ನಿತ್ಯ ನೀತಿ : ಬದುಕು ಸುಂದರವಾಗಿರಲು ದೈವಭಕ್ತಿ ಅತ್ಯವಶ್ಯಕ. ಧರ್ಮ ಸಂಪನ್ನವಾದ ಭಾರತದಂತಹ ದೇಶದ ಅಮೂಲ್ಯ ಆಸ್ತಿಯೂ ದೈವ ಭಕ್ತಿ.
ಪಂಚಾಂಗ ಗುರುವಾರ 07-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ದಶಮಿ / ನಕ್ಷತ್ರ: ಹಸ್ತ / ಯೋಗ: ಆಯುಷ್ಮಾನ್ / ಕರಣ: ವಣಿಜ್
ಸೂರ್ಯೋದಯ : ಬೆ.06.29
ಸೂರ್ಯಾಸ್ತ : 05.53
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿ ಭವಿಷ್ಯ
ಮೇಷ: ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಪರಿಹಾರವಾಗಬಹುದು.
ವೃಷಭ: ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.
ಮಿಥುನ: ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ.
ಕಟಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಿದೆ.
ಸಿಂಹ: ರಿಯಲ್ ಎಸ್ಟೇಟ್‍ಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಕನ್ಯಾ: ಸ್ತ್ರೀಯರಿಂದ ಅಪವಾದಕ್ಕೆ ಗುರಿಯಾಗುವ ಸಾಧ್ಯತೆಗಳಿವೆ.
ತುಲಾ: ಉನ್ನತ ವಿದ್ಯಾಭ್ಯಾಸಕ್ಕೆ ದೂರ ಪ್ರಯಾಣ ಮಾಡಬೇಕಾಗಬಹುದು.
ವೃಶ್ಚಿಕ: ನಕಾರಾತ್ಮಕವಾಗಿ ಮಾತನಾಡುವ ಜನರಿಂದ ದೂರವಿರುವುದು ಉತ್ತಮ.
ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ.
ಮಕರ: ಯಾವುದೇ ಕೆಲಸ ಮಾಡುವಾಗ ಹಿರಿಯರ ಸಲಹೆ-ಸೂಚನೆಗಳನ್ನು ಪಡೆಯುವುದು ಒಳಿತು.
ಕುಂಭ: ನೀವು ಮಾತನಾಡುವ ರೀತಿಯಿಂದಾಗಿ ಬೇರೆಯವರಿಗೆ ನೋವಾಗಬಹುದು.
ಮೀನ: ದೂರದ ಬಂಧುಗಳ ಆಗಮನವಾಗಲಿದೆ. ನೆರೆಹೊರೆಯವರು ನಿಮ್ಮ ನೆರವಿಗೆ ಬರುವರು.