ಬೆಂಗಳೂರು. ಡಿಸೆಂಬರ್ 06, 2023: ಕುಕ್ವೇರ್ ಮತ್ತು ಕಿಚನ್‌ವೇರ್ ಉಪಕರಣಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಟವ್ಕ್ರಾಫ್ಟ್ ಲಿಮಿಟೆಡ್, ಆಧುನಿಕ ಮನೆಗಳ ಬದಲಾಗುತ್ತಿರುವ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪಿಜನ್ ಡ್ಯುಯೋ ಓಟಿಜಿ ಏರ್ ಫ್ರೈಯರ್ ಬಿಡುಗಡೆ ಮಾಡಿದೆ. ಓಟಿಜಿ ಓವನ್ ಮತ್ತು ಏರ್ ಫ್ರೈಯರ್ನ ಕೆಲಸಗಳನ್ನು ಜಂಟಿಯಾಗಿ ಮಾಡಬಹುದಾಗಿದೆ ಮತ್ತು ಎರಡೂ ಕೆಲಸಗಳನ್ನು ನಿರ್ವಹಿಸಬಲ್ಲ ಒಂದೇ ಉತ್ಪನ್ನ ಇದಾಗಿರುವುದರಿಂದ ಸಾಕಷ್ಟು ಜಾಗದ ಉಳಿತಾಯವಾಗಲಿದೆ.
ಪಿಜನ್ ಡ್ಯುಯೋ ಓಟಿಜಿ ಏರ್ ಫ್ರೈಯರ್ ಉತ್ಪನ್ನವು ಅಡುಗೆಮನೆಗೆ ಬಹಳ ಉಪಕಾರಿಯಾಗಿರುವುದಷ್ಟೇ ಅಲ್ಲ, ನಿಮ್ಮ ಅಡುಗೆ ಆರೋಗ್ಯ ಪ್ರಜ್ಞೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಇದರ 25 ಲೀಟರ್ ಆಂತರಿಕ ಸಾಮರ್ಥ್ಯದೊಂದಿಗೆ ಹೆಚ್ಚು ಅಡುಗೆ ಮಾಡುವುದಕ್ಕೆ ಅವಕಾಶ ಸಿಗುತ್ತದೆ ಮತ್ತು ಏಕಕಾಲಕ್ಕೆ ಅನೇಕ ಭಕ್ಷ್ಯಗಳನ್ನು ತಯಾರಿಸುವುದಕ್ಕೆ ಅನುಕೂಲವಾಗುತ್ತದೆ. 1400 ವ್ಯಾಟ್ಗಳ ರ್ಯಾಪಿಡ್ ಹೀಟಿಂಗ್ ಟೆಕ್ನಾಲಜಿಯು ಬಹಳ ವೇಗವಾಗಿ ಶಾಖ ಹೆಚ್ಚಾಗುವಂತೆ ಮಾಡುವುದರ ಜೊತೆಗೆ, ಬೇಗ ಅಡುಗೆ ಮಾಡುವುದಕ್ಕೆ ಅನುಕೂಲವಾಗುತ್ತದೆ. ಇದರಿಂದ ಸಮಯ ಮತ್ತು ಶಕ್ತಿ ಎರಡೂ ಉಳಿಯುತ್ತದೆ.
ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ಪಾಕ್ ಐಎಸ್‍ಐ ಸಂಪರ್ಕ ಹೊಂದಿರುವ ಮೌಲ್ವಿ : ಯತ್ನಾಳ್ ಬಾಂಬ್
ಈ ಹೊಸ ಉತ್ಪನ್ನದ ಬಿಡುಗಡೆಯ ಕುರಿತು ಮಾತನಾಡಿರುವ ಸ್ಟವ್ಕ್ರಾಫ್ಟ್ನ ಎಂಡಿ ಆಗಿರುವ ರಾಜೇಂದ್ರ ಗಾಂಧಿ, ‘ನಾವು ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳನ್ನು ತಣಿಸುವ ಮತ್ತು ಉತ್ತಮ ಗುಣಮಟ್ಟದ ಅಡುಗೆ
ಉಪಕರಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದೇವೆ. ಈ ಪಿಜನ್ ಡ್ಯುಯೋ ಓಟಿಜಿ ಏರ್ ಫೈಯರ್ ಅಡುಗೆ ತಂತ್ರಜ್ಞಾನದಲ್ಲಿ ಒಂದು ಕ್ರಾಂತಿಕಾರಕ ಬೆಳವಣಿಗೆಯಾಗಿದ್ದು, ಎಲ್ಲರ ಅಗತ್ಯಗಳನ್ನು ಪೂರೈಸುವುದಕ್ಕೆ ವಿನ್ಯಾಸಗೊಳಿಸಲಾಗಿದೆ. ಈ ಉಪಕರಣವು ಸಾಂಪ್ರದಾಯಿಕ ಓಟಿಜಿ ಓವನ್ ಮತ್ತು ಸುಧಾರಿತ ಏರ್ ಫ್ರೈಯರ್ಗಳಾಗಿ ಸುಲಭವಾಗಿ ಪರಿವರ್ತನಗೊಳ್ಳುತ್ತದೆ ಮತ್ತು ಬೇಕಿಂಗ್, ರೋಸ್ಟಿಂಗ್, ಗ್ರಿಲ್ಲಿಂಗ್, ಟೋಸ್ಟಿಂಗ್ … ಹೀಗೆ ಹಲವು ಕೆಲಸಗಳನ್ನು ಸುಲಭವಾಗಿ ಮಾಡುತ್ತದೆ. ಇಲ್ಲಿ ಟ್ರೇಗಳನ್ನು ಸುಲಭವಾಗಿ ತೆಗೆಯಬಹುದಾಗಿದ್ದು, ಇದರಿಂದ ಸ್ವಚ್ಛತೆಗೆ ಅನುಕೂಲವಾಗಲಿದೆ’ ಎಂದು ಹೇಳುತ್ತಾರೆ.
ಪಿಜನ್ ಡ್ಯುಯೋ ಓಟಿಜಿ ಏರ್ ಫ್ರೈಯರ್ ಬಳಸುವ ಏರ್ ಫ್ರೈಯಿಂಗ್ ತಂತ್ರಜ್ಞಾನದಿಂದಾಗಿ ಕನಿಷ್ಠ ಎಣ್ಣೆಯೊಂದಿಗೆ ರುಚಿಕರವಾದ ಮತ್ತು ಆರೋಗ್ಯಕರ ಆಹಾರವನ್ನು ಸಿದ್ಧಪಡಿಸಬಹುದಾಗಿದೆ. ಈ ಹೊಸ ತಂತ್ರಜ್ಞಾನದಿಂದ ಹೆಚ್ಚುವರಿ ಕ್ಯಾಲೋರಿಗಳಿಲ್ಲದೆ ಮತ್ತು ರುಚಿಯನ್ನು ಬಿಟ್ಟುಕೊಡದೆಯೇ ಹುರಿಯಬಹುದಾಗಿದೆ. ಇದು ಬಳಸಲು ಸರಳವಾಗಿರುವುದರದ ಜೊತೆಗೆ, ನಿಖರವಾದ ತಾಪಮಾನ ಮತ್ತು ಅಡುಗೆ ಸಮಯದ ಸೆಟ್ಟಿಂಗ್ಗಳಿಗಾಗಿ ಆರು ನಿಯಂತ್ರಣಗಳಿರುವುದು ವಿಶೇಷ.