Tuesday, May 21, 2024
Homeರಾಷ್ಟ್ರೀಯಎರಡು ಬಸ್‌‍ಗಳ ನಡುವೆ ಸಿಲುಕಿ ಪ್ರಾಣ ಕಳೆದುಕೊಂಡ ಬೈಕ್‌ ಸವಾರರು

ಎರಡು ಬಸ್‌‍ಗಳ ನಡುವೆ ಸಿಲುಕಿ ಪ್ರಾಣ ಕಳೆದುಕೊಂಡ ಬೈಕ್‌ ಸವಾರರು

ಕೊಚ್ಚಿ, ಮೇ 10 (ಪಿಟಿಐ) ಎರಡು ಬಸ್‌‍ಗಳ ನಡುವೆ ಬೈಕ್‌ ಸಿಕ್ಕಿದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

ಇಲ್ಲಿನ ಪಲರಿವಟ್ಟಂ ಬಳಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎರಡು ಬಸ್‌‍ಗಳ ನಡುವೆ ದ್ವಿಚಕ್ರ ವಾಹನ ಸಿಲುಕಿ ಇಬ್ಬರು ವ್ಯಕ್ತಿಗಳು ಮತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನವು ಒಂದು ಬಸ್‌‍ನ ಹಿಂದೆ ಇದ್ದಾಗ ಇನ್ನೊಂದು ಬಸ್‌‍ ಹಿಂದಿನಿಂದ ಬಂದು ಮೋಟಾರ್‌ಸೈಕಲ್‌ ಮತ್ತು ಅದರ ಮುಂಭಾಗದಲ್ಲಿದ್ದ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಬಸ್‌‍ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸವಾರರಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯಿಂದ ಬಂದ ಬಸ್‌‍ ಚಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದಿನಿಂದ ಬಂದ ಬಸ್‌‍ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News