Monday, November 25, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-12-2023)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-12-2023)

ನಿತ್ಯ ನೀತಿ :
ಯಾರು ತನ್ನ ಸುಖವನ್ನು ಸಮಾಜಕ್ಕಾಗಿ ತ್ಯಾಗ ಮಾಡುವುದಕ್ಕೆ ಮುಂದಾಗುತ್ತಾರೋ ಅವರಿಗೆ ಸಮಾಜವನ್ನು ಉದ್ಧರಿಸುವಂತಹ ಕೆಲಸಗಳು ಅವರ ಕಣ್ಮುಂದೆ ಹೊಳೆಯುವುದಕ್ಕೆ ಆರಂಭಿಸುತ್ತವೆ.

ಪಂಚಾಂಗ : ಗುರುವಾರ, 14-12-2023
ಶೋಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಮೂಲಾ / ಯೋಗ: ಗಂಡ / ಕರಣ: ಬಾಲವ

ಸೂರ್ಯೋದಯ :ಬೆ.06.33
ಸೂರ್ಯಾಸ್ತ : 05.55
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ಇಂದಿನ ರಾಶಿಭವಿಷ್ಯ
ಮೇಷ
: ಒತ್ತಡವಿದ್ದರೂ ಸಮಾಧಾನದಿಂದ ಕೆಲಸ-ಕಾರ್ಯ ಆರಂಭಿಸಲು ಪ್ರಯತ್ನಿಸುವಿರಿ.
ವೃಷಭ: ಮಕ್ಕಳಿಂದ ಅನುಕೂಲವಾಗಲಿದೆ. ಗೌರವ- ಸನ್ಮಾನ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ.

ಮಿಥುನ: ಅಂದುಕೊಂಡ ಕೆಲಸಗಳು ಈಡೇರಲಿವೆ. ಬಂಧುಗಳಿಂದ ಸಹಾಯ ಸಿಗಲಿದೆ.
ಕಟಕ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭ ಗಳು ಬರಬಹುದು.
ಸಿಂಹ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ಕನ್ಯಾ: ಕಾರ್ಯನಿರ್ವ ಹಣೆಯಲ್ಲಿ ಉತ್ಸಾಹ ಕಳೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ.

ತುಲಾ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ವೃಶ್ಚಿಕ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಧನುಸ್ಸು: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.

ಮಕರ: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.
ಕುಂಭ: ಪೋಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಬಹಳ ಸೂಕ್ತ.
ಮೀನ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.

ಸ್ನೇಹಿತನ ಜೊತೆ ಸಹಕರಿಸುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ದೂರು

RELATED ARTICLES

Latest News