Friday, May 17, 2024
Homeರಾಷ್ಟ್ರೀಯಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆ ನಿಗೂಢ ಸಾವು

ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ತಂದೆ ನಿಗೂಢ ಸಾವು

ದುರ್ಗ್, ಡಿ 6 (ಪಿಟಿಐ) ಛತ್ತೀಸ್‍ಗಢದ ದುರ್ಗ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣದ ಆರೋಪಿ ಎಂದು ಹೆಸರಿಸಲಾದ ವ್ಯಕ್ತಿಯ ತಂದೆ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದ ಸುಶೀಲ್ ದಾಸ್ (62) ಮೃತದೇಹ ನಿನ್ನೆ ಮಧ್ಯಾಹ್ನ ಅಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಅಚ್ಚೋಟಿ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದ್ದು, ಪ್ರಾಥಮಿಕ ದೃಷ್ಟಿಯಲ್ಲಿ ಇದು ಆತ್ಮಹತ್ಯೆಯಂತಿದೆ ಎಂದು ದುರ್ಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಗೋಪಾಲ್ ಗಾರ್ಗ್ ಹೇಳಿದರು. ಮೃತರು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವ ಪ್ರಕರಣದಲ್ಲಿ ನಗದು ಕೊರಿಯರ್ ಆಗಿದ್ದ ಆಸಿಮ್ ದಾಸ್ ಅವರ ತಂದೆ.

ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸುಶೀಲ್ ದಾಸ್ ಭಾನುವಾರ ಸಂಜೆಯಿಂದ ನಾಪತ್ತೆಯಾಗಿದ್ದರು ಎಂದು ಗಾರ್ಗ್ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ತೋರುತ್ತದೆ, ಆದರೆ ಸಾವಿನ ಹಿಂದಿನ ನಿಖರವಾದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾದಕ ವಸ್ತು ಮಾರಾಟ-ಸಾಗಾಟ : 8 ಮಂದಿ ವಿದೇಶಿಗರು ಸೇರಿ 47 ಮಂದಿ ಬಂಧನ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಸೀಮ್ ದಾಸ್ ಮತ್ತು ಮತ್ತೊಬ್ಬ ಆರೋಪಿ, ಕಾನ್‍ಸ್ಟೆಬಲ್ ಭೀಮ್ ಸಿಂಗ್ ಯಾದವ್ ಅವರನ್ನು ನವೆಂಬರ್ 3 ರಂದು ಇಡಿ ಬಂಧಿಸಿತ್ತು.

ಫೋರೆನ್ಸಿಕ್ ವಿಶ್ಲೇಷಣೆ ಮತ್ತು ಕ್ಯಾಶ್ ಕೊರಿಯರ್ ದಾಸ್ ನೀಡಿದ ಹೇಳಿಕೆಯು ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ನಿರ್ಗಮಿತ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್‍ಗೆ ಇದುವರೆಗೆ ಸುಮಾರು 508 ಕೋಟಿ ರೂಪಾಯಿಗಳನ್ನು ಪಾವತಿಸಿದ್ದಾರೆ ಎಂಬ ಆಘಾತಕಾರಿ ಆರೋಪಗಳಿಗೆ ಕಾರಣವಾಯಿತು ಮತ್ತು ಇವು ತನಿಖೆಯ ವಿಷಯಗಳಾಗಿವೆ ಎಂದು ಇಡಿ ಹೇಳಿಕೊಂಡಿದೆ.

ಬಾಘೇಲ್ ಅವರು ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದರು ಮತ್ತು ಬಿಜೆಪಿಯು ಇಡಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದರು.ಅಸೀಂ ದಾಸ್‍ನಿಂದ 5.39 ಕೋಟಿ ನಗದು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡ ನಂತರ ರಾಯ್‍ಪುರದಲ್ಲಿ ಕೇಂದ್ರ ಏಜೆನ್ಸಿಯಿಂದ ಬಂಧಿಸಲಾಯಿತು. ಇಡಿ ಪ್ರಕಾರ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಚುನಾವಣಾ ವೆಚ್ಚಗಳಿಗಾಗಿ ದೊಡ್ಡ ಮೊತ್ತದ ಹಣವನ್ನು ತಲುಪಿಸಲು ಯುಎಇಯಿಂದ ವಿಶೇಷವಾಗಿ ಅಪ್ಲಿಕೇಶನ್ ಪ್ರವರ್ತಕರು ಅವರನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಶಪಡಿಸಿಕೊಂಡ ಹಣವನ್ನು ಛತ್ತೀಸ್‍ಗಢ ರಾಜ್ಯದಲ್ಲಿ ಮುಂಬರುವ ಚುನಾವಣಾ ವೆಚ್ಚಕ್ಕಾಗಿ ಒಬ್ಬ ರಾಜಕಾರಣಿ ಬಾಘೆಲಗೆ ತಲುಪಿಸಲು ಮಹದೇವ್ ಆ್ಯಪ್ ಪ್ರವರ್ತಕರು ವ್ಯವಸ್ಥೆಗೊಳಿಸಿದ್ದರು ಎಂದು ಅಸೀಮ್ ದಾಸ್ ಒಪ್ಪಿಕೊಂಡಿದ್ದಾರೆ ಎಂದು ಸಂಸ್ಥೆಯು ನವೆಂಬರ್‍ನಲ್ಲಿ ಎರಡು ಹಂತದ ಮತದಾನಕ್ಕೆ ಮುನ್ನ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

RELATED ARTICLES

Latest News