Friday, January 23, 2026
Homeರಾಜ್ಯಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಪಿಜಿಯಲ್ಲಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Student commits suicide in PG

ನೆಲಮಂಗಲ,ನ.30- ವಿದ್ಯಾರ್ಥಿನಿಯೊಬ್ಬಳು ಪಿಜಿಯಲ್ಲಿ ಆತಹತ್ಯೆಗೆ ಶರಣಾಗಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಾಸನ ಮೂಲದ ವತ್ಸಲಾ (19) ಆತ್ಮಹತ್ಯೆ ಮಾಡಿಕೊಂಡ ಪ್ರತಿಭಾವಂತ ವಿದ್ಯಾರ್ಥಿನಿ ಉನ್ನತ ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದಿದ್ದ ಅವರು ಹೆಸರುಘಟ್ಟದಲ್ಲಿನ ಕಾಲೇಜ್‌ನಲ್ಲಿ ಬಿ ಫಾರ್ಮ್‌ ಅಂತಿಮ ವರ್ಷದ ವ್ಯಾಸಾಂಗ ಮಾಡುತ್ತಿದ್ದರು.

ಹತ್ತಿರದಲ್ಲೇ ಇದ್ದ ಪೆಟಲ್ಸ್ ಗರ್ಲ್ಸ್ ಪಿಪಿಜಿಯಲ್ಲಿ ವಾಸವಾಗಿದ್ದ ಆಕೆ ಆರು ಇಲ್ಲದ ಸಮಯದಲ್ಲಿ ಆತಹತ್ಯೆಗೆ ಶರಣಾಗಿದ್ದಾಳೆ. ತಂದೆಗೆ 8 ಪುಟದ ಭಾವನಾತಕ ಡೆತ್‌ನೋಟ್‌ ಬರೆದಿದ್ದು, ಪತ್ರದ ಸಾಲುಗಳು ಮನಕಲಕುವಂತಿವೆ.

ಪಿಜಿಯ3ನೇ ಮಹಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತಹತ್ಯೆ ಮಾಡ್ಕೊಂಡಿದ್ದಾಳೆ. ಅಪ್ಪ ನಿಮ ಪ್ರೀತಿಗೆ ನಾನು ಅರ್ಹಳಲ್ಲ, ಅಪ್ಪ. ನೀವು ಕೊಟ್ಟಿರುವ ಪ್ರೀತಿ ಇನ್ಯಾರಿಂದಲೂ ಕೊಡಲು ಸಾಧ್ಯವಿಲ್ಲ. ಕೇಳಿದ್ದನ್ನೆಲ್ಲ ಕೊಡಿಸಿದ್ದೀರಿ. ನಿಮ್ಮ ಮರ್ಯಾದೆ ತೆಗೆಯುವ ಕೆಲಸ ಮಾಡಿಲ್ಲ. ನಿಮ್ಮ ಪ್ರೀತಿ ಉಳಿಸಿಕೊಳ್ಳುವ ಭಾಗ್ಯವೂ ನನಗಿಲ್ಲ.

ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಇಷ್ಟವಿಲ್ಲ. ನಾನು ಸಾವಿಗೆ ಶರಣಾಗುತ್ತಿದ್ದೇನೆ. ನಿಮ್ಮ ಅಕ್ಕರೆಯ ಮಗಳು ವತ್ಸಲಾ ಎಂದು ಡೆತ್‌ನೋಟ್‌‍ನಲ್ಲಿ ಉಲ್ಲೇಖಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News