Wednesday, December 3, 2025
Homeಬೆಂಗಳೂರುಶೇ.50 ರಷ್ಟು ಟ್ರಾಫಿಕ್ ಫೈನ್ ಪಾವತಿಗೆ ಉತ್ತಮ ಪ್ರತಿಕ್ರಿಯೆ, ಬರೋಬ್ಬರಿ 8 ಕೋಟಿಗೂ ಅಧಿಕ ಕಲೆಕ್ಷನ್

ಶೇ.50 ರಷ್ಟು ಟ್ರಾಫಿಕ್ ಫೈನ್ ಪಾವತಿಗೆ ಉತ್ತಮ ಪ್ರತಿಕ್ರಿಯೆ, ಬರೋಬ್ಬರಿ 8 ಕೋಟಿಗೂ ಅಧಿಕ ಕಲೆಕ್ಷನ್

Good response to 50% traffic fine payment, collection of over Rs 8 crore

ಬೆಂಗಳೂರು,ಡಿ.1-ಸಂಚಾರಿ ನಿಯಮ ಉಲ್ಲಂಘನೆಯ ಶೇ.50 ರಷ್ಟು ದಂಡ ಪಾವತಿಗೆ ನಗರ ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ನೀಡಲಾಗಿದ್ದ 10 ದಿನಗಳ ಅವಧಿಯಲ್ಲಿ ನಿನ್ನೆಯವರೆಗೂ ಬರೋಬ್ಬರಿ 8 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದೆ.

ದಂಡ ಪಾವತಿಯಿಂದಾಗಿ 2,82,793 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಇತ್ಯರ್ಥಗೊಂಡಿವೆ. ಶೇ.50 ರಷ್ಟು ದಂಡ ಪಾವತಿಗೆ ಸರ್ಕಾರ ಡಿ.12 ವರೆಗೆ ರಿಯಾಯಿತಿ ನೀಡಿದ್ದು, ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರು ಅಥವಾ ಚಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.

RELATED ARTICLES

Latest News