ರಾಜ್ಗಢ, ಡಿ 6 (ಪಿಟಿಐ) -ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯಲ್ಲಿ ಬೋರ್ವೆಲ್ಗೆ ಬಿದ್ದ ನಾಲ್ಕು ವರ್ಷದ ಬಾಲಕಿ ಇಂದು ಮುಂಜಾನೆ ರಕ್ಷಿಸಿದ ಕೆಲವೇ ಗಂಟೆಗಳ ನಂತರ ಭೋಪಾಲ್ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿ ಎಂದು ಗುರುತಿಸಲಾದ ಮಗುವನ್ನು ಬೆಳಗಿನ ಜಾವ 2.45 ರ ಸುಮಾರಿಗೆ ಜೀವಂತವಾಗಿ ರಕ್ಷಿಸಲಾಯಿತು ಮತ್ತು ಪಚೋರ್ನಲ್ಲಿರುವ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಮಾರ್ಗಮಧ್ಯೆ ಆಕೆಯ ಸ್ಥಿತಿ ಹದಗೆಟ್ಟಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಬಾಲಕಿಯನ್ನು ಸುಮಾರು 70 ಕಿ.ಮೀ ದೂರದಲ್ಲಿರುವ ಭೋಪಾಲ್ನಲ್ಲಿರುವ ಸರ್ಕಾರಿ ಹಮೀಡಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಚಿಕಿತ್ಸೆ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ ಕಿರಣ್ ವಾಡಿಯಾ ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆಯ ನಂತರ ಮಗುವಿನ ಸಂಬಂಕರಿಗೆ ಶವವನ್ನು ಹಸ್ತಾಂತರಿಸಲಾಗುವುದು ಎಂದು ಅವರು ಹೇಳಿದರು.
ಸಿ.ಪಿ.ಯೋಗೇಶ್ವರ್ ಭಾವನ ಕೊಲೆ ಹಿಂದೆ ಇದೆಯಾ ಹಣಕಾಸು ವಿಚಾರ..?
ನಿನ್ನೆ ಸಂಜೆ ಹೊಲದಲ್ಲಿ ತೆರೆದ ಬೋರ್ವೆಲ್ಗೆ ಮಹಿ ಬಿದ್ದಿದ್ದು, ತಜ್ಞರ ತಂಡ ಸುಮಾರು 25 ಅಡಿ ಆಳಕ್ಕೆ ಸಮಾನಾಂತರ ಹೊಂಡ ತೋಡಿ ರಕ್ಷಿಸಿದ್ದರು. ಆಕೆ 22 ಅಡಿ ಎತ್ತರದಲ್ಲಿ ಸಿಲುಕಿಕೊಂಡಿದ್ದು, ಎರಡು ಹೊಂಡಗಳನ್ನು ಜೋಡಿಸಿದ ನಂತರ ಆಕೆಯನ್ನು ತಜ್ಞರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ರಾಜ್ಗಢ ಪೊಲೀಸ್ ವರಿಷ್ಠಾಧಿಕಾರಿ ಧರ್ಮರಾಜ್ ಮೀನಾ ತಿಳಿಸಿದ್ದಾರೆ.
ಬೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ಲಿಯಾ ರಸೋಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದರು.ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್ಡಿಇಆರ್ಎಫï) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಬೋರ್ವೆಲ್ ಶಾಫ್ಟ್ನೊಳಗೆ ಆಮ್ಲಜನಕವನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಎಸ್ಡಿಇಆರ್ಎಫ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್ ) ತಂಡಗಳನ್ನು ಸ್ಥಳಕ್ಕೆ ಕಳುಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ಜಿಲ್ಲಾಡಳಿತವನ್ನು ಕೋರಿದ್ದರು.