Monday, November 25, 2024
Homeರಾಜಕೀಯ | Politicsಲೋಕಸಭೆ ಚುನಾವಣೆಗೆ ಅಣ್ಣಾವ್ರ ಕುಟುಂಬದ ವರ್ಚಸ್ಸು ಬಳಕೆಗೆ ಡಿಕೆಶಿ ಗೇಮ್ ಪ್ಲಾನ್

ಲೋಕಸಭೆ ಚುನಾವಣೆಗೆ ಅಣ್ಣಾವ್ರ ಕುಟುಂಬದ ವರ್ಚಸ್ಸು ಬಳಕೆಗೆ ಡಿಕೆಶಿ ಗೇಮ್ ಪ್ಲಾನ್

ಬೆಳಗಾವಿ,ಡಿ.11- ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ಕುಮಾರ್ ಅವರನ್ನು ನೇರವಾಗಿ ರಾಜಕಾರಣಕ್ಕೆ ಆಹ್ವಾನಿಸುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ರಣತಂತ್ರವೊಂದನ್ನು ರೂಪಿಸಿದ್ದಾರೆ.ಈ ಹಿಂದೆ ವಿಧಾನಸಭೆ ಚುನಾವಣೆಯ ವೇಳೆ ಒಂದರ ಮೇಲೊಂದರಂತೆ ರಣತಂತ್ರಗಳನ್ನು ರೂಪಿಸಿ ಯಶಸ್ವಿಯಾಗಿದ್ದ ಡಿ.ಕೆ.ಶಿವಕುಮಾರ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.

ಡಾ.ರಾಜಕುಮಾರ್ ಕುಟುಂಬಕ್ಕೆ ಕರ್ನಾಟಕದಲ್ಲಿ ದೊಡ್ಡ ಹೆಸರಿದೆ. ನಾಡು-ನುಡಿ ವಿಷಯದಲ್ಲಿ ವರನಟ ಡಾ.ರಾಜ್ರ ಕೊಡುಗೆ ಅಪಾರ ಹಾಗೂ ವಿಶೇಷವಾದುದು. ಆದರೆ ಅವರು ಎಂದಿಗೂ ರಾಜಕಾರಣದತ್ತ ಸುಳಿಯಲಿಲ್ಲ. ಅನಂತರ ರಾಜ್ಕುಮಾರ್ರ ಸೊಸೆ ಗೀತಾ ಶಿವರಾಜ್ಕುಮಾರ್ರವರು ಜೆಡಿಎಸ್ನಿಂದ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸೋಲು ಕಂಡರು. ಅನಂತರ ಕೆಲಕಾಲ ರಾಜಕೀಯದಿಂದ ದೂರ ಉಳಿದಿದ್ದರು.

ವಿಧಾನಸಭೆ ಚುನಾವಣೆಯ ವೇಳೆ ಡಿ.ಕೆ.ಶಿವಕುಮಾರ್ರವರು ಸತತ ಪ್ರಯತ್ನ ನಡೆಸಿ ಗೀತಾ ಶಿವರಾಜ್ಕುಮಾರ್ರವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲು ಕಾಂಗ್ರೆಸ್ ತಯಾರಿದೆ. ಆದರೆ ಗೀತಾ ಶಿವರಾಜ್ಕುಮಾರ್ ಅವರಿಗಿಂತಲೂ ಶಿವರಾಜ್ಕುಮಾರ್ರವರೇ ನೇರವಾಗಿ ರಾಜಕಾರಣಕ್ಕೆ ಬಂದರೆ ಕಾಂಗ್ರೆಸ್ಗೆ ಭಾರೀ ಲಾಭವಾಗಲಿದೆ ಎಂಬ ವರದಿಯಿದೆ.ಈ ಹಿನ್ನೆಲೆಯಲ್ಲಿಯೇ ಡಿ.ಕೆ.ಶಿವಕುಮಾರ್ರವರು ನಿನ್ನೆ ಆರ್ಯ ಈಡಿಗರ ಸಮಾವೇಶದಲ್ಲಿ ನೇರವಾಗಿ ಶಿವರಾಜ್ಕುಮಾರ್ರವರನ್ನು ರಾಜಕೀಯ ಪ್ರವೇಶಿಸುವಂತೆ ಆಹ್ವಾನ ನೀಡಿದ್ದರು.

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನೆ ಮೂಡಿಸಿದೆ ಕುಮಾರಸ್ವಾಮಿ ಹೇಳಿಕೆ

ಅದನ್ನು ವೇದಿಕೆಯಲ್ಲಿ ಶಿವರಾಜ್ಕುಮಾರ್ ಅಷ್ಟೇ ನಯವಾಗಿ ತಳ್ಳಿ ಹಾಕಿದರು. ಆದರೆ ತಾವು ನಿಮ್ಮೊಂದಿಗೆ ಇರುವುದಾಗಿ ಬಹಿರಂಗವಾಗಿಯೇ ಶಿವರಾಜ್ಕುಮಾರ್ ಭರವಸೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ನಿರೀಕ್ಷೆ ಮಾಡಿದ್ದು ಕೂಡ ಇದನ್ನೇ ಎಂದು ಹೇಳಲಾಗಿದೆ.ರಾಜಕುಮಾರ್ ಕುಟುಂಬ ರಾಜಕಾರಣಕ್ಕೆ ಬರುವುದಿಲ್ಲ ಎಂಬುದು ಹಲವು ಬಾರಿ ಸ್ಪಷ್ಟವಾಗಿದೆ. ಆದರೂ ಡಿ.ಕೆ.ಶಿವಕುಮಾರ್ ಉದ್ದೇಶಪೂರ್ವಕವಾಗಿಯೇ ಶಿವರಾಜ್ಕುಮಾರ್ ಅವರನ್ನು ಆಹ್ವಾನಿಸಿದರು. ಶಿವರಾಜ್ಕುಮಾರ್ರವರು ತಾವು ಬರುವುದಿಲ್ಲ. ಆದರೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬಹಿರಂಗವಾಗಿ ಭರವಸೆ ನೀಡಿದರು.

ಈ ಸಲುವಾಗಿಯೇ ಡಿ.ಕೆ.ಶಿವಕುಮಾರ್ ರಾಜಕೀಯ ದಾಳ ಉರುಳಿಸಿದರು ಎಂದು ಹೇಳಲಾಗಿದೆ. ಮುಂದಿನ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ರ್ಪಸಿದರೂ ನಿರೀಕ್ಷಿತ ಫಲಿತಾಂಶ ಬರುವುದಿಲ್ಲ ಎಂಬ ವರದಿಯಿದೆ. ಆದರೆ ರಾಜ್ ಕುಟುಂಬದ ಬೆಂಬಲ ಕಾಂಗ್ರೆಸ್ಗೆ ಬಹಳಷ್ಟು ಕ್ಷೇತ್ರಗಳಲ್ಲಿ ಲಾಭ ಮಾಡಿಕೊಡಲಿದೆ.

ಮತಗಳಿಕೆಯ ಬೆನ್ನು ಬಿದ್ದಿರುವ ಡಿ.ಕೆ.ಶಿವಕುಮಾರ್ ಪಕ್ಕಾ ರಾಜಕಾರಣಿಯಂತೆ ತಮ್ಮ ಉದ್ದೇಶ ಈಡೇರಿಕೆಗಾಗಿ ಎಲ್ಲಾ ರೀತಿಯ ಸರ್ಕಸ್ಗಳನ್ನು ಮಾಡುತ್ತಿದ್ದಾರೆ. ಕೆಲದಿನಗಳಿಂದ ಆಪರೇಷನ್ ಹಸ್ತದ ಚಟುವಟಕೆಗಳನ್ನು ಸ್ಥಗಿತಗೊಳಿಸಲಾಗಿದೆ. ವಿಧಾನಮಂಡಲ ಅವೇಶನದ ಬಳಿಕ ಈ ಚಟುವಟಿಕೆಗಳು ಮತ್ತೆ ಗರಿಗೆದರಲಿವೆ ಎಂದು ಹೇಳಲಾಗಿದೆ.

RELATED ARTICLES

Latest News