Saturday, May 11, 2024
Homeರಾಜ್ಯಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ಪಾಕ್ ಐಎಸ್‍ಐ ಸಂಪರ್ಕ ಹೊಂದಿರುವ ಮೌಲ್ವಿ : ಯತ್ನಾಳ್ ಬಾಂಬ್

ಸಿದ್ದರಾಮಯ್ಯ ಜೊತೆ ವೇದಿಕೆಯಲ್ಲಿ ಪಾಕ್ ಐಎಸ್‍ಐ ಸಂಪರ್ಕ ಹೊಂದಿರುವ ಮೌಲ್ವಿ : ಯತ್ನಾಳ್ ಬಾಂಬ್

ಬೆಳಗಾವಿ,ಡಿ.6- ಪಾಕಿಸ್ತಾನದ ಗುಪ್ತಚರ ಐಎಸ್‍ಐ ಜೊತೆ ಸಂಪರ್ಕ ಹೊಂದಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಐಎಸ್‍ಐ ಹಾಗೂ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮೌಲ್ವಿ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದು ಅತ್ಯಂತ ದುರ್ದೈವ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಅದು ಹೇಗೆ ಜಾರಿ ಮಾಡುತ್ತೀರಿ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ . ಇಂಥವರ ಬಗ್ಗೆ ಕಾಳಜಿ ತೋರುವ ಮುಖ್ಯಮಂತ್ರಿ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.ದೇಶದ ಪ್ರಧಾನಿ ರಾಜ್ಯಕ್ಕೆ ಬರುವಾಗ ಅವರ ಜೊತೆ ಯಾರ್ಯಾರು ಇರಬೇಕೆಂದು ಮೊದಲು ತೀರ್ಮಾನವಾಗುತ್ತದೆ. ಅಲ್ಲದೆ ಪೂರ್ವಪರ ಹಿನ್ನೆಲೆಯಲ್ಲ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಅದೇ ಮುಖ್ಯಮಂತ್ರಿ ಜೊತೆ ವೇದಿಕೆ ಹಂಚಿಕೊಳ್ಳುವಾಗ ಪೊಲೀಸ್ ಇಲಾಖೆ ಹಾಗೂ ಗುಪ್ತಚರಕ್ಕೆ ಮಾಹಿತಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.

ತುರ್ತು ಚಿಕಿತ್ಸೆಗಾಗಿ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದ ಸ್ಪೈಸ್‍ಜೆಟ್

ಈ ಮೌಲ್ವಿಯ ಹಿನ್ನೆಲೆ ಏನೆಂಬುದನ್ನು ಒಂದು ವಾರದಲ್ಲಿ ನಾನು ಸಂಪೂರ್ಣವಾಗಿ ಮಾಹಿತಿ ಕೊಡುತ್ತೇನೆ. ಮುಖ್ಯಮಂತ್ರಿಯವರು ಇಂಥವರ ಜೊತೆ ವೇದಿಕೆ ಹಂಚಿಕೊಂಡು ರಾಜ್ಯದ ಜನತೆಗೆ ಏನು ಸಂದೇಶ ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಹಣ ಹಂಚುತ್ತೇನೆ ಎಂದು ಹೇಳಿದ್ದಾರೆ. ನೀವು ಕೇವಲ ಮುಸ್ಲಿಮರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ಈ ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. ನಿಮಗೆ ಕೇವಲ ಅವರೊಬ್ಬರೇ ಮಾತ್ರ ಮತ ಹಾಕಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದ ಮುಖ್ಯಮಂತ್ರಿಯಾದವರು ಎಲ್ಲಾ ಸಮುದಾಯದವರನ್ನು ಸಮಾನವಾಗಿ ಕಾಣಬೇಕು. ಕೇವಲ ವೋಟ್ ಬ್ಯಾಂಕ್‍ಗಾಗಿ ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಹೀಗೆ ತುಷ್ಟೀಕರಣ ಮಾಡಿದ್ದರಿಂದಲೇ ನಿಮ್ಮ ಪರಿಸ್ಥಿತಿ ಏನಾಯಿತು ಎಂಬುದನ್ನು ಪಂಚರಾಜ್ಯ ಚುನಾವಣೆಯಿಂದಾದರೂ ತಿಳಿದುಕೊಳ್ಳಿ ಎಂದರು. ನೀವು ನಿಮ್ಮ ಪಕ್ಷದ ವತಿಯಿಂದ ಹಣ ನೀಡಿದರೆ ಸಮಸ್ಯೆ ಇಲ್ಲ. ಸರ್ಕಾರದ ದುಡ್ಡು ಎಲ್ಲ ಸಮುದಾಯಗಳಿಗೂ ಸದ್ಬಳಕೆಯಾಗಲಿ ಎಂದು ಹೇಳಿದರು.

ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆ ನಿಗೂಢ ಸಾವು

ಸ್ವಪಕ್ಷೀಯರ ವಿರುದ್ಧ ವಾಗ್ದಾಳಿ:
ಇನ್ನು ಯತ್ನಾಳ್ ಎಂದಿನಂತೆ ಸ್ವಪಕ್ಷೀಯರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು. ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ. ದೆಹಲಿಯಿಂದ ಕರೆ ಬಂದ ಮೇಲೆ ಹೋಗುತ್ತೇನೆ. ನಿನ್ನೆ ಸೂಚನೆ ಕೊಟ್ಟಿದ್ದಾರೆ. ಯಾವಾಗ ಕರೆ ಬರುತ್ತದೆ ಆಗ ಹೋಗುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಅವರಿಗೂ ಹೇಳಿರಬಹುದು. ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಉಚಿತ ಇಲ್ಲ ಎಂದು ವ್ಯಂಗ್ಯವಾಡಿದರು. ಇಬ್ಬರು ಮಹಾನುಭಾವರು ಇದ್ದಾರೆ. ಅವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇಬ್ಬರು ಸಿಂಗ್‍ಗಳಿಂದ ಈ ನಿರ್ಧಾರ ಮಾಡಿದ್ದೇನೆ. ದೆಹಲಿಯ ಒಬ್ಬರು, ಕರ್ನಾಟಕದ ಒಬ್ಬರು ಇದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

RELATED ARTICLES

Latest News