ಬೆಂಗಳೂರು, ಸೆ.29- ಸಂಕಷ್ಟ ಸೂತ್ರ ರಚನೆಯ ಬಗ್ಗೆ ರಾಜ್ಯ ಸರ್ಕಾರ ತನ್ನ ಪಾಲಿನ ಸೂತ್ರಗಳನ್ನು ರೂಪಿಸಲು ಇಂದು ನಡೆಯುವ ಮಹತ್ವದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಕಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ರಚನೆ ಮಾಡಬೇಕಿದೆ. ಬೇರೆ ಪಕ್ಷದವರು ಹೇಳಿದಂತೆ ನಾನು ಮಾತನಾಡಲು ಸಾಧ್ಯವಿಲ್ಲ. ಸಚಿವನಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕಿದೆ. ಸಂಕಷ್ಟ ಸೂತ್ರಕ್ಕೆ ಮೊದಲು ನಮ್ಮ ಸಮಸ್ಯೆ ಬಗ್ಗೆ ಮಾರ್ಗಸೂಚಿ ಸಿದ್ದ ಪಡಿಸಿಕೊಳ್ಳ ಬೇಕಿದೆ. ಅದಕ್ಕಾಗಿ ಇಂದು ಮಹತ್ವದ ಸಭೆ ನಡೆಸಲಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಿವೃತ್ತ ನ್ಯಾಯಾೀಶರು, ಮಾಜಿ ಅಡ್ವೋಕೆಟ್ ಜನರಲ್ಗಳು ಹಾಗೂ ಹಿರಿಯ ವಕೀಲರ ತಂಡದ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದರು. ಇಂದು ಕಾವೇರಿ ನೀರು ನಿರ್ವಹಣಾ ಪ್ರಾಕಾರದ ಸಭೆ ನಡೆಯುತ್ತಿದೆ.
15 ವರ್ಷ ಹಳೆಯ 5 ಸಾವಿರ ಸರ್ಕಾರಿ ವಾಹನಗಳನ್ನು ನಾಶಪಡಿಸಲು ಅನುಮತಿ
ಅಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆಯ ಆದೇಶವನ್ನು ಪ್ರಶ್ನೆ ಮಾಡಿದ್ದೇವೆ. ಸದ್ಯಕ್ಕೆ ಮಳೆಯಿಲ್ಲ. ಹಾಗಾಗಿ ಸಮಿತಿಯ ಆದೇಶದಂತೆ ಪ್ರತಿದಿನ ಮೂರು ಸಾವಿರ ಕ್ಯೂಸೆಕ್ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದೇವೆ ಎಂದು ಹೇಳಿದರು.
ಕಾವೇರಿ ವಿಷಯದಲ್ಲಿ ಕರ್ನಾಟಕ ಬಂದ್ ಅವಶ್ಯಕತೆ ಇರಲಿಲ್ಲ. ಕೆಲ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದವು. ಆದರೆ ಸರ್ಕಾರ ಜನರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದೆ. ಎಲ್ಲೆಡೆ ಸಂಚಾರ ಎಂದಿನಂತಿದೆ. ಅಂಗಡಿ, ವ್ಯಾಪಾರ ವಹಿವಾಟುಗಳು ಮುಂದುವರೆದಿದೆ. ಶಾಂತಿಯುತ ವಾತಾವರಣವನ್ನು ಜನ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.