ನಿತ್ಯ ನೀತಿ : ಆಚಾರ-ವಿಚಾರಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಎಲ್ಲರೂ ಸಹಾಯ, ಸಹಕಾರ ಮನೋಭಾವದಿಂದ ಅರ್ಥೈಸಿಕೊಂಡು ಬಾಳುವುದನ್ನು ಕಲಿಯಬೇಕು.
ಪಂಚಾಂಗ ಶನಿವಾರ 09-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಚಿತ್ತಾ / ಯೋಗ: ಶೋಭನ / ಕರಣ: ಕೌಲವ
ಸೂರ್ಯೋದಯ : ಬೆ.06.30
ಸೂರ್ಯಾಸ್ತ : 05.53
ರಾಹುಕಾಲ : 9.00-10.30
ಯಮಗಂಡ ಕಾಲ : 1.30-3.00
ಗುಳಿಕ ಕಾಲ : 6.00-7.30
ರಾಶಿ ಭವಿಷ್ಯ
ಮೇಷ: ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಸಿಕ್ಕಿರುವು ದಕ್ಕೆ ಮನಸ್ಸಿಗೆ ಸಂತಸವಾಗಲಿದೆ.
ವೃಷಭ: ಹೊಸ ಜವಾಬ್ದಾರಿ ಹೊರುವ ಸಂದರ್ಭ ಗಳು ಎದುರಾಗಬಹುದು.
ಮಿಥುನ: ನಿರೀಕ್ಷಿಸಿದಂತೆ ಅಧಿಕ ಧನಲಾಭ ದೊರೆಯಲಿದೆ. ಅನ್ಯರ ಮಾತಿನ ಬಗ್ಗೆ ಅತಿಯಾದ ವಿಶ್ವಾಸ ಬೇಡ.
ಕಟಕ: ವಕೀಲರು ಕೋರ್ಟು -ಕಚೇರಿ ಕೆಲಸಗಳಲ್ಲಿ ಅಧಿಕ ಲಾಭ ಗಳಿಸುವರು.
ಸಿಂಹ: ವೃತ್ತಿ ಮತ್ತು ಮುಂದಿನ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ.
ಕನ್ಯಾ: ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ಗಳಿಸುವ ಸಂದರ್ಭಗಳು ಎದುರಾಗಲಿವೆ.
ತುಲಾ: ಕುಟುಂಬದ ವಿಷಯದಲ್ಲಿ ನಿಮ್ಮ ದೃಢ ನಿಲುವಿಗೆ ಎಲ್ಲರಿಂದಲೂ ಸಮ್ಮತಿ ಸಿಗಲಿದೆ.
ವೃಶ್ಚಿಕ: ಪ್ರಭಾವಿ ವ್ಯಕ್ತಿಗಳ ಜತೆಗಿನ ಒಡನಾಟ ಮತ್ತು ಓಡಾಟ ಹೆಚ್ಚಿನ ಸ್ಥಾನಮಾನ ತಂದುಕೊಡಲಿದೆ.
ಧನುಸ್ಸು: ತರಾತುರಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ.
ಮಕರ: ಆಧ್ಯಾತ್ಮದ ಕಡೆಗೆ ಹೆಚ್ಚು ಗಮನ ಹರಿಸಿ. ಅಧಿಕ ಧನವ್ಯಯವಾಗುವ ಸಂಭವವಿದೆ.
ಕುಂಭ: ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಗಳಾಗಲಿವೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವಿರಿ.
ಮೀನ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.