Saturday, May 4, 2024
Homeರಾಜ್ಯ6 ತಿಂಗಳು ಪರಿಷತ್ ವಿಪಕ್ಷ ನಾಯಕ ಸ್ಥಾನ ಖಾಲಿ ಇರುವುದು ದುರಂತ : ಗುಂಡೂರಾವ್

6 ತಿಂಗಳು ಪರಿಷತ್ ವಿಪಕ್ಷ ನಾಯಕ ಸ್ಥಾನ ಖಾಲಿ ಇರುವುದು ದುರಂತ : ಗುಂಡೂರಾವ್

ಬೆಳಗಾವಿ,ಡಿ.11- ಇತಿಹಾಸದಲ್ಲೇ 6 ತಿಂಗಳ ಕಾಲ ವಿಧಾನಪರಿಷತ್ನ ವಿರೋಧಪಕ್ಷದ ನಾಯಕ ಸ್ಥಾನವನ್ನು ಖಾಲಿ ಬಿಟ್ಟಿರುವುದು ದುರಂತದ ವಿಚಾರ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿದೆ. ಆದರೆ ಅದರ ಹಿಂದೆಯೇ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿವೆ. ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದೆ. ಅವುಗಳನ್ನೆಲ್ಲಾ ಸರಿಪಡಿಸಿಕೊಂಡು ಬಿಜೆಪಿ ಪರಿಣಾಮಕಾರಿಯಾಗಿ ವಿರೋಧಪಕ್ಷದಲ್ಲಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ವಿಧಾನಪರಿಷತ್ನ ನಾಯಕನ ಸ್ಥಾನವನ್ನು 6 ತಿಂಗಳ ಕಾಲ ಖಾಲಿ ಬಿಟ್ಟಿರುವುದು ತಪ್ಪು ಸಂದೇಶ ರವಾನಿಸುತ್ತದೆ. ವಿರೋಧಪಕ್ಷವನ್ನು ಅವರದೇ ಪಕ್ಷ ಅವಮಾನ ಮಾಡಿದಂತಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.

50 ಅಧಿಕಾರಿಗಳು, 40 ಎಣಿಕೆ ಯಂತ್ರ, ಎಣಿಸಿದಷ್ಟು ಹೆಚ್ಚುತ್ತಲೆ ಇದೆ ಸಾಹು ಸಂಪತ್ತು

ವಿಧಾನಮಂಡಲದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಗಂಭೀರವಾದ ಚರ್ಚೆಯಾಗಬೇಕು. ಅದನ್ನು ಬಿಟ್ಟು ಬಿಜೆಪಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಕಾಲಾಹರಣ ಮಾಡುತ್ತಿದೆ. ರಾಜ್ಯದ ಪ್ರಮುಖ ವಿಚಾರಗಳು ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು. ಆದರೆ ಬೆಳಗಾವಿಯಲ್ಲಿ ಅವೇಶನ ನಡೆಯುತ್ತಿರುವುದರಿಂದ ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ತಿಳಿಸಿದರು.

RELATED ARTICLES

Latest News