Thursday, May 2, 2024
Homeರಾಜಕೀಯರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನೆ ಮೂಡಿಸಿದೆ ಕುಮಾರಸ್ವಾಮಿ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನೆ ಮೂಡಿಸಿದೆ ಕುಮಾರಸ್ವಾಮಿ ಹೇಳಿಕೆ

ಬೆಳಗಾವಿ,ಡಿ.11- ಮೇ ಬಳಿಕ ಸರ್ಕಾರ ಪತನವಾಗಲಿದೆ. ಸಚಿವರೊಬ್ಬರು 50 ಮಂದಿ ಶಾಸಕರೊಂದಿಗೆ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ರಾಜಕೀಯವಾಗಿ ಭಾರೀ ಸಂಚಲನ ಮೂಡಿಸಿದ್ದು, ಸಚಿವರ್ಯಾರು ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

ಮೂಲಗಳ ಪ್ರಕಾರ, ಈ ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಮುಳುವಾಗಿದ್ದ ಬೆಳಗಾವಿ ಮೂಲದ ರಾಜಕಾರಣವೇ ಪ್ರಸ್ತುತ ಕಾಂಗ್ರೆಸ್ ಸರ್ಕಾರಕ್ಕೂ ಮುಗ್ಗಲು ಮುಳ್ಳಾಗಿದೆ ಎಂದು ಹೇಳಲಾಗುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಸಚಿವರೊಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಬ್ರಹ್ಮಾಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಇದಕ್ಕೆ ತಕ್ಕ ಹಾಗೆ ಡಿ.ಕೆ.ಶಿವಕುಮಾರ್ರವರು ಬೆಳಗಾವಿ ರಾಜಕಾರಣದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ.

ಡಿ.ಕೆ.ಶಿವಕುಮಾರ್ ಅವರನ್ನು ಹತ್ತಿಕ್ಕುವ ಸಲುವಾಗಿಯೇ ಪದೆಪದೆ ರಾಜ್ಯ ರಾಜಕಾರಣದಲ್ಲಿ ವಿಪರೀತವಾದ ಬೆಳವಣಿಗೆಗಳಾಗುತ್ತಿವೆ. ಈ ಬಾರಿಯೂ ಅದೇ ರೀತಿಯ ಚಟುವಟಿಕೆಗಳು ಶುರುವಾಗಿವೆ.ಏಕಕಾಲಕ್ಕೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಚರ್ಚೆ ಆರಂಭವಾಗಿದ್ದು, ಅದಕ್ಕೆ ಸಿದ್ದರಾಮಯ್ಯ ಅವರ ಬಣ ಕೌಂಟರ್ ನೀಡಿದ್ದು, ಅದರ ಬೆನ್ನ ಹಿಂದೆಯೇ ಡಿ.ಕೆ.ಶಿವಕುಮಾರ್ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಅಲ್ಲಿ ಅವರನ್ನು ಸ್ವಾಗತಿಸಲು ಯಾವ ಶಾಸಕರೂ ಆಗಮಿಸದೇ ಇರುವುದು ಕೆಲವೇ ದಿನಗಳಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ಅಸ್ತು ಎಂದಿದ್ದು, ಸಂಪುಟದಲ್ಲಿ ಸಿಬಿಐ ತನಿಖೆಗೆ ನೀಡಲಾಗಿದ್ದ ಪೂರ್ವಭಾವಿ ಅನುಮತಿಯನ್ನು ಹಿಂಪಡೆಯುವ ನಿರ್ಣಯ ಕೈಗೊಂಡಿದ್ದು ಎಲ್ಲವೂ ಕಾಕತಾಳೀಯ ಎನ್ನಲಾಗಿದೆ.

50 ಅಧಿಕಾರಿಗಳು, 40 ಎಣಿಕೆ ಯಂತ್ರ, ಎಣಿಸಿದಷ್ಟು ಹೆಚ್ಚುತ್ತಲೆ ಇದೆ ಸಾಹು ಸಂಪತ್ತು

ಪ್ರಭಾವಿ ಸಚಿವರೊಬ್ಬರು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದು ತಮಗೆ ಇಷ್ಟವಿಲ್ಲ. ಒಂದು ವೇಳೆ ಆ ರೀತಿ ಆದರೆ ಅನಂತರದ ರಾಜಕೀಯ ಬೆಳವಣಿಗೆಗೆ ನಾವು ಹೊಣೆ ಅಲ್ಲ ಎಂದು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.ಇದನ್ನು ಆಧಾರವಾಗಿಟ್ಟುಕೊಂಡೇ ಎಚ್.ಡಿ.ಕುಮಾರಸ್ವಾಮಿ ಮೇ ನಂತರ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಬಾಂಬ್ ಸಿಡಿಸಿದ್ದಾರೆ. ಕುಮಾರಸ್ವಾಮಿ ಹೇಳಿಕೆಗಳಲ್ಲಿ 2 ವಿಚಾರಗಳು ಸ್ಪಷ್ಟವಾದಂತಿದೆ.

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ನಲ್ಲಿ ಅಕಾರ ಹಂಚಿಕೆಯ ಪರ್ವ ನಡೆಯಲಿದೆ. ಅಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಬಣದ ಪ್ರಭಾವಿ ಸಚಿವರು 50 ಮಂದಿ ಶಾಸಕರೊಂದಿಗೆ ಹೊರಬರಲಿದ್ದು, ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಗಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಕಾಂಗ್ರೆಸ್ಗೆ ಅಳಿವು-ಉಳಿವಿನ ಪ್ರಶ್ನೆಯಂತಿರುವ ಲೋಕಸಭೆ ಚುನಾವಣೆಯವರೆಗೂ ಯಾವುದೇ ಗೊಂದಲಗಳನ್ನು ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಎಲ್ಲಾ ನಾಯಕರೂ ಉಸಿರು ಬಿಗಿ ಹಿಡಿದುಕೊಂಡು ಸಹಿಸಿಕೊಳ್ಳುತ್ತಿದ್ದಾರೆ.

ವರ್ಗಾವಣೆ, ಸಚಿವ ಸಂಪುಟ ನಿರ್ಣಯಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಒಳಬೇಗುದಿಗಳು ಹೆಚ್ಚಾಗುತ್ತಲೇ ಇವೆ. ಆದರೂ ಎಲ್ಲಾ ನಾಯಕರೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಕಾರಣಕ್ಕೆ ತಾಳ್ಮೆಯಿಂದ ಸಹಿಸಿಕೊಂಡಿದ್ದಾರೆ.
ಕುಮಾರಸ್ವಾಮಿಯವರ ಹೇಳಿಕೆ ಕಾಂಗ್ರೆಸ್ನ ತಿಳಿಗೊಳಕ್ಕೆ ಕಲ್ಲೆಸೆದಂತಾಗಿದೆ.

RELATED ARTICLES

Latest News