದು ಬಿದ್ದು ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದಾನೆ. ಘಟನೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಸುದ್ದಿ ತಿಳಿದು ಎನ್‍ಆರ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಸ್ಲಂ ಪಾಷನನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News