Thursday, September 19, 2024
Homeಜಿಲ್ಲಾ ಸುದ್ದಿಗಳು | District Newsಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ

ಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ

ಹಾಸನ, ನ.30- ಮದುವೆಗೆ ಒಪ್ಪದ ಹಿನ್ನೆಲೆಯಲ್ಲಿ ಶಿಕ್ಷಕಿಯನ್ನೇ ಸಂಬಂಧಿ ಯುವಕ ತನ್ನ ಸಹಚರರೊಂದಿಗೆ ಸೇರಿ ಹಾಡುಹಗಲೇ ಇಂದು ಬೆಳಗ್ಗೆ ಅಪಹರಿಸಿರುವ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ಬೆಳಿಗ್ಗೆ ಶಾಲೆಗೆ ತೆರಳಲು ಶಿಕ್ಷಕಿ ಅರ್ಪಿತಾ ಮನೆಯಿಂದ ಹೊರಗೆ ಬರುತ್ತಿದ್ದರು.

ಅರ್ಪಿತಾ ಸಂಬಂಧಿ ರಾಮು ತನ್ನ ಸಹಚರರ ಜೊತೆ ಇನ್ನೋವಾ ಕಾರನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದನು.
ಶಿಕ್ಷಕಿ ಮನೆಯಿಂದ ಹೊರಗೆ ಬರುತ್ತಿದ್ದಂತೆ ಮೊದಲೇ ಮಾಡಿಕೊಂಡ ಸಂಚಿನಂತೆ ಆಕೆಯನ್ನು ಎತ್ತಿಕೊಂಡು ಕಾರಿನಲ್ಲಿರಿಸಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾರೆ. ಹದಿನೈದು ದಿನಗಳ ಹಿಂದೆ ಮದುವೆ ಪ್ರಸ್ತಾಪದೊಂದಿಗೆ ಯುವತಿ ಮನೆಗೆ ಸಂಬಂಧಿ ರಾಮು ಮತ್ತು ಪೋಷಕರು ಬಂದಿದ್ದರು.

ಯುವಜನರ ಸಬಲೀಕರಣಕ್ಕೆ ಎನ್‍ಇಪಿ ಪೂರಕ : ನಾರಾಯಣ ಮೂರ್ತಿ

ಇದಕ್ಕೆ ಯುವತಿ ಹಾಗೂ ಈಕೆಯ ಕುಟುಂಬ ಸದಸ್ಯರು ಒಪ್ಪಿರಲಿಲ್ಲ . ಮದುವೆ ಮಾಡಿಕೊಡಲು ಒಪ್ಪದ ಹಿನ್ನೆಲೆಯಲ್ಲಿ ಯುವತಿಯನ್ನೇ ಕಿಡ್ನಾಪ್ ಮಾಡಿರೊ ಆರೋಪ ಕೇಳಿ ಬಂದಿದೆ. ಹಾಡಹಗಲೇ ಯುವತಿಯನ್ನು ಅಪಹರಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಹಾಸನ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವತಿ ಮನೆಯ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಟಿವಿಗಳನ್ನು ಪರಿಶೀಲಿಸಿ ಕಾರಿನ ನಂಬರನ್ನು ಪತ್ತೆ ಹಚ್ಚಿದ್ದಾರೆ.

ತಂಡ ರಚನೆ: ಯುವತಿಯನ್ನು ಅಪಹರಿಸಿರುವ ಆರೋಪಿಗಳ ಪತ್ತೆಗಾಗಿ ಈಗಾಗಲೇ ಮೂರು ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಕಾರ್ಯೋನ್ಮುಖವಾಗಿ ಇನ್ನೋವಾ ಕಾರು ಹೋಗಿರುವ ಮಾರ್ಗಗಳನ್ನು ಪತ್ತೆಹಚ್ಚಿ ಬೆನ್ನಟ್ಟಿದ್ದಾರೆ. ನಗರ ಠಾಣೆ ಪೊಲೀಸರು ಈ ಮಾರ್ಗದ ಎಲ್ಲಾ ಟೋಲ್‍ಗಳಿಗೂ ಮಾಹಿತಿ ರವಾನಿಸಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ.

RELATED ARTICLES

Latest News